ಪುಟ:ನಾಸ್ತಿಕ ಕೊಟ್ಟ ದೇವರು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಥೆ : ಐದು
ಸ್ವಸ್ತಿಪಾನ



ದುರುಬದುರಾಗಿ ಕುಳಿತ ಗೆಳೆಯರಿಬ್ಬರು ಬೀರ್ ತುಂಬಿದ ಮಗ್ಗುಗಳನ್ನು ಹಿಡಿದೆತ್ತಿದರು. 'ಸರಮನಿ'ಯ ಮೊದಲ ಹೆಜ್ಜೆಯಾಗಿ ಅವರ ತಲೆಗಳು ಪರಸ್ಪರ ಸಮಿಾಪಕ್ಕೆ ಬಾಗಿದುವು.
ಇಬ್ಬರೂ ಒಟ್ಟಾಗಿ ಅ೦ದರು :
"ಮೊದಲ ಭೇಟಿಯ ಸವಿ ನೆನಪಿಗೆ!”
ಸ್ವಸ್ತಿಪಾನ.
ಬದರಿಯ ದಪ್ಪ ಗಂಟಲಿನಿಂದ ಹೊರಟ ನಗೆಯೊಡನೆ ಚಿಕ್ಕಣ್ಣಯ್ಯನ ನಗು ಲೀನವಾಯಿತು.
[ಆ ಮೊದಲ ಭೇಟಿ ಹತ್ತು ಹದಿನಾರು ವರುಷಗಳಿಗೆ ಹಿಂದಿನ ಮಾತು. ಯುದ್ಧದ ಕಾಲ. ಬದರಿಯೂ-ಚಿಕ್ಕಣ್ಣಯ್ಯನೂ ವಿಮಾನ ಕಾರಖಾನೆಯಲ್ಲಿ ಆಗ ದುಡಿಯುತ್ತಿದ್ದರು. ಬಿಳಿಯ ಕೊರಳ ಪಟ್ಟಿಯ ಕಾರ್ಮಿಕರು. ಹಲವು ಸಹಸ್ರ ದುಡಿಮೆಗಾರರಲ್ಲಿ ಇವರು ಒಬ್ಬರು. ವಿಚಿತ್ರವೆಂದರೆ ಮೊದಲ ಬಾರಿ ಪರಸ್ಪರರನ್ನು ಅವರು ಕಂಡುದು, ಪರಿಚಿತ ರಾದುದು, ಕಾರಖಾನೆಯಲ್ಲಲ್ಲ-ಪಾನಮಂದಿರದಲ್ಲಿ. ಆಗ, ಎಲ್ಲಿಯೂ ಜಾಗ ದೊರೆಯದೆ ವಿಪರೀತ ಗದ್ದಲ. ಒಂಟಿಯಾಗಿ ಬರುವುದೇ ರೂಢಿಯಾಗಿದ್ದ ಚಿಕ್ಕಣ್ಣಯ್ಯ ಮೂಲೆಯ ಒಂದು ಮೇಜನ್ನು ಆಕ್ರಮಿಸಿದ್ದ. ಆಗಂತುಕನೊಬ್ಬ-ತನ್ನದೇ ವಯಸ್ಸಿನ ಯುವಕ- ಆ ವಿಶಾಲಭವನವನ್ನು ಹೊಕ್ಕು, ಆತ್ಮವಿಶ್ವಾಸದ ಠೀವಿಯಿಂದ ಸುತ್ತಲೂ ನೋಡುತ್ತಲಿದ್ದುದು ಅವನಿಗೆ ಕಂಡಿತು. ಆ ವ್ಯಕ್ತಿಯ ದೃಷ್ಟಿ ಚಿಕ್ಕಣ್ಣಯ್ಯನ ಮೂಲೆಯತ್ತ ಹರಿಯಿತು. ಅಲ್ಲಿಗೆ ಅವನು ನಡೆದು ಬಂದ. ವಿನಯದಿಂದ, “ಇಲ್ಲಿ ಕೂತ್ಕೊಬಹುದೆ? ನಾನೊಬ್ಬನೇ ಇದೇನೆ” ಎಂದ. " ಧಾರಾಳವಾಗಿ, ನಾನೂ ಒಬ್ಬನೇ ಇದೇನೆ” ಎಂದು ಉತ್ತರವಿತ್ತ ಚಿಕ್ಕಣ್ಣಯ್ಯ. ಆರಂಭ