ಪುಟ:ನಾಸ್ತಿಕ ಕೊಟ್ಟ ದೇವರು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿಪಾನ

೬೯

ಅಂಗಡಿಯನ್ನು ಮಗನ ಉಸ್ತುವಾರಿಗೊಪ್ಪಿಸಿ, ಬೆಳುದಿಂಗಳು ಹರಡ ತೊಡಗಿದ್ದ ಸಮುದ್ರ ತೀರಕ್ಕೆ ಬದರಿಯೊಡನೆ ಬಂದು, ದಯಾನಂದ ಸಾವ್ಕಾರ್ರ ಕತೆಯನ್ನು ಆ ವ್ಯಾಪಾರೀ ಮಿತ್ರ ಹೇಳಲಾರಂಭಿಸಿದ.
ಕಡು ಬಡವನಾಗಿ ಬದುಕು ಆರಂಭಿಸಿ ಕೋಟ್ಯಧೀಶನಾಗಿರುವ ವ್ಯಕ್ತಿ, ದಯಾನಂದ ಸಾಹುಕಾರರು. ಇಪ್ಪತ್ತನೆಯ ವಯಸ್ಸಿನಲ್ಲಿ ಅವರು, ಕಾರವಾರದಲ್ಲೇ ತಮ್ಮ ಅಣ್ಣನ ಅ೦ಗಡಿಯಲ್ಲಿ ದುಡಿಯುತ್ತಿದ್ದರು. ಆಗ ಅವರ ಪತ್ನಿ, ಚೊಚ್ಚಲ ಹೆರಿಗೆಯ ಅವಾಂತರದಲ್ಲಿ ಸತ್ತ ಶಿಶುವಿಗೆ ಜನ್ಮವಿತ್ತು, ತಾನೂ ಅಸು ನೀಗಿದಳು. ಅ೦ದಿನಿಂದ ದಯಾನಂದರು ಮನೋರೋಗಕ್ಕೊಳಗಾದರು, ಕುಡಿದರು. ಆ ಕುಡಿತ, ಸಂತೋಷ ಪಡುವುದಕ್ಕಲ್ಲ-ದುಃಖವನ್ನು ಮರೆಯುವುದಕ್ಕೆ. ಅಣ್ಣ, ತಮ್ಮನನ್ನು ಮನೆಯಿಂದ ಹೊರ ಹಾಕಿದ. ದಯಾನಂದ, ಹಳ್ಳಿ ಗುಡ್ಡಗಳಲ್ಲಿ ಅಲೆದು ಅಡವಿಯಲ್ಲಿ ನೆಲಸಿದರು. ಮುಂದೆ ಅವರ ಹೊಸ ಜೀವನ ಶುರುವಾಯಿತು. ಸಣ್ಣ ಪ್ರಮಾಣದಲ್ಲಿ ಆರಂಭಿಸಿ, ಮರಮಟ್ಟಗಳ ವಾಣಿಜ್ಯ ಲೋಕದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿಯುಳ್ಳ ಉದ್ಯಮ ಕಟ್ಟಿದರು.
ಹೆಂಡತಿ ಸತ್ತಂದಿನಿಂದ ಮೊದಲ್ಗೊಂಡು ಅವರು ಮದ್ಯ ಸೇವಿಸದದಿನವಿಲ್ಲ. ವ್ಯವಹಾರವನ್ನೆಲ್ಲ ಮಧಾಹ್ನದೊಳಗಾಗಿ ಮುಗಿಸಿ, ಆಮೇಲೆ ಕುಡಿಯತೊಡಗುತ್ತಿದ್ದರು. ಅವರಿಗೆ ಮತ್ತೊಂದು ಮದುವೆ ಮಾಡಿಸಬೇಕೆಂದು ಎಷ್ಟೊಂದು ಜನ ಪ್ರಯತ್ನ ಪಟ್ಟರು! ಊಹೂಂ. ಯಾವ ಬಂಧನವೂ ಇಲ್ಲದ ಹೆಮ್ಮರವಾಗಿ ಅವರು ಬೆಳೆದರು. ಹೀಗೆ ನಾಲ್ವತ್ತು ವರ್ಷಗಳ ಕಾಲ ಅವರು ದುಡಿದರು, ಕುಡಿದರು. ಮೊದಲಿನ ಕೆಲ ವರ್ಷಗಳನ್ನು ಬಿಟ್ಟರೆ ಮುಂದೆ ಅವರು ಕುಡಿದದ್ದೆಲ್ಲಾ ರಾಜಯೋಗ್ಯವಾದ ಪೇಯ. ಅಪ್ಪಟ ವಿದೇಶೀ. ಮಧಾಹ್ನದವರೆಗೆ ಅವರ ಜತೆಯಲ್ಲಿರುತ್ತಿದ್ದವರು, ಹನ್ನೆರಡು ದಾಟಿದ ಬಳಿಕ ಅವರ ಹತ್ತಿರ ಸಾರುತ್ತಿರಲಿಲ್ಲ. ಅವರೆದುರು ನಿಲ್ಲುವ ಧೈರ್ಯವೇ ಯಾರಿಗೂ ಇರಲಿಲ್ಲ.
 ಅಂಥಾದ್ದರಲ್ಲಿ ಮದ್ಯಪಾನ ನಿಷೇಧದ ಮಸೂದೆ ಬಂತು. ಅದು ಶಾಸನವಾದಮೇಲೆ ದಯಾನಂದರ ಗತಿ ಏನು ? ಎ೦ದು ಅವರ ಆತ್ಮೀಯರೆಷ್ಟೋ ಜನ ಗಾಬರಿಗೊಂಡರು. ಆರೋಗ್ಯದ ಕಾರಣದಿಂದ ಪರ್ಮಿಟ್ ದೊರಕಿಸಿಕೊಳ್ಳುವುದೇನೂ ಕಷ್ಟವಿರಲಿಲ್ಲ. ಒಂದು ಅರ್ಜಿಗೆ ಸಹಿ