ಪುಟ:ನಿರ್ಮಲೆ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲ ವನು, ಅವನ ತಂದೆಯು ತನ್ನ ಮಗನು ಊರನ್ನು ಬಿಟ್ಟಿರುವುದಾಗಿಯೂ, ತಾನ ಜಾಗ್ರತೆಯಾಗಿಯೇ ಹೊರಡುವುದಾಗಿಯೂ ಸತ್ರವನ್ನು ಬರೆದಿರು ವನು. ನಿರ್ಮಲೆ:-ಹಾಗೇನು ? ನನಗೆ ಈ ಸಂಗತಿಯು ಇನ್ನೂ ಮೊದಲೇ ತಿಳಿದಿದ್ದರೆ ಚೆನ್ನಾಗಿತ್ತು, ದೇವರೆ ! ನನ್ನ ನಡೆನುಡಿಗಳು ಯಾವ ರೀತಿ ಯಲ್ಲಿರಬೇಕು ? ಅವನಲ್ಲಿ ನನಗೆ ಅಕ್ಕರೆಯೇ ಹುಟ್ಟಲಾರದು. ಇದೇನು ವ್ಯಾಪಾರವೆ? ಬರುವುದು, ಮಾತನಾಡುವುದು, ಮದುವೆಯ ವಿಚಾರವನ್ನು ಗೊತ್ತು ಮಾಡುವುದು ? ಸರಿ! ಸರಿ!! ಸ್ನೇಹಮಾಡಿಕೊಳ್ಳಲಾಗಲಿ, ಗುಣಾವ ಗುಣ ಮಾನಮತ್ಯಾದೆಗಳನ್ನು ತಿಳಿಯಲಾಗಲೀ, ಅವಕಾಶವೇ ಇರುವಂ ತಿಲ್ಲವಲ್ಲ ? ದೇವ:-ಮಗು! ನಿನ್ನ ಇಷ್ಟಕ್ಕೆ ,ರೋಧವಾಗಿ ನಡೆವುದು ನನಗೂ ಹಿತವಿಲ್ಲ. ನಾನು ಪದೇಪದೇ ವಿಜಯಪಾಲನೆಂಬ ನನ್ನ ಮುಖ್ಯಮಿತ್ರನ ವಿಚಾರವನ್ನು ಮಾತನಾಡುತ್ತಿರಲಿಲ್ಲವೆ ? ಅವನ ಮಗನಾದ ರಾಮವರ್ಮ ನಿಗೇ ನಿನ್ನ ನ್ನು ಕೊಟ್ಟು ಮದುವೆ ಮಾಡಬೇಕೆಂದಿರುವೆನು, ರಾಮವರ್ಮನು ವಿದ್ಯಾವಂತನು, ಮುಂದೆ ರಾಜ್ಯಾಧಿಕಾರವನ್ನು ಮಾಡುವನು. ಅನೇಕರು ಅವನ ಜಾಣ್ಣೆಯನ್ನು ವಿಶೇಷವಾಗಿ ಕೊಂಡಾಡುತ್ತಿರುವರು ಅವನನ್ನು ನಾನೂ ಚನ್ನಾಗಿ ಬಲ್ಲೆನು. ನಿರ್ಮಲೆ: -- ಆಹಾ! ದೇವ:- ಅವನು ಒಹಳ ಉದಾರಿ. ನಿರ್ಮಲೆ:ಹಾಗಾದರೆ, ಅವನಲ್ಲಿ ನನಗೆ ಪ್ರೇಮವೂ ಹುಟ್ಟಿತು. ದೇವ:--- ಯೌವನಸ್ಥೆ, ಜತೆಗೆ ಲಕ್ಷಣವಂತ. ನಿರ್ಮಲೆ:ಅವನಲ್ಲಿ ನನಗೆ ಅಕ್ಕರೆಯು ಹುಟ್ಟುವುದೇ ನಿಜ. ದೇವ:--ಬಹಳ ಸ್ಪುರದ್ರೂಪಿಯ ಅಹುದು. ನಿರ್ಮಲೆ:- ಪ್ರಿಯಪಿತನೇ! ಇನ್ನೇನನ್ನೂ ಹೇಳಬೇಡ, ಇನ್ನು ಅವನು ನನ್ನ ವನೇ ! ಅವನನ್ನು ವರಿಸಲೇಬೇಕು.