ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವ|| ಎಂದೊದಿದ ಭಟ್ಟರ್ಗೆ ತುಡಲಾರ್ಪನಿತು ಮಣಿಭೂಷಣಂಗಳ ನುಡಲಾರ್ಸನಿತು ಪಟ್ಟಾಂಬರಂಗಳಂ ಮೊಟ್ಟೆಗಟ್ಟಿ ಪೊತ್ತುಕೊಂಡು ಪೋಗ ಲಾರ್ಸನಿತು ಪೊನ್ನುಮನಿತ್ತು ನೀಮೆತ್ತಣಿಂ ಬಂದಿರಲ್ಲಿಗೆ ಪೋದಸಿರೆಂಬುದು ಕುಚಕಲಕನೆಂದಂ:-ವಂಶವಿಷಯದೊ ಮಾಗಧಿಯೆಂಬ ಪೊಳಲನಾಳ್ಯ ರಕ್ತಾಕ್ಷನಂಬರಸಂಗಂ ಸುಮಿತ್ರೆಯೆಂಬರಸಿಗಂ ರೋಹಿಣಿಯೆಂಬ ಮಗ ೪ಾದಳ' ಅತಿ ಭುವನಸೌ೦ದರ್ಯಸಂಕೇತಭೂಮಿಯಪ್ಪ ಭಾಮಿನಿಯ ಕ್ಷಂ ಗಾರಸ್ವಯಂವರಕ್ಕೆ ಜರಾಸಂಧ ಚಕ್ರವರ್ತಿಯುಂ ಸಮುದ್ರ ವಿಜಯಂ ಮೊ ದಲಾದ ಮಂಡಳಿಕರುಂ ನೆರೆದರ್‌ | ಇವರ ಬೇಡುವೆವೆಂಬ ಬಗೆಯಿಂ ಬಂ ೧೦ ನಿಭವನಕ್ಕೆನಾನಾ ರುಮಲ ಬೇಡದಂತು ಬೇಡಿದನಿತನಾಮೆ ಕು ಡುವಂತುಂ ಕೊಟ್ಟೆ ನೀನೆ ವಾಸಿಯೆಂದು ಪೊಗಟ್ಟು ಪೋದರ್ ಇತ್ಯ ವಸುದೇವ ನಾವೊ ಪೊಟ್ಟಾಗಿ ಪರ್ಣಲಘುವಿಕಂ ಸುಪರ್ಣನಿಂ ಬೇಗವಾಗಿ ಮಾ ಗಧಿಗೆ ಪೋಗಿ ಪ್ರಾಕೃತಕಾವ್ಯದಂತೆ ಸಹಜಸೌಭಾಗ್ಯಭಂಗಿಭಾವಾಲಂಕಾರ ದಿನಲಂಕೃತನಾಗಿ ಸ್ವಯಂವರಮಂಟಪವಲ ಪುಗುವುದುಂjಆಗಳಾಸಯಂ ವರಸಭೆಯಾಗ ವಾದಕಸಂಪ ದಾಯದೊಳ್ ಒರ್ವ ಪಾಣವಿಕನ ಹೆಗಲ ಪಣ ವಮಂ ತನ್ನ ಪೆಗಲೊಳ್ ತಗು ಕೊ೦ಡು ಮಜುಂ ತೆಕದ ಲಯದೊಳ ಮನಿತೆ ಜತಿಯೊಳಂ ವಿವಿಧವಾದ್ಯ ವಿಧಿಯೊಳಂ ಮಧುರಾತಿಮಧರಮಂ ಚ ತಾತಿಚಿತ್ರಮುಮಾಗೆ ಬಾಜಿಸುವ ವಾದ್ಯ ವಿದ್ಯಾಧರನ ವಾದನವೈ ದಗ್ನಿಗಂ ಮರುಳೊಂಡು ಗಂಡಗಾಡಿ ಗಂಡುವಟ್ಟಂಗೊಂಡು ಸಯಂವರಸಂಭ ಮಮುಂ ರಾಜಪುತಿಯ ಕೈಗೆ ಮಾಲೆಯೊಂದು ಬಂದ ಭರಮಂ ಮೆಲುಕಿದು ನೆರೆದ ರಾಜಲೋಕಮೆಲ್ಲಂ ರಾಜಸುತೆಯನೀಡಾಡಿ ಬಂದು ದೊಮ್ಮಳಿಸಿ ಮಮ್ಮ'ಗೊಂಡು ನೋಡುತ್ತು ಮಿರ್ಪುದುಮಲ್ಲಿಗೆ ಕಾತರಜಿತ್ತೆಯಾಗಿ ಕಿವಿಯಳದುವರಿಯೆ ಕೇಳು ಮನವೆಳದುವರಿಯೆ ಬಂದು ಕಣ್ಣೆಳದು ವರಿಯೆ ನೋಡಿ... ಮಾಡುವ ಗೀತಮಂ ಜತಿಗಳ೦ ಶ್ರುತಿ ಸೂಡೆ ವಿಲಾಸಲಕ್ಸಿಯಂ | ಸೂಡೆ ವಿಲೋಚನೋತ್ಸಲದಳಂ ಪುಳ ಕಾಂಕರಸಂಕುಳಂಗಳಂ || ಸೂಡೆ ನಿಜಾಂಗವಲ್ಲಿ ಮನಮುತ್ಸವದಿಂ ಕುಸುಮಾಸ್ತಮಾಲೆಯಂ | ಸೂಜಿ ವಿರೋಧಿರಾಜಕುಳರಾಹುಗೆ ರೋಹಿಣಿ ಮಾಲೆ ಹೂಡಿದಳ 180p