ಪುಟ:ನೋವು.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೋವು

ಇಲ್ಲಿ ಪರಾಜಿತನಾದುದಷ್ಟೇ ಸತ್ಯ. ಅದೊಂದು ಕಳಂಕ. ತಾನು ಗಂಡಸು. ಅದನ್ನು ತಾನು ತೊಡೆಯಬೇಕು. ತೊಡೆ-'] " అಯ್ಯೋ ఆ ಮೂಲೇಲಿ ನೀರಿದೆಯಲ್ರೀ. " ಅದೇನ್ಮಾಡುತ್ತೆ ? ಈ ಕಡೆ ನೋಡು ಹುಲ್ಲಿನೆ ಹಾಸಿಗೆ." " ಇಳಿಯೋದು ಯಾತಕ್ಕೇಂತ ?" " ಬಾ, ಹೇಳ್ತೀನಿ." "......" " ಇಲ್ಲಿ ಕೂತ್ಕೊಳ್ಳೋಣ." "......" " ನನ್ನ ಎದೆಗೆ ಒರಕ್ಕೊ..." " ಎಂಥ ಆಸೆಯಪ್ಪ ನಿಮ್ಮದು. ಭಯವಾಗುತ್ತಲ್ರೀ ಇಲ್ಲಿ. .." ನಾನಿದೀನಿ ಸಾರತೀ..." " ಹೆಸರು ಬದಲಾಯಿಸ್ತೀರಲ್ರೀ ನಿವು..." " ಸಮ್ಮೂ, ಸಾರೂ... ಯಾವ ಹೆಸರಿಟ್ಟರೂ ನೀನು ನನ್ನ ಗುಲಾಬಿಯೇ..." ತುಟಿಗಳಿಗೆ ತುಟಿ. ಎದೆಯ ಮೇಲೆ ಕೈ. ಕೊರಳಿಗೆ ಕೈಗಳ ಹಾರ. " ಸ್ವಲ್ಪ ಹೊತ್ತು ಮಲಕೊಂಡಿರೋಣ." " ಥೂ, ಬೇಡ." " ಸುಮ್ನೆ ಒಂದೈದ್ನಿ... " " ಯಾರಾದರೂ ನೋಡೊಲ್ವೆ ಅಂದ್ರೆ ?" " ಒಂದು ನರಹುಳವೂ ಇಲ್ಲಿಗೆ ಬರೋಲ್ಲ." ಹುಲ್ಲಿನ ಹಾಸಿಗೆ ಕಾವೇರಿತು. ಪದ್ಮನಾಭನ ಉಸಿರು ಬಿಸಿಯಾಯಿತು. ಗಂಟಲು ಗೊರಗೊರವೆಂದಿತು. ಆರತಿಯನ್ನು ಸುಭದ್ರೆಯಾಗಿ ಮಾಡಿ ಆ ದೇಹವನ್ನು ಆತ ಬಿಗಿದಪ್ಪಿ ಕೊಂಡ.

     ಆರತಿಯ ಬೇಡ ಬೇಡ ಪದ ಕ್ರಮೇಣ ಕ್ಷೀಣವಾಯಿತು...

...ಮೂರು ಲೋಕಗಳನ್ನು ಗೆದ್ದ ದೊರೆಯಾಗಿ ಪದ್ಮನಾಭ ಹೆಂಡತಿಯೊಡನೆ ಗುಡ್ಡ ವಿಳಿಯತೊಡಗಿದ. " ಸೀರೆಯೆಲ್ಲಾ ಪುಡಿ, ಪುಡಿ. ನೀವು ನಿರ್ಲಜ್ಜರು. ಕತ್ತಲೆಯಾಗೋವರೆಗೂ ಇಲ್ಲಿಯೇ ಇರೋಣ. ಮನೇಲಿ ಮುಖಿ ತೋರಿಸೋಕಾಗೊಲ್ಲ," ಎಂದಳು ಆರತಿ. " ಬಾ ಬಾ, ನೀನೊಬ್ಬಳು. ಯಾರಿಗೆ ಏನು ಗೊತ್ತಾಗುತ್ತೆ  ?” ಎಂದು ಪದ್ಮನಾಭ ಮುಂದಕ್ಕೆ ಹೆಜ್ಜೆ ಇರಿಸಿದ. ...ಮನೆಯಲ್ಲಿ ಅವರಿಬ್ಬರನ್ನೂ ಕಾಮಾಕ್ಷಿ ದುರದುರನೆ ನೋಡಿದಳು.

        ಆ ರಾತ್ರೆ ಪದ್ಮನಾಭನಿಗೆ ಗಾಢ ನಿದ್ದೆ. ಆರತಿ ಪಿಳಿಪಿಳಿ ನೋಟದಿಂದ ಛಾವಣಿ ದಿಟ್ಟಿಸುತ್ತ ನಡುರಾತ್ರೆಯವರೆಗೂ ಕಾಲ ಕಳೆದಳು.
         ಮಾರನೆಯ ದಿನ ಗೋಪಾಲ ಸಂಸಾರ ಸಮೇತನಾಗಿ ಸೋಮಪುರದಿoದ ಬಂದ.