ಪುಟ:ನೋವು.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯ ನೋವು ಧಪ್ ಧಪ್ ಸದ್ದು. "ಹೊಡಿ, ಪರವಾಗಿಲ್ಲ. ಮಾನ ಕಳೀದಿದ್ದರೆ ಸಾಕು.” "ಮಾನಕ್ಕೆ ಬೆಂಕಿ. ನನಗೆ ಸರ ಬೇಕು.” "ಬದಲಿ ಮಾಡಿಸ್ಕೊಡ್ತಾರೆ. "ನಾಲ್ಕೆಳೇದು ಬೇಕು. ಸುಬ್ಬನರಸಯ್ಯನ ಹೊಂಡ್ತಿ ಹಾಕ್ಕೋತಾಳಲ್ಲ ಅಂಥಾದ್ದು." [ಅದು ಬಹಳ ದಿನಗಳ ಬಯಕೆ ಕಾಮಾಕ್ಷಿಯ ತಾಯಿಯದು. ಹಳೆಯ ಕಾಲದ ಕಾಸಿನ ಸರದ ಮೇಲೆ ಅವರಿಗೆಂದೋ ಬೇಸರ ಬಂದಿತು. ಆಸೆ ಕೈಗೂಡಲು ಎಂಥ ವೇಳೆ ಒದಗಿತು. ಈಗ!] "ಹಾಗೆಲ್ಲ ಕೇಳಬಾರ್ದು, ಸಾತೂ. ಕಾಸಿನಸರಕ್ಕೆ ಕಾಸಿನಸರ." "ಆಗೋಲ್ಲ. ಆಗೋದಿಲ್ಲ. ಅಂದೆ. ಸುಬ್ಬನರಸಯ್ಯನ ಹೊಂಡ್ತಿ ಹಾಕೋತಾಳಲ್ಲ, ಅಂಥಾದ್ದೇ ಬೇಕು." "ಆಗಲಿ. ಸಾತೂ. ಆಗಲಿ..." "ನಗರದಲ್ಲಿ ನಮ್ಮನೇಲೇ ಮಾಡಿಸ್ಬೇಕು." "ಹೂಂ." "ಅಶ್ವತ್ಥನಾರಾಯಣ ಶೆಟ್ರ ಅಕ್ಕಸಾಲಿಗ ಇದಾನಲ್ಲ...." "ಆಗಲಿ. ಅವನನ್ನೇ ಕರೆಸೋಣ." "ನಗರಕ್ಕೆ ಹೋದ್ಮೇಲೆ ಅಂಬಿಗರ ಮಿಂಡ ಅಂದಿರೋ ಧೂಳೆಬ್ಬಿಸಿಬಿಟ್ಟೇನು !" "ಉಂಟೆ ಸಾತೂ?" "ಕರಕೊಂಡ್ಬನ್ನಿ ನಿಮ್ಮ ಬೀಗರ್ನ ಮಾತು ಕೊಡ್ಲಿ." " ಛೆ! ಛೆ ! ಬೇಡ ಸಾತೂ. ಆತ ಮಾಡಿಸ್ಕೊಡ್ದೇ ಇದ್ರೆ ಗೋವಿಂದರಾಯ ಇಲ್ವೆ ? ಕಾಮಾಕ್ಷಿ ಇಲ್ವೆ?" "ಅವರ್ಯಾತಕ್ಕೆ ? ಜವಾಬ್ದಾರಿ ಗಂಡಸಾದ ನನ್ನ ದೂಂತ ಹೇಳ್ರಿ." “ ಹೂ೦.. ಸಾತೂ.. ನನೇ ಜವಾಬ್ದಾರ. ಆಯ್ತೆ?" ಮತ್ತೆ ಕೆಲ ನಿಮಿಷಗಳ ಮೌನ. ಕಾಮಾಕ್ಷಿ ಬಲ್ಲಳು : ಗೆದ್ದ ಸಂತೋಷದಲ್ಲಿ ತಾಯಿ ಒಂದು ನಿಮಿಷ ಕಣ್ಣೀರು ಸುರಿಸಿರಬೇಕು. ಕದ ತೆರೆಯಿತು. ಅಂಗೈಯಿಂದ ಮುಖದ ಬೆವರೊರೆಸಿಕೊಳ್ಳುತ್ತ ವಿಷ್ಣುಮೂರ್ತಿ ಮಕ್ಕಳನ್ನು ನೋಡಿ ಅ೦ದರು : " ಇನ್ನೂ ಇಲ್ಲೇ ಇದೀರಾ? ಹೋಗಿ ತಿ೦ಡಿಗೆ ನಿಮ್ಮಮ್ಮನೂ ಬರ್ತಾಳೆ ." ಉಪಾಹಾರ ನೀಡುವ ಹೊಣೆಯನ್ನು ಜಲಜಾ ನಿರ್ವಹಿಸಿದಳು. ಕಾಮಾಕ್ಷಿಯ ತಾಯಿ ಏಳುವ ಲಕ್ಷಣ ಕಾಣಿಸಲಿಲ್ಲ. "ಗಜಾನನನ ಹೋಟ್ಲಿಗಿಷ್ಟು ಹೋಗ್ಬಗ್ರೀನಿ," ಎಂದು ನುಡಿದು, ವಿಷ್ಣುಮೂರ್ತಿ ಹೊರಬಿದ್ದರು. ಆ ಒಂಟಿ ನಡಿಗೆಯಿಂದ ತಮಗೆ ಹಿತವಾಗುವುದೆಂದು ಅವನ ಭಾವನೆ. ದೊಡ್ಡಮ್ಮ ಬೀಗತಿಯ ಬಳಿಗೆ ಬಂದು, ತಮ್ಮ ವಯೋಮಾನವನ್ನು ಮರೆತು,