ಪುಟ:ನೋವು.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90% ನೋವು 214 ನವರಿಗೆ ಆಶ್ಚರ್ಯವಾಯಿತು. ಪಂಚಾಯತಿಯಲ್ಲಿ ಆ ಮಾತು ಬಂದಿರಲಿಲ್ಲ. ಯಾರ ಸಲಹೆ ಯನ್ನೂ ಶಾಮೇಗೌಡರು ಪಡೆದಿರಲಿಲ್ಲ. ಶ್ರೀನಿವಾಸಯ್ಯ ಬಲ್ಲರು : ತಮ್ಮೊಡನೆ ಶಾಮಣ್ಣ ಆಪಾಲೋಚನೆ ನಡೆಸುವುದಂತೂ ಗತಯುಗದ ಮಾತು. ರಸ್ತೆ ನಿರ್ಮಾಣದ ಕಾರ್ಯ ಕ್ರಮ ರೈತರ ಮೂಲಕ ಗೋಪಾಲನಿಗೆ ತಿಳಿದಿತು. ಆದರೆ ತಂದೆಗೆ ಅದನ್ನು ವರದಿ ಮಾಡುವ ಅಗತ್ಯ ಅವನಿಗೆ ಕಂಡಿರಲಿಲ್ಲ. ಅಂಥ ಯೋಚನೆ ಗೌಡರಿಗೆ ಇದೆ ಎಂಬುದು ಗೋವಿಂದನಿಗೆ ಗೊತ್ತಿದ್ದಿತಾದರೂ ಕಾರ್ಯಾರಂಭ ಇಷು ಬೇಗನೆ ಆಗಬಹುದೆಂದು ಅವನು ನಿರೀಕ್ಷಿಸಿರಲಿಲ್ಲ. ಒಮ್ಮೆ ನಗರಕ್ಕೆ ಹೋದ ಆತ ಹಿಂತಿರುಗಿದಾಗ ನಾಲ್ಕು ದಿನಗಳಾಗಿದ್ದವು. ಮಧ್ಯಾಹ್ನ ಹಳ್ಳಿಯನ್ನು ಸಮಿಾಪಿಸುತ್ತಿದ್ದಂತೆ ಆತ ದಾರಿ ಕಡಿಯುತ್ತಿದ್ದ ರೈತರನ್ನು ಕಂಡ. ಗೋವಿಂದನನ್ನು ನೋಡಿದೊಡನೆ ರೈತರು ಕೆಲಸ ನಿಲ್ಲಿಸಿ, ಎಲೆ ಹಾಕಿಕೊಳ್ಳಲು, ಬೀಡಿ ಸೇದಲು ತೊಡಗಿದರು. ಅಬ್ದುಲ್ಲನಿಗೆ ಗೋವಿಂದನೆಂದ : " ನೀನೇ ಮೇಸ್ತ್ರೀಂತ ಕಾಣುತ್ತೆ." ಹಣೆಯ ಬೆವರನ್ನು ಬೆರಳಿನಿಂದ ಬಾಚಿ ತೆಗೆದು ಅಬ್ದುಲ್ಲನೆಂದ: "ಊಂ.ಗೋವಿಂದಪ್ನೋರೆ". ಹ್ಯಾಗೆ ಗೋತ್ಮಾಡಿದಾರೆ? ಕಂಟ್ರಾಕ್ತೋ,ದಿನಗೂಲಿನೊ?"

"ಅದ್ಯಾವುದೂ ತಿಳೀದು."
"ಹುಚ್ಚಪ್ಪ ! ಹಾಗಂದ್ರೇನೋ ? ಸರಕಾರಕ್ಕೆ ಹೇಳಿ ಅವರಿಂದ್ಲೇ  ಈ ಕೆಲಸ ಮಾಡಿ ಸೋಣಾಂತಿದ್ದೆ ನಾನು. ನೀನೇ ಕಾಂಟ್ರಾಕ್ಟ್ ಹಿಡೀಬೌದಾಗಿತು.ಸರಕಾರದ ದುಡ್ದು  ರೈತರಿಗೂ ಚೆನ್ನಾಗಿ  ಸಂಪಾದ್ನೆಯಾಗಿತು." 
"ನನಗೆ ಅದೊಂದೂ ಗೊತ್ತಿಲ್ಲ ಆಯ್ನೋರೆ."
"ಕತ್ತೆ ದುಡಿದ ಹಾಗೆ ದುಡಿಯೋದೊಂದೇ ಗೊತು ನಿಮಗೆ." 

" ಅಂಗಂಬ್ಯಾಡಿ. ನೂರು ವರ್ಸ ನಾನು ದುಡಿದ್ರೂ ಗೌಡರ ಸಾಲ ತೀರಾತಾ ?" " ಪಾಪ, ಪಾಪ ! ಅಲ್ವೆ ? ನೀನೊಂದು ಮಗು ಕಣಯ್ಯ. ಬೆಟ್ಟು ಬಾಯಿಗಿಟ್ಕೊಂಡ್ರೆ ಚೀಪ್ತಿಯೊ ಇಲ್ವೊ ?" " ಎoಗಾದ್ರೂ ಯೋಳಿ ಪರವಾಗಿಲ್ಲ !"

ಅಲ್ಲಾ, ನೀನು ಅವನನ್ನ -" ಗೋವಿಂದನ  ಮಾತು ಅರ್ಧಕ್ಕೆ ನಿಂತಿತು. ' -ಹ್ಯಾಗೆ ,ಕತು  ಹಿಸುಕಿ ಕೊಂದೇಂತ? ಎಂದು ಹೇಳಬೇಕೆಂದಿದ್ದ ಆತ. ವಿವೇಕೋದಯವಾಗಿ, ನಾಲಿಗೆಯ ತುದಿಗೆ ಬಂದಿದ್ದ ಪದಗಳು ಅಲ್ಲಿಯೇ ಇಂಗಿಹೋದುವು.

ಉಗುಳು ನುಂಗಿ ನಿಧಾನವಾಗಿ ಗೋವಿಂದನೆಂದ : "ಗೌಡರಿಗೆ-ಪಾಪ- ಏನಾದರೂ ಮಾಡ್ಬೇಕೂಂತ ಆಸೆ." " ಅವರ ಮನೆಯಾಗೆ ಸುಬಕಾರ್ಯ-" * ಗೊತ್ತೂಕಣಯ್ಯ, ನೀರಿಗೆ ಬಿದ್ದಲ್ಲ, ಆ ಸುಬ್ಬೀ ಮದುವೆ." ಆದರೆ