ಪುಟ:ನೋವು.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నేJణలవా அ05 “ಚಂಜೇನಾಗೆ ಬರಬೈದು ಅಲ್ಲವಾ ?” “ రె ఆర్వెళ్లు ఛెంటనే ఆదాకెు," ఎందా ರಂಗಣ್ಣ, + ಸಿಹಿ ಅಡುಗೆಯ ಹೊಣೆಯನ್ನು ಹೊತ್ತಿದ್ದ ಗಜಾನನ, ಆಗಲೇ ಕಾರನಿರತನಾಗಿದ್ದ. ಗೌಡರ ಮನೆಯಲ್ಲಿ ಮದುವೆ ಇರುತ್ತ ಹೋಟೆಲಿಗೆ ಬರುವವರು ಯಾರು ?

  • ಇಷ್ಟರ ಮೇಲೂ ಯಾರಾದರೂ ಬಂದ್ರೆ ಒಂದು ಲೋಟ ಕಾಫಿ ಮಾಡಿ ಕೊಟ್ಟಿಡು." ಎಂದಿದ್ದ ಆತ ಜಲಜೆಗೆ.

ಅವಳೋ, ಕಾಮಾಕ್ಷಿಯಿಂದೇನಾದರೂ ಸಂದೇಶ ಬಂದೀತೇ ಎಂಬ ನಿರೀಕ್ಷೆಯಲ್ಲಿದ್ದಳು. ಗೋವಿಂದರಾವ್ ಹಳ್ಳಿಯಲ್ಲಿರಲಿಲ್ಲ, ನಗರಕ್ಕೆ ಹೋಗಿ ಎರಡು ದಿನಗಳಾಗಿದ್ದುವು. ಈ. ಸಲ ಗಂಡ ಟ್ಯಾಕ್ಸಿ ತರುತಾನೆ; ತಾನು ನಗರಕ್ಕೆ ಹೋಗುತ್ತೇನೆ–ಎಂದಿದ್ದಳು ಕಾಮಾಕ್ಷಿ ಸಾಧ್ಯವಾದರೆ ತಾನೂ ಅವಳ ಜತೆ ಹೊರಟು ಬಿಡಬೇಕು ಎಂಬ ಆಸೆ ಜಲಜೆಗೆ ಹೊರಗೆ ಯಾರ ಪಾದದ ಸದ್ದಾದರೂ ಸರಿಯೆ, ಕಾಮಾಕ್ಷಿಯ ಮನೆ ಆಳು ಬೀರ ಬಂದನೇನೋ ಎಂದು ಆಕೆ ಕತು ಚಾಚಿ ನೋಡುತ್ತಿದ್ದಳು. 'ಚಂಜೆಗೆ ಬರಬೈದು, ನಿಜ. * ಆರೇಳು ಘಂಟೆಗೆ'; ನಿಜವೇ. ಆದರೂ, చేుధ్యాయ్నే ಕಳೆದೊಡನೆಯೇ ಗೌಡರು ಆಳುಗಳನ್ನು ದಿಬ್ಬಣ ಇದಿರ್ಗೊಳ್ಳಲೆಂದು ಅಟ್ಟಿದರು. ಮೂರು ಘಂಟೆ ಸುಮಾರಿಗೆ ದೊಡ್ಡ ಕಾರೊಂದು ನಗರದ ಕಡೆಯಿಂದ ಬಂದು ಟ್ಯಾರ್ ರಸ್ತೆಯಲ್ಲಿ ನಿಂತಿತು. ಆಲದ ಮರದ ಕೆಳಗೆ ರೈತರಿದ್ದರು. ಬಲದಿಕ್ಕಿನಲ್ಲಿ ಕಮಾನು. ಅದರ ಕೆಳಗಿಂದ ಹಳ್ಳಿಯ ಕಡೆಗೆ ಹರಿದಿತು ಹೊಸ ದಾರಿ. ದಿಬ್ಬಣದ ಕಾರೇ ಬಂದು ಬಿಟ್ಟಿತೇನೋ ಎಂದು ಶಂಕಿಸಿದ ರೈತರು, ಮಾತನಾಡಲು. ಪ್ರಯತ್ನಿಸುತ್ತಿದ್ದಂತೆ, ಚಾಲಕನ ಮಗುಲಲ್ಲಿ ಕುಳಿತಿದ್ದ ಗೋವಿಂದನನ್ನು ಕಂಡರು. ಹಲವರ ಮುಖಗಳರಳಿ ಹಲ್ಲುಗಳು ಕಾಣಿಸಿಕೊಂಡುವು. " ಗೋವಿಂದಪ್ರೋರು." ಗೋವಿಂದ ಹಿಂದಿನ ಸೀಟಿನಲ್ಲಿದ್ದವರ ಕಡೆಗೆ ಹೊರಳಿ, "ಬಲಕ್ಕೆ ತಿರುಗಿದರೆ ಕಣಿವೇ ಹಳ್ಳಿ, ಇವರೆಲ್ಲಾ ನಮ್ಮ ರೈತರು," ಎಂದ. ವಾಹನದ ತೀರಾ ಸಮಿಾಪಕ್ಕೆ ಬಂದವರನ್ನು ಉದ್ದೇಶಿಸಿ, * ಮುಟ್ಟೆಡೋ-ದೂರ! ನಿಂತ್ಯೋಳ್ಳಿ," ಎಂದು ಹುಬ್ಬ ಹಾರಿಸಿ ನುಡಿದ. ಹಿಂದೆ ಕುಳಿತಿದ್ದವರು ಮಧ್ಯ ವಯಸ್ಕರು. ಮುಚ್ಚಿದ ಕಾಲರಿನ ಕೋಟುಗಳು. ನೂಲಿನ ಎಳೆಯ ಚಿತಾರಗಳಿದ್ದ ಟೋಪಿಗಳು. ಒಬಾತ ಬಂಗಾರದ ಚೌಕಟ್ಟಿನ ಕನ್ನಕಡ ಧರಿಸಿದ್ದ. ಆತ ಹಿಂದಿಯಲ್ಲಿ ಡ್ರೈವರನಿಗೆ, " ರಸ್ತೆ ಹಾಗಿದೆ ನೋಡು," ಎಂದು ಆಜ್ಞಾಪಿಸಿದ. " ಪರವಾಗಿಲ್ಲ ಅನ್ನುತ್ತೆ," ಎಂದು ಡ್ರೈವರ್ ಉತ್ತರವಿತ್ರ, * బెణగిJERణ శాగాడారే." - ಕಪ್ಪ ಕಾರು-ಫ್ಲಿಮತ್-ಸದ್ದಿಲ್ಲದೆ ಹೊರಟು ಕಣಿವೇಹಳ್ಳಿಯ ದಾರಿ ಹಿಡಿಯಿತು. ಕಾಂಕ್ರೀಟ್ ರಸ್ತೆಯ ಮೇಲೆ ಓಡಿ ಅಭ್ಯಾಸವಿದ್ದ ಕಾರು, ಕಚ್ಚಾ ದಾರಿಯ ಹಳ್ಳತಿಟು ಗಳನ್ನು ಲಕ್ಷದಲ್ಲಿಟುಕೊಂಡು, ಸ್ವಲ್ಪ ಎಚ್ಚರದಿಂದ ಮುಂದುವರಿಯಿತು. ಗೋವಿ೦ದನೆ೦ದ :