ಪುಟ:ನೋವು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

ಹುಚ್ಚ ಬಹಳ ಅಳುಕಿದ್ದ.
" ಅಂಗನ್ಬಾರದು, ಒಡೆಯಾ, ಏನೋ ಆಸೆ. ನಾನು ಸತ್ಮ್ಯಾಕೆ ನನ್ನ ಐದ ಆ ಒಲದಾಗೆ ದುಡ್ಡು ಒಟ್ಟೆ 
ಒರಕೋತವ್ನೆ." 
" ನಿಜ, ಕಣಯ್ಯ. ಸಿದ್ದಪ್ಪ ಎಷ್ಟು ಕೇಳ್ತಾನೆ?"
" ಐನೂರು ರೂಪಾಯಿ."
" ಶಾನೇ ಜಾಸ್ತಿ." 
" ಮುನ್ನೂರಕ್ಕೆ ಒಪ್ಪಿಸ್ಬೋದ."
" ಸೊಸೈಟೀಲಿ ಹಣವಿಲ್ಲ. ಇಲ್ದೇ ನಿನಗೆ ಸಾಲ ಕೊಡ್ತಿದ್ದೆ."
" ಇಷ್ಟು ವರ್ಸ ಜೀವ ತೇದು ತೇದು ಮುನ್ನೂರು ಉಳಿಸಿವ್ನಿ, ಒಡೆಯಾ." 
"ಭಲೆ! ಹಾಗಿರ್‍ಬೇಕು ಸೊಸೈಟಿಲಾದ್ರೂ ಇಟ್ಟಿದ್ರೆ ಬಡ್ಡಿ  ಬರ್‍ತಿತ್ತಲ್ಲೋ.ಎಲ್ಲಿ___ ನೆಲದ ಕೆಳಗೆ ಹೂತಿಟ್ಟಿದ್ಯಾ?"
ಮುನಿಯ ಹೌದೋ ಇಲ್ಲವೋ ಎನ್ನುವಂತೆ ನಕ್ಕಿದ್ದ .ಉತ್ತರ ಕೊಟ್ಟಿರಲಿಲ್ಲ.
ತಾನು ಅಂದಿದ್ದೆ:
 " ಎಲ್ಲಾ ಸರಿ, ಮುನಿಯ. ಶಾನುಭೋಗರ್‍ನ ಹಿಡಿದು ಕಾಗದ ಪತ್ರ ಮಾಡ್ಕಾಂಡೆ ಅನ್ನು. ಸಿದ್ಧಪ್ಪನ ಒಕ್ಕಲಾಗಿ 
ಅಬ್ದುಲ್ಲ ಇದಾನಲ್ಲ. ಅವನನ್ನ ಎಬ್ಬಿಸಿ ಹೊಲ ನಿನ್ನ ವಶಕ್ಕೆ ಕೊಡ್ತಾನಂತೊ?"
"ಓ__"
" ಹಾಗಾದರೆ ಸರಿ, ಅಬ್ದುಲ್ಲ ಆಮೇಲೆ ತಕರಾರು ಮಾಡ್ಬಾರ್‍ದು ನೋಡು." -
" ಯಾಕ್ಮಾಡಾನು? ಯಾವೂರಿಂದ್ರೋ ಬಂದೋನು.. ಒಕ್ಕಲಾಗಿ ಇದಾನೆ. ಈ ಅಳ್ಳಿ ಬಿಟ್ಟ; 
ಇನ್ನೊಂದಳ್ಳಿಗ್‍." 
"ನಿಜ ಅನ್ನು," ಎಂದಿದ್ದ ಗೋವಿಂದ.
 ಮುಂದೆ ಕಾಗದ ಪತ್ರಗಳಾದುವು, ಸಿದ್ದಪ್ಪ ಹೊಲವನ್ನು ಮುನಿಯನಿಗೆ ಮಾರಿ ಸಂಸಾರ ಸಮೇತನಾಗಿ ಹಳ್ಳಿ ಬಿಟ್ಟು 
ನಗರಕ್ಕೆ ಹೋದುದೂ ಆಯಿತು. ಆದರೆ ಅಬ್ದುಲ್ಲ ಹೊಲವನ್ನು ಮುನಿಯನ ಸ್ವಾಧೀನಕ್ಕೆ ಕೊಡಲಿಲ್ಲ!
ಮುನಿಯ ಪಟೇಲರಿಗೆ ದೂರುಕೊಟ್ಟ. ಹಳ್ಳಿಯ ಪ್ರಮುಖರಿಗೆ ಹೇಳಿದ, ಪ್ರಯೋಜನ ವಾಗಲ್ಲಿಲ. 
ಹೊಲ ಉಳ್ಳವನಾಗಲು ಮುನಿಯ ಮಾಡುತ್ತಿದ್ದ ಯತ್ನದ ಬಗೆಗೆ ಯಾರೂ ಸಹಾನುಭೂತಿ ವ್ಯಕ್ತಪಡಿಸಲಿಲ್ಲ.
ಶಾಮೇಗೌಡರೆಂದರು: 
"ತಾಳಿದವ ಬಾಳುತಾನೆ, ಮುನಿಯ, ಒಸಿ ದಿನ ಓಗ್ಲಿ."
ಕೃಷ್ಟೇಗೌಡನೆಂದ: -

" ಮುಂಚೆ ಅಬ್ದುಲ್ಲ ಸಿದ್ಧಪ್ನಿಗೆ ಗೇಣಿ ಒಪ್ಪಿಸ್ತಿದ್ದ. ಇನ್ನು ನಿನಗೆ ಕೊಡ್ಲಿ."

ಆದರೆ ಮುನಿಯನಿಗೆ ಆ ಸಲಹೆ ಇಷ್ಟವಿರಲಿಲ್ಲ, ಸ್ವತಃ ತಾನೇ ಸಾಗುವಳಿ ಮಾಡಬೇಕೆಂಬ ಆಸೆ ಆತನಿಗೆ. -