ಪುಟ:ನೋವು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

ಶ್ರೀನಿವಾಸಯ್ಯ ಅಂದರು:
"ಸುಮ್ನಿರೋದು ಬಿಟ್ಟ ಇದೆಲ್ಲ ಯಾಕೋ ಕಟ್ಕಾಂಡೆ?" 
ಯಾರಿಗೂ ತಿಳಿಯದಂತೆ ಮುನಿಯ ಗೋವಿಂದನ ಬಳಿಗೆ ಬಂದಿದ್ದ.
"ದಾರಿ ಕಾಣ್ಸಿ, ಒಡೆಯಾ." 
ಗೋವಿಂದ ಆತನಿಗೆ ಕಾಣಿಸಿದ್ದು ನಗರದ ದಾರಿ. ವಕೀಲರೊಬ್ಬರ ಮನೆಗೆ ಪ್ರದಕ್ಷಿಣೆ ಹಾಕಿ ಆ ದಾರಿ ತಲಪಿದ್ದು 
ನ್ಯಾಯಸ್ಥಾನವನ್ನು.
ಕಾಗದದ ಮೇಲೆ ತನ್ನದಾಗಿದ್ದ ಹೊಲವನ್ನು ಮುನಿಯ ವೆಂಕಟಪ್ಪನಿಗೆ ಒತ್ತೆ ಇಟ್ಟು ಚಕ್ರಬಡ್ಡಿಯ ಮೇಲೆ ನೂರು 
ರೂಪಾಯಿ ಸಾಲ ಪಡೆದ. ಆ ಹಣದಿಂದ ಒಂದಂಶ ಗೋವಿಂದನಿಗೆ ಕಾಣಿಕೆಯಾಗಿ ಬಂತು. ಉಳಿದುದು ವಕೀಲರಿಗೆ 
ಸಂದಾಯವಾಯಿತು.
ಅಬ್ದುಲ್ಲನೂ ವಕೀಲರನ್ನು ನೇಮಿಸಬಹುದು; ಬೇಕಿದ್ದರೆ ಅವನಿಗೂ ಒಬ್ಬ ವಕೀಲರ ಪರಿಚಯ ಮಾಡಿಸಿಕೊಡಬೇಕು– 
ಎಂದುಕೊಂಡಿದ್ದ ಗೋವಿಂದ. ಆದರೆ ಅಬ್ದುಲ್ಲನಿಗೆ ಆ ವಿಷಯದಲ್ಲಿ ಆಸಕ್ತಿ ಇದ್ದಂತೆ ತೋರಲಿಲ್ಲ.
ಮುನಿಯನಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿ ಗೋವಿಂದನೇ ಒಮ್ಮೆ ಅಬ್ದುಲ್ಲನನ್ನು ಮಾತನಾಡಿಸಿದ. 
"ಏನಾದರೂ ಮಾಡ್ಬೇಕಪ್ಪ ನೀನು.”
ಅಬ್ದುಲ್ಲನ ಮಾತು ಕಟುವಾಗಿತ್ತು:
"ಎಂಡತಿ ಮಕಳ್ನ ಕೊಂಧ್ಹಾಕಿ ನಾನು ತಲೆ ಒಡ್ಕೊಳ್ಲಾ?" 
"ಹಾಗಲ್ಲ, ಅಬ್ದುಲ್ಲ."
"ಮತ್ತೆ?”
"ಮತ್ತೆ ಅಂದ್ರೆ? ನಗರಕ್ಕೆ  . ದೊಡ್ಡ ವಕೀಲರು ಯಾರನಾದರೂ ಕೇಳಿ ನೋಡ್ಬೇಕು."
"ಬ್ಯಾಡಿ ಅ. ನನಗೆ ಬ್ಯಾಡಿ ಅದೆಲ್ಲ.”
" ಸರಿ! ನೀನು ಹೊಲ ಬಿಡ್ಬೇಕೂಂತ ಕೋರ್ಟ್ನಲ್ಲಿ ನಾಳೆ ಆರ್ಡರಾದ್ರೆ?" 
"ಅಯ್ಯೋ ,ಬಿಡಿ ಬುದ್ದಿ. ಆ ಕಾಲಕ್ಕೆ ನೋಡ್ಕೊಳ್ಳಾನ."
ಗೋವಿಂದನಿಗೆ ಉತ್ಸಾಹ ಭಂಗವಾಗಿತ್ತು. 
...ಹೀಗೆ, ಮುನಿಯನ ಪ್ರಕರಣವನ್ನು ಚೆನ್ನಾಗಿ ಬಲ್ಲ ಅವನಿಗೆ ತಿಳಿಯದೆ ಆತನ ಅವಸಾನಕ್ಕೆ ಯಾರು ಕಾರಣ 
ಎಂಬುದು? 
ಅವನೊಬ್ಬನೇ ಅಲ್ಲ; ಹಳ್ಳಿಯ ಎಲ್ಲರೂ, ಒಂದಕ್ಕೆ ಒಂದು ಸೇರಿಸಿ ಎರಡಾಯಿತು ಎಂದು ಹೇಳಬಲ್ಲವರೇ.
...ಜನೆ ಹಾಗೆ ಹೇಳುವುದು ಶಾಮೇಗೌಡರಿಗೆ ಇಷ್ಟವಿರಲಿಲ್ಲ. 
...ಅವರು ಬಿರುಸಾಗಿ ಮಾರಿಗುಡಿಯತ್ತ ನಡೆದರು. 
 ಒಂದು ತಪ್ಪು ಮಾದಿದ ಮುನಿಯ,ಮತ್ತೊಂದು ತಪ್ಪು ಮಾದಿದ.ಹೊಲ ಕೊಳ್ಳುವ ಯೋಚನೆ ಮಾಡಿದ್ದೇ ತಪ್ಪು. ಅದಾದಮೇಲೆ ಕೋರ್ಟಿಗೆ ಹೋದದ್ದು ಎರಡನೆಯ ತಪ್ಪು.