ಪುಟ:ನೋವು.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ನೋವು ಸ್ವಂತದ್ಧೊನ್ದೂ ಪುಸ್ತಕವನ್ನು ರಂಗಣ್ಣ ಎರವಲು ತಂದಿದ್ದ. ಆಂಗ್ಲ ಹೆಣ್ಣೋಬ್ಬಳು ಮೋಹಕ ಭಂಗಿಯಲ್ಲಿ ಹೆಚ್ಚು ಕಡಮೆ ಪೂರ್ಣ ನಗ್ನವಾಗಿದ್ದ ತನ್ನ ದೇಹವನ್ನು ಪ್ರದರ್ಶಿಸುವ ಚಿತ್ರ ವಿತು ಹೊದಿಕೆಯ ಮೇಲೆ. ಮೊದಲೇ ಯಾರೋ ಹೊದಿಕೆಯನ್ನು ಸಡಿಲಿಸಿದ್ದರು. ರಂಗಣ್ಣ ಅದನ್ನು ತೆಗೆದು ಗೆಳೆಯನಿಗೆ ಕೊಟ್ಟಿದ್ದ.

 "ಜಾಕೀಟು ತೆಗೆದು ಎಸೆದ್ದಿಟ್ಟೆಯಲ್ಲಮ್ಮ!" ಎಂದು ಪರಿಹಾಸ್ಯಮಾಡಿದ್ದ ಆ ಮಿತ್ರ. ಕಣಿವೇಹಳ್ಳಿಗೆ ಬಂದ ರಂಗಣ್ಣ ಅದನ್ನು ಓದಲು ಯತ್ನಿಸಿದ್ದ. ಉದ್ದಕ್ಕೂ ಮುಗ್ಧ ಬಾಲೆಯೊಬ್ಬಳನ್ನು ಪುಂಡರು ಬಗೆಬಗೆಯಾಗಿ ಬಳಸಿಕೊಂಡುದರ ಚಿತ್ರಣ. ಮೆದುಳು ಬಿಸಿಯೇರುವ ಹಾಗಿತ್ತು ಬರವಣಿಗೆಯ ರೀತಿ. ಅರ್ಧ ಓದಿ ಆದಮೇಲೆ ಅಲ್ಲಿಗೇ ನಿಲ್ಲಿಸಿ ಬಿಟ್ಟಿದ್ದ ರಂಗಣ್ಣ. ಮುಂದೆ ಓದಲು ಮನಸ್ಸಾಗಿರಲಿಲ್ಲ.
 ಆ ಪುಸ್ತಕದ ನೆನಪಾಗಿ, ನಡೆಯುತ್ತಿದ್ದ ರಂಗಣ್ಣನಿಗೆ ನಗು ಬಂತು. 
 ತಂದೆಗೆ ಇಂಗ್ಲಿಷ್ ಬರದು; ತಂಗಿಗೂ ಬರದು. ಹೀಗಾಗಿ ಆ ಪುಸ್ತಕ ತನ್ನಲ್ಲಿ ಸುರಕ್ಷಿತ. ಪುಸ್ತಕವಲ್ಲ, ತಾನು ಸುರಕ್ಷಿತ!
 ಕೃಷ್ಟೇಗೌಡ ದೂರದಿಂದ ರಂಗಣ್ಣನನ್ನು ಕಂಡ. ಆತನೊಡನೆ ಹರಟೆಗೆ ನಿಲ್ಲುವ ಇಷ್ಟವಿಲ್ಲ ರಂಗಣ್ಣನಿಗೆ. ಕೃಷ್ಟೇಗೌಡನೋ ಕರೆದೇ ಬಿಟ್ಟ. 
 "ರಂಗಣ್ಣ, ನಿಲ್ಲು ಮಾರಾಯ. ಎಲ್ಲಿಗೆ ಸವಾರಿ?"
 ರಂಗಣ್ಣ ನಿಂತು ಕೃಷ್ಟೇಗೌಡ ಹತ್ತಿರಕ್ಕೆ ಬಂದೊಡನೆ, "ನದೀಗಂಟ ಓಗಿದ್ದೆ ಮಾವ," ಎನ್ದ.
 "ಒಬ್ನೀ? ಎಲ್ಲಿ ಪದ್ಮ? ಈಚೆಗೆ ಅವನ ಜತೆ ಓಡಾಟ ಇಲ್ವಂತಲ್ಲ..." 
 "ಆತನ್ದು ಬಿ.ಎ. ಕ್ಲಾಸು; ನನ್ದು ಮೆಡಿಕಲ್ ಕಾಲೇಜು.” 
 "ನಮಗೇನು ಗೊತ್ತಾಗ್ತದಪ್ಪ ಅದೆಲ್ಲ ? ಇಬ್ಬರೂ ನಗರದಾಗಿದೀರಿ, ಸ್ನೇಹಿತರು అంತ ತಿಳ್ಕನ್ಡಿದ್ವಿ." 
 "ನಗರದಾಗೆ ಇದ್ರೂ ನಮ್ಮ ದಾರಿಗ್ಳು ಬೇರೆ ಬೇರೆ." 
 "ಉಂ! ಮನೆಯಾಗೆಲ್ರೂ ಚೆಂದಾಕಿದಾರಾ? ನಿನ್ನೆಂಗಿಗೆ ಜರ ಅಂತ ಕೇಳ್ದೆ." 
 "ಆಗ್ಲೇ ವಾಸಿಯಾಯ್ತು,"
 "ನೀನೇ ಔಷಧಿ ಕೊಟ್ಯನ್ತೆ."
 "ಹ"
 "ಪರವಾಗಿಲ್ಲ ಬಿಡು ! ನಮ್ಮ ಹಳ್ಳಿಗೆ ಡಾಕ್ಟ್ರು ಬಂದಂಗಾಯ್ತು. ಗೋವಿಂದಪ್ಪ ಅದೇನೋ ಯಾರ್ಕೈಲೋ ಓಟ್ಲಿದ್ಸೋಕೆ ನೋದ್ತಾ ಅವನೆ."
 "ಹೌದು, ಅದ್ಯಾರೋ ಅಪ್ಪನತ್ರಕ್ಕೆ ಬಂದಿದ್ರು.”
 ಹೀಗೆಯೇ ಮತ್ತೂ ಎರಡು ನಿಮಿಷ ಆ ಮಾತು ಈ ಮಾತು. 
 "ಬರ್ತೀನಿ ಮಾವ," ಎಂದು ಹೇಳಿ ರಂಗಣ್ಣ ಹೊರಟುಬಿಟ್ಟ.
 ಆತ ನಡೆಯುತ್ತಲಿದ್ದ ಹಾಗೆ ಹವೆ ಬದಲಾಯಿತು. 
 ಗಾಳಿ ಬೀಸಿತು. ಎಲ್ಲೋ ಪಶ್ಚಿಮದಲ್ಲಿ ಸಣ್ಣಗೆ ಕಾಣಿಸಿದೊಂದು ಮೋಡ ದೊಡ್ಡ ದೊಡ್ಡದಾಗಿ ಆಕಾಶವನ್ನೇ ಆಕ್ರಮಿಸಿತು.