ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

THE PANCHATANTRA-ITS ORIGIN.

ಪಂಚತಂತ್ರೊತ್ಪತ್ತಿ

ಪಾಟಲೀಪುರವೆಂಬ ಪ್ರಸಿದ್ಧವಾದ ಒಂದು ಪಟ್ಟಣವುಂಟು. ಅದು ವೇದಶಾಸ್ತ್ರ ಪುರಾಣಾದಿ ಚತುರ್ದಶಏದೈಗಳ ಕಲಿತ ಬ್ರಾಹ್ಮಣೋತ್ರ ಮರಿಂದಲೂ, ಬಹಳ ಬಲಪರಾಕ್ರಮಶಾಲಿಗಳಾದ ರಾಜಶ್ರೇಷ್ಟರಿಂದಲೂ, ಕ್ರಮವಿಕ್ರಯಗಳಲ್ಲಿ ಪ್ರಸಿದ್ಧರಾದ ವೈಕೃರಿಂದಲೂ, ದೇವಬ್ರಾಹ್ಮಣ ವಿಕ್ಷಾ ಸವುಳ ಶೂದ್ರರಿಂದಲೂ, 'ನಾನಾವಿಧವಾದ ಆಯುಧಸಾಧಕಗಳಲ್ಲಿ ಸಮ ರ್ಥರಾದ ವೀರಭಟರಿಂದಲೂ, ಅನೇಕ ದೇವಾಲಯಗಳಿಂದಲೂ ಮೆರೆಯು ಆದಿತು.

The Excellence of Learning-Sudarsanaraya,

ಆ ಪಟ್ಟಣವನ್ನು ಸುದರ್ಶನನೆಂಬ ಅರಸನು ಪಾಲಿಸುತ್ತಿದ್ದನು. ಆತನು ಪರಾಕ್ರಮದಲ್ಲಿ ಕಾರ್ತವೀಲ್ಯಾರ್ಕ್‌ನನಿಗೂ ಬುದ್ದಿಯಲ್ಲಿ ಬೃಹಸ್ಪ ತಿಗೂ ಧೈರದಲ್ಲಿ ಹಿಮವಂತನಿಗೂ ದಾತೃತ್ವದಲ್ಲಿ ಶಿಬಿ ಕರ ದಧೀಚಿಗಳಿಗೂ ಸಮಾನನಾಗಿ ಈ ಲೋಕದಲ್ಲಿ ಪ್ರಸಿದ್ದಿ ಪಡೆದಿದ್ದನು. ಆ ರಾಜಶ್ರೇಷ್ಠನು ಬಂದುದಿನ ಮಂತ್ರಿ ಪುರೋಹಿತರು "ವಿದಜನರು ಸಾಮಂತರಾಯರು ನಂಟರು ಮಿತ್ರರು ಮುಂತಾದವರಿಂದ ಪರಿವೇಷ್ಟಿತನಾಗಿ ಸಭೆಯಲ್ಲಿ ಒಟ್ಟೋ ಆಗದಿಂದಿರುವಾಗ ದುರ್ಮಾರ್ಗರಾಗಿ ನೀತಿಗೆ ತಿಳಿಯದ ತನ್ನ ಪುತ್ರ ರನ್ನು ನೋಡಿ ಅತಿ ಚಿಂತಾಕ್ರಾಂತನಾಗಿ ಸಭೆಯಲ್ಲಿರುವವರ ಸಂಗಡ ಇಂತೆಂದನು: - ವಿದ್ಯಾಂಸನೂ ಧಕನೂ ಅಲ್ಲವ ಮಗನು ಹುಟ್ಟಿದರೆ ಫುವೆನು ? ಹಾಲುಕರೆಯದ ಆಕಳನ್ನು ಇಟ್ಟುಕೊಂಡು ಏನುಮಾಡ ಬಹುದು ? ಗಂಡುಮಕ್ಕಳು ಅನೇಕರುವೆಂದು ಲೆಕ್ಕಿಸಿಕೊಳ್ಳುವುದರಿಂದ