ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಂಚತಂತ್ರ್ಯೋತ್ಪತ್ತಿ ಪ್ರಯೋಜನವೇನು ? ವಂಶಕ್ಕೆ ಕೀರ್ತಿತರುವ ಮಗನೊಬ್ಬನೇ ಸಾಕು. ರೂಪವೂ ಧನವೂ ಬಲವೂ ಉಂಟಾಗಿದ್ದರೂ ಶಾಸ್ತ್ರ ಜ್ಞಾನವಿಲ್ಲದ ಮಗನು ಏತಕ್ಕೆ? ಇಂಥ ಮಗನ ಹೆರುವುದಕ್ಕಿಂತ ತಾಯಿ ಗೊಡ್ಡಿಯಾದರೂ ಮೇಲು, ಗರ್ಭವಿಳಿದು ಬಿದ್ದು ಹೋದರೂ ಒಳ್ಳೆಯದು, ಹುಟ್ಟಿದವನು ಸತ್ತರೂ ಚೆಂದ, ಹೆಣ್ಣಾಗಿ ಹುಟ್ಟಿದರೂ ವಾಸಿ“ಪೂರ್ವಜನ್ಮದಲ್ಲಿ ತಂದೆ ಮಾಡಿದ ಪುಣ್ಯಕರದಿಂದ ಉದಾರನೂ ಧರಾತನೂ ತಾಯಿತಂದೆಗಳ ಮಾತು ಮೀರವವನೂ ಒಳ್ಳೆಯ ನಡತೆಯುಳ್ಳವನೂ ಸರಜನರಿಗೂ ಹಿತನೂ ವಿದ್ವಾಂಸನೂ ಸಮದ್ಧನೂ ಪರರು ತನಗೆ ಮಾಡಿದ ಮೇಲನ್ನು ಮರೆಯದವನೂ ಆಡಿದಮಾತು ತಪ್ಪದವನೂ ಆದ ಕುಮಾರನು ಹುಟ್ಟು ತಾನೆ; ಪಾಪಕರ ದಿಂದ ಕ್ಷೀರಸಮುದ್ರದಲ್ಲಿ ವಿಷಹುಟ್ಟಿದಂತೆ ಒಳ್ಳೆಯ ವಂಶದಲ್ಲಿ ದುರಾರ್ಗನು ಹುಟ್ಟಿ ಕುಲವನ್ನು ಕೆಡಿಸುವನು.

ಯೂವನಂ ಧನಸಂಪತ್ತಿಃ ಪ್ರಭುತ್ವವಿವೇಕಿತಾ |

ಏಕೈಕಮಷ್ಯನರ್ಥಾಯ ಕಿಮು ಯತ್ರ ಚತುಷ್ಟಯ೦ ||

ಯ್ವವನ ಧನ ದೊರೆತನ ಅವಿವೇಕ ಎಂಬ ಈ ನಾಲ್ಕರಲ್ಲಿ ಒಂದೊಂದೆ: ಅನರ್ಥವನ್ನು ಹುಟ್ಟಿಸುತ್ತದೆ. ಈನಲ್ಲೂ ಉಳ್ಳ ಸ್ಥಳದಲ್ಲಿ ಹೇಳ ಬೇಕಾದುದೇನು ? ಆದುದರಿಂದ ವಿವೇಕವಿಲ್ಲದೆ ದುಾರ್ಗರಾಗಿರುವ ನನ್ನ ಪುತ್ರರಿಗೆ ನೀತಿ ಶಾಸ್ತ್ರವನ್ನೋದಿನಿ ವಿವೇಕವುಂಟುಮಾಡುವುದರಿಂದ ಅವ ರನ್ನು ಪುನಶ್ಚನ್ನ ಸಂಭೂತರಾಗಿ ಮಾಡತಕ್ಕ ಪುಣ್ಯಾತ್ಮರು ಯಾರಾದರೂ ಈ ಸಭೆಯಲ್ಲಿ ಉಂಟೆ ?

Vishnuarma, the able Teacher,

ಎಂದು ಅರಸನು ಕೇಳಲು, ದೇವಗುರುವಾದ ಬೃಹಸ್ಪತಿಯ ಹಾಗೆ ಸಮಸ್ತ ನೀತಿ ಶಾಸ್ತ್ರಗಳನ್ನೂ ತಿಳಿದ ವಿಷ್ಣು ಕರನೆಂಬ ಬ್ರಾಹ್ಮಣನೆದ್ದು ಅರಸನನ್ನು ನೋಡಿ,-ಓ ಮಹಾರಾಯರೇ, ನೀವು ಹೀಗೆ ಚಿಂತಿಸಬೇ ಕಾದುದೇನು? ನೀವು ನೆನಸಿದ ಕೆಲಸವನ್ನು ನೆಟ್ಟಗೆ ಮಾಡುವುದು ಎಷ್ಟು ಮಾತ್ರ ? ನಾನು ನಿಮ್ಮ ಕುಮಾರರೆಲ್ಲರನ್ನೂ ಆರು ತಿಂಗಳಲ್ಲಿ ಸಕಲ ನೀತಿಶಾಸ್ತ್ರಗಳನ್ನೂ ತಿಳಿದವರಾಗಿ ಮಾಡಿ ನಿಮಗೆ ಸಮರ್ಪಿಸದೆ ಇದ್ದರೆ