ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇಧತಂತ್ರ ಹೊಡೆದು ಅಪ್ಪರಲ್ಲಿ ಹೊತ್ತು ಮುಳುಗಿದುದರಿಂದ ತಮ್ಮ ಮನೆಗಳಿಗೆ ಹೋದರು. ಆಗ ಆ ಸಮಿಾಪದ ವೃಕ್ಷಗಳನ್ನಾಶ್ರಯಿಸಿ ತಿರುಗುತ್ತಿದ್ದ ಕೋತಿಗಳು ದೇವಾಲಯದ ಹತ್ತಿರಕ್ಕೆ ಬಂದು ಗುಡಿಯ ಹತ್ತಿ ಮರಗಳ ಮೇಲಕ್ಕೆ ಚಕ್ಕನೆ ನೆಗೆಯುತ್ತಾ, ಕೊಂಬೆಯಿಂದ ಕೊಂಬೆಗೆ ಹಾರುತ್ತಾ, ದೊಡ್ಡರೆಂಬೆಗಳನ್ನು ಹಿಡಿದು ತೂಗಾಡುತ್ತಾ, ಪ್ರಾಕಾರಗಳ ಮೇಲೆ ಚಿಮ್ಮಿ ಓಡುತ್ತಾ, ಹುಬ್ಬುಗಳನ್ನು ಹಾರಿಸಿ ಹಲ್ಲುಕಿರಿಯುತ್ತಾ, ಬಂದ ರೊಂದಿಗೊಂದು ಜಗಳವಾಡಿ ಓಡಿಹೋಗುತ್ತಾ, ಹಣ್ಣು ತಿನ್ನುತ್ತಾ, ಜೇನು ಕುಡಿಯುತ್ತಾ, ಸ್ವಾಭಾವಿಕವ ಚಪಲದಿಂದ ತಿರುಗುತ್ತಿದ್ದುವು. ಅವುಗಳಲ್ಲಿ ಒಂದು ಮುದಿಕೋತಿ ದೈವವಶದಿಂದ ಬೆಣೆಗಳ ಬಡಿದಿದ್ದ ಈಗಿನ ತೊಲೆಯ ಹತ್ತಿರಕ್ಕೆ ಬಂದು, ಸಂದಿನಲ್ಲಿ ಹಿಂಗಾಲುಗಳನ್ನು ಇಳಿಯ ಬಿಟ್ಟುಕೊಂಡು, ಅದರ ಬೆಣೆಯನ್ನು ಎರಡುಕ್ಕೆಗಳಿಂದಲೂ ಹಿಡಿದು ಬಲ ವಂತವಾಗಿ ಕಿತ್ತಿತು. ಆಗ ಅದರ ಕಾಲುಗಳು ಆಸಂದಿನಲ್ಲಿ ಸಿಕ್ಕಿ ನಲುಗಿ ಹೋದುದರಿಂದ, ಆಕೊತಿ ಮೊರೆಯಿಡುತ್ತಾ ಆ ನೋವ ಸಹಿಸಲಾರದೆ ಮೃತವಾಯಿತು. ಆದಕಾರಣ ಈಪ್ರಕಾರ ತನಗೆ ಸಿಮಿತ್ತವಿಲ್ಲದ ಕೆಲಸಕ್ಕೆ ಪ್ರವೇಶಿಸುವವರಿಗೆ ಈಗ ಹೇಳಿದ ಕೋತಿಯ ಹಾಗೆ ಆದೀತು, ನಮಗೆ ಅದನ್ನು ವಿಚಾರಿಸಬೇಕಾದುದೇನು? ನಮ್ಮ ದೊರೆ ಭಕ್ಷಿಸಲಾಗಿ ಮಿಕ್ಸ್ ಮಾಂಸವನ್ನು ತಿನ್ನೋಣ ಬಾ-ಎನಲು, ದಮನಕನಿಂತೆಂದನು. He who has the power of doing kindness and unkindness is the man. ಸುಹೃದಾಮುಪಕಾರ ಕಾರಣಾದ್ವಿಪದಾಮಪ್ಪಕಾರ ಕಾರಣಾ... | ನೃಪಸಂಕ್ರಯ ಇಚ್ಯತೇ ಬುಧ್ಯೆಶ್ವರಂ ಕೋನ ಬಿಭತಿ ಕೇವಲ೦ || ಜೀವಿತ ಯಸ್ಯ ಜೀವಂತಿ ಏಪಾ ಮಿತ್ರಾಣಿ ಬಾಂಧವಾಃ | ಸಫಲಂ ಜೀವಿತಂ ತಸ್ಯ ಆತ್ಮಾರ್ಥಂ ಕೋ ನ ಜೀವತಿ || ಮಿತ್ರರಿಗೆ ಉಪಕಾರವನ್ನೂ ಶತ್ರುಗಳಿಗೆ ಅಪಕಾರವನ್ನೂ ಮಾಡು ವುದಕ್ಕಾಗಿ ಲೋಕದಲ್ಲಿಯ ಜನರು ಅರಸರನ್ನು ಸೇವಿಸುತ್ತಾರೆಯೇ ಹೊರತು ತಮ್ಮ ಹೊಟ್ಟೆಗಳ ಹೊರೆವುದಕ್ಕಲ್ಲ. ಅದಕ್ಕೋಸ್ಕರ ಸೇವಿ B