ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಮಿತ್ರಭೇದತಂತ್ರ ಬಾರದೆಂದೂ, ಇವನದು ಒಳ್ಳೆಯ ಕುಲವಲ್ಲವೆಂದೂ, ಇವನು ತಿಳಿದವನ ಲ್ಲವೆಂದೂ, ಅನಾದರಣೆ ಮಾಡರು ; ತಮ್ಮನ್ನು ಸೇವಿಸುತ್ತಿದ್ದರೆ ಸಾಕೆಂದು ನೆನಸುವರು. ಯಾವ ಕೃತ್ಯನು ಅರಸನ ಕೋಪಪ್ರಸಾದಗಳ ಕುರುಹುಗ ಳನ್ನರಿತು ನಡೆದುಕೊಳ್ಳುವನೋ ಅವನು ಆ ಅರಸನ ದಯೆಯಿಂದ ಪ್ರಸಿದ್ದಿ ಪಡೆಯುವನು. ಆದುದರಿಂದ ನಮ್ಮ ಅರಸನು ಮನ್ನಿಸುವ ಸೇವಕ ರೊಂದಿಗೆ ಹೋಗಿ ಆತನ ಸಮಿಾಪವನ್ನು ಬಿಡದೆ ಅನುಸರಿಸಿ ಇರುವೆನು ಎಂದನು. ಆಗ ಕರಟಕನು-ಎಲೆ ಅರಸನ ಬಳಿಗೆ ಹೋಗಿ ನೀನೇನು ಮಾಡುತ್ತೀಯೆ ? ಎಂದು ಕೇಳಲಾಗಿ ದಮನಕನಿಂತೆಂದನು. ಒಳ್ಳೆಯ ಮಳೆ ಬಿದ್ದರೆ ಬೀಜದಿಂದ ಬೀಜವು ಹೇಗೆ ಉಂಟಾಗು ವುದೋ ಹಾಗೆಯೇ ಚೆನ್ನಾಗಿ ಉತ್ತರಕೊಟ್ಟರೆ ಅದರಿಂದ ಮತ್ತೊಂದು ಉತ್ತರ ಹುಟ್ಟುತ್ತದೆ. ನೀತಿಮಾರ್ಗದಲ್ಲಿ ಪ್ರವರ್ತಿಸಿದ ಬುದ್ದಿವಂತರು ಒಳ್ಳೆಯ ಉಪಾಯವನ್ನು ತೋರಿಸುವುದರಿಂದ ಬರುವ ಕಾರಸಿದ್ದಿಯ ಅಪಾಯವನ್ನು ತೋರಿಸುವುದರಿಂದ ಬರುವ ಕೆಲಸಗೇಡೂ ಪ್ರತ್ಯಕ್ಷವಾಗಿ ಕಾಣಿಸುವಹಾಗೆ ತಿಳಿಸುತ್ತಾರೆ. ನಾನು ಸಮಯವನ್ನು ವಿಚಾರಿಸದೆ ಹೇಳನು, ಬೃಹಸ್ಪತಿಯಾದರೂ ಸಮಯವನ್ನರಿಯದೆ ಮಾತನಾಡಿದರೆ ಅವಮಾನವನ್ನು ಹೊಂದುವನು. ಯಾವ ಗುಣದಿಂದ ಲೋಕದಲ್ಲಿ ಸತ್ತು ರುಷರಿಂದ ಹೊಗಳಿಸಿಕೊಳ್ಳುವನೋ ಅದೇ ಒಳ್ಳೆಯಗುಣ. ಆ ಗುಣ ದಿಂದಲೇ ನರನು ಗುಣವಂತನೆನಿಸಿಕೊಳ್ಳುವನು. ಆದುದರಿಂದ ಆ ಗುಣ ವನ್ನು ಕಾಪಾಡಿಕೊಂಡು ವೃದ್ಧಿ ಮಾಡಿಕೊಳ್ಳಬೇಕು.-ಎನಲು, ಕರಟಕ ನು ನಿನಗೆ ಕಾರೈಸಿದ್ದಿ ಯಾಗುವುದು ಹೇಗೆಂದು ದವಕನೊಡನೆ ಹೇಳಿದನು. Damanaka visits Pingalaka. ಆಮೇಲೆ ದಮನಕನು ಪಿಂಗಳಕನ ಬಳಿಗೆ ಹೋಗಿ ವಿನಯಭಯ ಭಕ್ತಿಗಳಿಂದೆರಗಲು, ಪಿಂಗಳಕನು ಅವನನ್ನು ಬಹಳ ಆದರಣೆಯಿಂದ ಕುಳಿತುಕೊಳ್ಳಹೇಳಿ, ಬಹಳ ದಿನಕ್ಕೆ ನಿನ್ನ ನೋಡಿದೆನೆಂದು ನುಡಿಯಲಾಗಿ ದಮನಕನಿಂತೆಂದನು.