ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಪಂಚತಂತ್ರ ಕಥೆಗಳು. - ಬಲವೂ ಪರಾಕ್ರಮವೂ ಧೈರವೂ ಉಳ್ಳ ನಮ್ಮ ಅರಸನು ನೀರು ಕುಡಿವುದಕ್ಕಾಗಿ ನದಿಗೆ ಹೋಗಿ, ಇಳಿಯಲಿಕ್ಕೆ ಅಂಜಿ ಇದ್ದಾನೆ. ಅದು ನಿನಗೆ ಹೇಗೆ ತಿಳಿಯಿತು ಎನ್ನು ತೀಯೋ ಕೇಳು; ಉದೀರಿತೋರ್ಥಃ ಪರುನಾಸಿ ಗೃಹ್ಯತೇ ಹಯಾಶ್ಚ ನಾಗಾಕ್ಷ್ಯ ವಹಂತಿ ದೇಶಿತಾಃ | ಅನುಕ್ತಮಪ್ಯೂಹತಿ ಪಂಡಿತೋಜನಃ ಪರೇಂಗಿತಜ್ಞಾನಫಲಾಹಿ ಖುದ್ದಯ|| ಯಾವಕಾರವೂ ಭಾವಜ್ಞರಿಗೆ ವಿಶದವಾಗಿರುವುಮ. ಪಶುಗಳು ಒಬ್ಬರ ಮಾತುಗಳ ಕೇಳಿ ಅವರು ಹೇಳಿದ ಪ್ರಕಾರ ಪ್ರವರ್ತಿಸುವುವು. ಕುದುರೆಗಳ ಆನೆಗಳೂ ಶಿಕ್ಷೆಗಳಿಂದ ಒಬ್ಬರ ವಶವಾಗಿ ಅವರನ್ನು ತಮ್ಮ ಮೇಲೆ ಏರಿಸಿಕೊಂಡು ತಿರುಗುತ್ತಿರುವುವು. ಪಂಡಿತನಾದವನು ಒಬ್ಬರು ಹೇಳದ ತಾತ್ಪರವನ್ನು ಊಹಿಸುವನು. ಪರರ ಇ೦ಗಿತವನ್ನು ತಿಳಿದು ಕೊಳ್ಳುವುದೇ ಬುದ್ದಿಯಿರುವುದಕ್ಕೆ ಫಲ, ಬುದ್ದಿಯಿಲ್ಲದವರು ದೈವ ವನ್ನೇ ಚಿಂತಿಸಿ ತಮ್ಮ ಪ್ರಯತ್ನವೇನನ್ನೂ ಮಾಡದಿರುವರು. ಅಂಥ ವರು ಭೂಮಿಯಲ್ಲಿ ಹುಟ್ಟಿ ಏನುಪ್ರಯೋಜನ ? ಈ ಲೋಕದಲ್ಲಿ ಪರರ ಇಂಗಿತವನ್ನು ತಿಳಿದುಕೊಳ್ಳಲಾರದವನ ಜನ್ನವೇತಕ್ಕೆ ? ಆದುದರಿಂದ ಈಗ ನಾನು ಅರಸನ ಬಳಿಗೆ ಹೋಗಿ ನನ್ನ ಮೇಲೆ ಆತನ ಮನಸ್ಸು ಬರುವಹಾಗೆ ಸೇವಿಸಿ ಆತನಿಂದ ಮನ್ನಿಸಲ್ಪಡುವೆನು-ಎನಲು, ಕೇಳಿಎಲೈ ಸ್ನೇಹಿತನೇ, ನೀನು ಮುಂಚೆ ಅರಸರನ್ನು ಸೇವಿಸಿದವನಲ್ಲ. ಅವರ ಚಿತ್ತವೃತ್ತಿಯ ತಿಳದು ಹೇಗೆ ನಡೆಯಬಲ್ಲೆ ಎಂದು ಕರಟಕನು ಕೇಳಿ ದನು. ಅದಕ್ಕೆ ದಮನಕನು ತಿರುಗಿ ಇಂತೆಂದನು ಕೋತಿಭಾರಸ್ಸಮರ್ಥಾನಾಂ ಕಿಂ ದೂರು ವ್ಯವಸಾಯಿನಾಂ | ಕೋ ವಿದೇಶಸ್ಸವಿದ್ಯಾನಾಂ ಕಃ ಪರಃ ಪ್ರಿಯವಾದಿನಾಂ || ಬಹಳ ಸಮರ್ಥರಾದವರಿಗೆ ಅಸಾಧ್ಯವೊಂದುಂಟೋ? ಉದ್ಯೋ ಗಮಾಡಬಲ್ಲವರಿಗೆ ದೂರ ಭೂಮಿಯೊಂದುಂಟೇ? ವಿದ್ಯೆಗಳನ್ನು ಕಲಿ ತವರಿಗೆ ಪರದೇಶವೊಂದುಂಟೇ ? ಪ್ರಿಯವಾದಿಗಳಾದವರಿಗೆ ಶತ್ರುಗ. ಳುಂಟೋ? ಅರಸರೂ ಹೆಂಗಸರೂ ಬಳ್ಳಿಗಳೂ ಯಾವಾಗಲೂ ತಮ್ಮ ಸಮಾಪವನ್ನು ಬಿಡದ ಆಶ್ರಿತರನ್ನು ಪರಿಗ್ರಹಿಸುವರಲ್ಲದೆ 'ಇವನಿಗೆ ವಿದ್ಯೆ