ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಮಿತ್ರಭೇದತಂತ್ರ, ಹರಿದ ಹಾಗೆ ಸ್ವಲ್ಪ ಫಲದಿಂದಲೇ ಅಲ್ಪನು ಬಹಳ ಸಂತೋಷವನ್ನು ಹೊಂದುವನು. ಇದು ಹಿತ ಇದು ಹಿತವಲ್ಲ ಎಂಬ ವಿವೇಕವಿಲ್ಲದೆ ಅನೇಕ ವಾದ ವೇದೋಕ್ಕಾಚಾರಗಳನ್ನು ಬಿಟ್ಟು ತನ್ನ ಹೊಟ್ಟೆಯ ಮಾತ್ರ ತುಂಬಿಸಿಕೊಳ್ಳಲಿಚ್ಛಿಸುವ ನರನು ಪಶುವಿಗೆ ಸಮಾನನು. ಭಾರವುಳ ಬಂಡಿಯನ್ನೆಳಯುತ ಹುಲ್ಲುಮೇಯುತ್ತಾ ಹಳ್ಳ ದಿಣ್ಣೆಯಾಗಿರುವ ಸ್ಥಲ ಗಳಲ್ಲಿ ಉಳುತ್ತಾ ಈಪ್ರಕಾರ ಲೋಕಕ್ಕೆ ಉಪಕಾರಮಾಡುತ್ತಾ ಇರುವ ಪವಿತ್ರವಾದ ಜನ್ಮವುಳ ವೃಷಭವು ನರಪಶುವಿಗಿಂತ ಶ್ರೇಷ್ಠವಾದುದು.

  • ಎನಲು ಕೇಳ-ಎಲೈ ನಾವು ಪ್ರಧಾನರಲ್ಲವಾದುದರಿಂದ ಯಾವ ಕೆಲಸಕ್ಕೂ ಶಕ್ತರಲ್ಲ. ನಮಗೆ ಇಷ್ಟು ನೀತಿಗಳಿಂದೇನು ಕೆಲಸ? ಎಂದು ಕರಟಕನು ನುಡಿಯಲು, ಮರಳಿ ದಮನಕನಿಂತೆಂದನು.

ಯಾವನೊಬ್ಬನು ಪೂರ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಬುದ್ದಿ ಯುಳ್ಳವನಾಗುವನು; ಬುದ್ದಿ ಬಲದಿಂದ ಅರಸರಿಂದ ಪೂಜ್ಯನಾಗುವನು. ಅರಸರು ಮಾನಿಸುವುದರಿಂದ ಅವನ ಬುದ್ಧಿಗೆ ಪಕಾಶವುಂಟಾಗುವುದು, ಅದರಿಂದ ಅವನು ರಾಜೃತಂತ್ರ ನಡಿಸಲಿಕ್ಕೆ ಪ್ರಧಾನನಾಗುವನು. ಪ್ರಧಾ ನತ್ರಬರಲು ಸಮಸ್ತವೂ ಉಂಟಾಗುವುದು. ಅಪ್ರಧಾನನು ಪ್ರಧಾನ ನಾಗುವುದಕ್ಕೆ ಎಷ್ಟು ಹೊತ್ತು ಹಿಡಿದೀತು ? ಮೇಲಾಗಿ ಒಬ್ಬನ ನಡತೆ ಒಳ್ಳೆಯದಾಗಿದ್ದರೆ ಜನರು ಅವನನ್ನು ಗಣ್ಯವಾಗಿ ನೋಡುವರು ; ನಡತೆ ಕೆಟ್ಟುದಾದರೆ ಅವನ ನಂಟರು ಸಹ ಅವನನ್ನು ಅಲಕ್ಷವಾಗಿ ನೋಡು ವರು ದೊಡ್ಡತನವೂ ಚಿಕ್ಕತನವೂ ನಡತೆಯಿಂದಲೇ ಬರುವುದು, ಒಂದು ದೊಡ್ಡ ಕಲ್ಲನ್ನು ಮಹಾಪ್ರಯತ್ನದಿಂದ ಬೆಟ್ಟದ ಮೇಲಕ್ಕೆ ತೆಗೆದು ಕೊಂಡು ಹೋಗುವುದು ಕಮ್ಮ; ಆ ಕಲ್ಲನ್ನು ಅಲ್ಲಿಂದ ಕೆಳಕ್ಕೆ ತಳ್ಳಿಬಿಡು ವುದು ಸುಲಭ. ಹಾಗೆಯೇ ಒಳ್ಳೆಯ ಗುಣಗಳುಳ್ಳವನೆಂದು ಹೊಗಳಿಸಿ ಕೊಳ್ಳುವುದು ಕಷ್ಯ, ದುರ್ಜನನೆಂದು ಹೆಸರೆತ್ತುವುದು ಸುಲಭ. ಎಂದು ಹೇಳಲಾಗಿ ಕರಟಕನು ಕೇಳಿ-ಎಲೆ ಒಳ್ಳಯ ನೀತಿ ವಾಕ್ಯಗಳ ವಿವರಿಸಿ ತಿಳಿಸಿದೆ. ನನ್ನ ಮನಸ್ಸಿನಲ್ಲಿಯ ಸಂಶಯ ತೀರಿತು. ಈಗ ನೀನೇನು ಮಾಡಬೇಕೆಂದಿದ್ದೀಯೋ ಅದನ್ನು ಹೇಳು-ಎನಲು, ದಮನಕನಿಂತಂದನು,