ದಿ 22 ಪಂಚತಂತ್ರ ಕಥೆಗಳು. ಪಟ್ಟು ಕೃಷ್ಣಸರ್ಪಕ್ಕೆ ಹೆದರಿ ತಾನೇನೂ ಮಾಡಲಾರದೆ ತಿರುಗಿ ತನ್ನ ಹೆಂಡತಿಗೆ ಪ್ರಸವಕಾಲ ಬರುತ್ತಲೇ ತನಗೆ ಅತಿ ಸ್ನೇಹಿತನಾದ ಒಂದು ನರಿಯ ಬಳಿಗೆ ಹೋಗಿ ತನಗೆ ಕಷ್ಟ ಸರ್ಪವು ಮಾಡುತ್ತಿದ್ದ ಅಪಕಾರ ವನ್ನು ಹೇಳಿ-ಏನುಮಾಡಲಿ ?” ಎನಲು, ಆ ನರಿ ಯಿಂತೆಂದಿತು. The Old Crafty Crane, the Crab, and the Fish. ಭಕ್ಷಯಿತ್ವಾಖಹನ್ಮಾನುತ್ತಮಾಧವ ಮಧ್ಯರ್ಮಾ | ಅತಿಲ್ಲ್ಯಾಕಃ ಪಕ್ಷಾತಃ ಕರ್ಕಟ ಸಂಗ್ರಹಾನೆ | ಪೂರ್ವದಲ್ಲಿ ಒಂದು ಕೊಳದಲ್ಲಿದ್ದ ವಿಾನುಗಳನ್ನೆಲ್ಲಾ ಕಪಟ ದಿಂದ ನುಂಗಿ ಕೊಬ್ಬಿದ ಕೊಕ್ಕರೆಯನ್ನು ಒಂದು ನಳ್ಳಿ ಉಪಾಯದಿಂದ ಕೊಂದಿತು. ಹಾಗೆ ನೀನೂ ಹಗೆತೀರಿಸಿಕೊ-ಎನಲು, ಆ ಕಥೆಯ ಕೇಳಬೇಕು ಹೇಳು ಎಂದು ಕಾಗೆ ಕೇಳಲಾಗಿ ನರಿ ನುಡಿಯುತ್ತದೆ. ಒಂದು ಮುದಕೊಕ್ಕರೆ ಒಂದು ದೊಡ್ಡ ಕೊಳಕ್ಕೆ ಹೋಗಿ ಕುತ್ತಿಗೆಯ ಕಣ್ಣುಗಳ ಮುಚ್ಚಿಕೊಂಡು ತನ್ನ ನೋಡುವವರಿಗೆ ಬಹು ಕಠಿನವಾದ ವ್ರತವನ್ನು ಆಚರಿಸುತ್ತಿರುವುದಾಗಿ ತೋರುವ ಹಾಗೆ ಕುಳಿತುಕೊಂಡು ಆಹಾರವೇನೂ ತೆಗೆದುಕೊಳ್ಳದೆ ಇರಲು, ಒಂದು ನಳ್ಳಿ ನೋಡಿ ಆಶ್ಚ ಕೃಪಟ್ಟು ಕೊಕ್ಕರೆಯ ಹತ್ತಿರಕ್ಕೆ ಬಂದು,-ಎಲೆ ಬಕಯನೇ, ನೀನು ತುಂಬಾ ಹಸಿವಿನಿಂದ ನೊಂದಿದ್ದರೂ ಮಾನು ಗಳು ಹತ್ತಿರಕ್ಕೆ ಬಂದರೂ ಭಕ್ಷಿಸದೆ ಇರುವುದು ಅದ್ಭುತವಾಗಿದೆ. ಇದೇನು ಹೇಳು-ಎಂದು ಒಳ್ಳೆಯ ಮಾತಿನಿಂದ ಕೇಳಲು, ಕೊಕ್ಕರೆ ಹೇಳುತ್ತದೆ;ಎಲೈ ಕರ್ಕಟಕರಾಯನೇ, ಚಿಕ್ಕು ನಾನು ಯಾವ ಕೊಳಕ್ಕೆಂದರೆ ಆ ಕೊಳಕ್ಕೆ ಹೋಗಿ ಅಲ್ಲಿದ್ದ ಮಾನುಗಳನ್ನು ತಿಂದು ಮೈಯನ್ನು ಬೆಳಸಿಕೊಂಡಿದ್ದನು. ಮೊನ್ನೆ ಸಿಡಿಲಿನಂಥ ಮಾತನ್ನು ಕೇಳಿದೆನು. ಅದು ಮೊದಲು ಹೊಟ್ಟೆ ತುಂಬಿಸಿಕೊಳ್ಳುವುದನ್ನು ಬಿಟ್ಟು ಚಿಂತಾಸಮುದ್ರದಲ್ಲಿ ಮುಳುಗಿದ್ದೇನೆ. ಇನ್ನೇನ ಹೇಳುವೆನು-ಎನಲು, ನಳ್ಳಿ ಬಹಳ ವ್ಯಸನದಿಂದ ಕೊಕ್ಕರೆಯನ್ನು ನೋಡಿ ನೀನು ಕೇಳಿದು
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೨
ಗೋಚರ