ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ಮಿತ್ರಭೇದತಂತ್ರ ದೇನು-ಎಂದಿತು. ಆಕೊಕ್ಕರೆ ಕಣ್ಣಿರು ಬಿಡುತ್ತಾ-ಮೊನ್ನೆ ಕೆಲವರು ಬೆಸ್ತರು ಬಂದು ಈ ನೀರಿನ ಆಳವನ್ನು ನೋಡಿಹೋದರು. ಇನ್ನೆಂಟು ದಿನಕ್ಕೆ ನೀರು ಬಹಳ ಬತ್ತಿಹೋಗುತ್ತದೆ. ಆಮೇಲೆ ಬಲೆಗಳು ಗಾಲ ಗಳು ಮುಂತಾದ ಸಾಧನಗಳನ್ನು ತೆಗೆದುಕೊಂಡು ಆ ಬೆಸ್ತರು ಬರು ತಾರೆಂತ ಕೇಳಿದೆನು-ಎಂದು ಹೇಳಲು ; ಅಲ್ಲಿದ್ದ ವಿಾನುಗಳಲ್ಲಾ ಈ ಮಾತ ಕೇಳಿ-ಎಲೈ ಬಕಶ್ರೇಷ್ಟನೇ; ನೀನು ನಮ್ಮೆಲ್ಲರನ್ನೂ ಉದ್ದರಿ ಸುವುದಕ್ಕಾಗಿ ಹುಟ್ಟಿದೆ. ನಮಗೆ ಇಂದು ಈ ಆಪತ್ತನ್ನು ನೀನು ಹೋಗಲಾಡಿಸಬೇಕು ಎಂದು ಮಹಾ ದೈನ್ಯದಿಂದ ಬೇಡಿಕೊಂಡುವು. ಆಗ ಕೊಕ್ಕರೆ ಒಂದು ಮುಹೂರ್ತಕಾಲ ಮನಸ್ಸಿನಲ್ಲಿ ಚಿಂತಿಸಿ ಇನ್ನು ಮೇಲೆ ನಾನು ಮಾಡಬೇಕಾದ ಕಾರವೇನು ? ಎಂದು ಕೇಳಿತು. ಎಂದೆಂದಿಗೂ ಬತ್ತಿ ಹೋಗದ ನೀರುಳ್ಳ ಇನ್ನೊಂದು ಕೊಳದಲ್ಲಿ ನಮ್ಮ ನ್ನು ಒಯಿದುಬಿಟ್ಟರೆ ಸಾಕು. ಈ ಸಮಯದಲ್ಲಿ ನೀನು ಹೊರತು ನಮಗೆ ಬೇರೆ ರಕ್ಷಕರಿಲ್ಲ' ಎಂದು ಮತ್ಸಗಳು ಹೇಳಿದುವು. ಆಗ ಕೊಕ್ಕರೆ ತನ್ನ ಮನಸ್ಸಿನಲ್ಲಿ ಹಿಗ್ಗಿ-ನಾನು ಬೆಸ್ತರನ್ನು ನಿವಾರಿಸಲಾ ರೆನು, ಆದರೆ ನಿಮ್ಮನ್ನೆಲ್ಲರನ್ನೂ ದಿನಕ್ರಮೇಣ ಒಬ್ಬೊಬ್ಬರನ್ನಾಗಿ ನನ್ನ ಮೂಗಿನಲ್ಲಿ ಕಚ್ಚಿಕೊಂಡು ಹೋಗಿ ನಿಮಗೆ ಅನುಕೂಲವಾದ ಸ್ಥಳದಲ್ಲಿ ಸುರಕ್ಷಿತವಾಗಿ ಬಿಡಬಲ್ಲೆನು-ಎಂದು ದಯಾರಸ ತೋರು ವಹಾಗೆ ನುಡಿಯಲು ಅದಕ್ಕೆ ಮಾನುಗಳು ಸಮ್ಮತಿಸಿದುವು. ತರು ವಾಯ ಕೊಕ್ಕರೆಯು ಮಾನುಗಳನ್ನು ಒಂದೊಂದಾಗಿ ತನ್ನ ಮೂಗಿ ನಲ್ಲಿ ಕಚ್ಚಿಕೊಂಡು ಹೋಗಿ ಒಂದು ವಿಶಾಲವಾದ ಬಂಡೆಯ ಮೇಲೆ ಅವುಗಳನ್ನು ಕೊಂದು ತಿಂದು ಮತ್ತೆ ಮತ್ತೆ ಇದೇಪ್ರಕಾರ ಮಾಡುತ್ತಾ ಸ್ವಲ್ಪಕಾಲದಲ್ಲಿ ಕ್ರಮಕ್ರಮವಾಗಿ ಮಿಾನುಗಳನ್ನೆಲ್ಲಾ ಸ್ನೇಚ್ಛೆಯಾಗಿ ಭಕ್ಷಿಸಿ ಆಶೆತೀರದೆ ಕೊಳದಲ್ಲಿ ಮತ್ತ್ವಗಳನ್ನು ಹುಡುಕುತ್ತಿದ್ದಿತು. ಆಗ ನಳ್ಳಿ ಕೊಕ್ಕರೆಯನ್ನು ನೋಡಿ-ಎಲೈ ಸ್ನೇಹಿತನೇ, ನಾನು ಬಹುಕಾಲ ವಾಗಿ ಈ ಕೊಳದಲ್ಲಿ ಮಿಾನುಗಳ ಸಂಗಡ ಬೆಳದು ಇದುವರೆಗೆ ಸಂತೋ ಪವಾಗಿ ಇದ್ದೆನು, ಈಗ ನಾನೊಬ್ಬನಾಗಿ ನಿಂತೆನು. ಇನ್ನು ಮೇಲೆ ನನ್ನನ್ನು ತೆಗೆದುಕೊಂಡು ಹೋಗಬಾರದೇ-ಎಂದು ನುಡಿಯಿತು. ಬ