ಪುಟ:ಪರಂತಪ ವಿಜಯ ೨.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

ಪರಂತಪ ವಿಜಯ


ಸಮರಸಿಂಹ- ಒಳ್ಳೆಯದು; ಈ ಪ್ರಸ್ತಾವವನ್ನು ಏಕಾಂತವಾಗಿ ಇಟ್ಟುಕೊ. ಭೋಜನವನ್ನು ತೀರಿಸಿಕೊಂಡು ಬಂದು ಪುನಃನನ್ನನ್ನು ಕಾಣು. ಮಂಜೀರಕನು ಹೊರಟುಹೋದನು.
ಸಮರಸಿಂಹ- ಅಯ್ಯಾ! ಪರಂತಪ! ಈಗ ಮಾಡತಕ್ಕ ಕೆಲಸವೇನು?
ಪರಂತಪ- ಮಂಜೀರಕನ ಜತೆಗೆ ಸಹಾಯಾರ್ಥವಾಗಿ ನೀನು ಎಷ್ಟು ಜನಗಳನ್ನು ಕರೆದುಕೊಂಡು ಬರುವೆ?
ಸಮರಸಿಂಹ- ನಿನಗೆ ಎಷ್ಟು ಜನಗಳು ಬೇಕು?
ಪರಂತಪ- ಎಂಟು ಜನಗಳಾದರೆ ಸಾಕು.
ಸಮರಸಿಂಹ-ಆಗಬಹುದು; ಪ್ರಥಮತಃ ಎಂಟುಜನಗಳು ಹೋಗಲಿ. ಶೀಘ್ರದಲ್ಲಿಯೇ ನೂರುಜನ ಪೊಲೀಸಿನವರು ಅವರ ಹಿಂದೆ ಬರುವಂತೆ ಆಜ್ಞೆ ಮಾಡುತ್ತೇನೆ.
ಪರಂತಪ-ಅಷ್ಟು ಜನಗಳು ಏತಕ್ಕೆ? ಅದು ಗಲಾಟೆಗೆ ಕಾರಣವಾಗುವುದು. ಶಂಬರನು ಭಯಪಟ್ಟು ತನ್ನ ಅಧೀನದಲ್ಲಿರತಕ್ಕ ಕಾಮಮೋಹಿನಿ ಮೊದಲಾದವರನ್ನು ಕೊಲ್ಲುವುದಕ್ಕೆ ಇದು ಕಾರಣವಾದರೂ ಆಗಬಹುದು.
ಸಮರಸಿಂಹ- ನೀವೆಲ್ಲರೂ ಅಲ್ಲಿಗೆ ಹೋಗುವುದಕ್ಕೆ ಪೂರ್ವಭಾವಿಯಾಗಿಯೇ, ನಾನು ವೇಷಧಾರಿಯಾಗಿ ರತ್ನಾಕರವನ್ನು ಪ್ರವೇಶಿಸಿ, ಅಲ್ಲಿನ ವಿದ್ಯಮಾನಗಳನ್ನು ತಿಳಿದುಕೊಳ್ಳುವೆನು.
ಪರಂತಪ- ಇದು ಅಸಾಧ್ಯ.
ಸಮರಸಿಂಹ-ಸಾಧ್ಯಾಸಾಧ್ಯಗಳನ್ನು ನೀನೇ ನೋಡುವೆ. ಈ ಮಂಜೀರಕನನ್ನೂ ಬೇದಿರಸಿನಲ್ಲಿರತಕ್ಕ ಈ ಯೆಂಟು ಜನ ಯೋಧರನ್ನೂ ಕರೆದುಕೊಂಡು, ನೀನು ರತ್ನಾಕರವನ್ನು ಪ್ರವೇಶಿಸು. ಶಂಬರನ ಸಮೀಪದಲ್ಲಿ ನನ್ನನ್ನು ನೀನು ಕಾಣುವೆ. 'ಒಳ್ಳೆಯದು' ಎಂದು ಸಮರಸಿಂಹನ ಅಪ್ಪಣೆಯನ್ನು ತೆಗೆದು ಕೊಂಡು, ಮಂಜೀರಕಾದಿಗಳೊಡನೆ ವೇಷಧಾರಿಯಾಗಿ ಪರಂತಪನು ಹೊರಟು, ಕಾಡುಮಾರ್ಗವಾಗಿ ರತ್ನಾಕರದ ಬಳಿಗೆ ಹೋಗಿ, ಏಕಾಂತ ವಾದ ದ್ವಾರದಿಂದ ಅದನ್ನು ಪ್ರವೇಶಿಸಿ, ತನ್ನನ್ನು ಕೂಡಿದ್ದ ಗುಹೆಯ ಬಳಿಗೆ