ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೪
ಪರಂತಪ ವಿಜಯ

ಗಿಲುಗಳಲ್ಲಿಯೂ ಬಾರುಮಾಡಲ್ಪಟ್ಟ ಬಂದೂಖಗಳುಳ್ಳ ನಾಲ್ಕು ಜನರಿರುವರು; ಇವರ ಆಯುಧಗಳನ್ನು ಕಿತ್ತು ಕೊಂಡು ಇವರನ್ನು ಮುಷ್ಕೀಕಟ್ಟಿ ಕೆಡವಿ ಅನಂತರದಲ್ಲಿ ಶಂಬರನನ್ನು ದಸ್ತಗಿರಿಮಾಡಬೇಕು ಎಂದು ಹೇಳಿದನು.
ಸಮರಸಿಂಹ- ಈ ಕೆಲಸವನ್ನು ಮಾಡುವುದಕ್ಕೆ ನಿನಗಿಂತಲೂ ಸಮರ್ಥರಾರೂ ಇಲ್ಲ.
ಮಂಜೀರಕ - ಅಪ್ಪಣೆಯಾದರೆ ಈ ಕೆಲಸವನ್ನು ಮಾಡಿ ಬರುವೆನು.
ಪರಂತಪ- ನಿನ್ನ ಬೆಂಬಲಕ್ಕೆ ನಾನೂ ಬರುವೆನು.
ಸಮರಸಿಂಹ- ಆಗಬಹುದು. ನಿಮಗೆ ವಿಜಯವಾಗಲಿ: ಹೋಗಿಬನ್ನಿ. ಈ ರೀತಿಯಲ್ಲಿ ಸಮರಸಿಂಹನ ಅಪ್ಪಣೆಯನ್ನು ತೆಗೆದುಕೊಂಡು, ಪರಂತಪ ಮಂಜೀರಕರು ಹೋಗಿ, ಲೀಲೆಯಿಂದ ಕ್ರಮಕ್ರಮವಾಗಿ ಈ ನಾಲ್ಕು ಜನಗಳ ಆಯುಧಗಳನ್ನೂ ಅಪಹರಿಸಿ, ಅವರನ್ನು ಮುಷ್ಕೀಕಟ್ಟಿ ಕೆಡವಿ ಬಂದರು. ಅನಂತರದಲ್ಲಿ ಸಮರಸಿಂಹನು ತನ್ನ ಮ್ಯಾಜಿಸ್ಟ್ರೇಟ್ ದಿರಸನ್ನು ಹಾಕಿಕೊಂಡು, ತನ್ನ ಪೊಲೀಸ್‌ನವರಲ್ಲಿ ಇಬ್ಬರಿಗೆ ದಿರಸನ್ನು ಹಾಕಿಸಿ ಕರೆದುಕೊಂಡು, ಭೋಜನಶಾಲೆಯ ಬಳಿಯಲ್ಲಿರತಕ್ಕ ಶಂಬರನ ಬಳಿಗೆ ಹೋದನು.
ಶಂಬರ- ನಿಮ್ಮನ್ನು ಇಲ್ಲಿಗೆ ಬಿಟ್ಟವರಾರು? ಈ ರೀತಿಯಲ್ಲಿ ಅತಿಕ್ರಮ ಪ್ರವೇಶಮಾಡುವುದಕ್ಕೆ ಕಾರಣವೇನು? ಇಲ್ಲಿಂದ ಆಚೆಗೆ ಹೊರಟು ಹೋಗಿ.
ಸಮರಸಿಂಹ- ಎಲಾ ನೀಚ! ಈ ಸಂಸ್ಥಾನಾಧಿಪತಿಯ ಹೆಸರಿನಲ್ಲಿ ನಾನು ನಿನ್ನನ್ನು ದಸ್ತಗಿರಿಮಾಡಿದ್ದೇನೆ.
ಎಂದು ಹೇಳಿ, ಅವನನ್ನು ಹಿಡಿದು, ಕೈಕಾಲುಗಳಿಗೆ ಬೇಡಿಯನ್ನು ತೊಡಿಸಿದನು. ಕೂಡಲೆ ಶಂಬರನು ವಿವರ್ಣವದನನಾದನು.
ಶಂಬರ - ಎಲೈ ಸಮರಸಿಂಹನೆ! ನೀನು, ಗತಿಸಿದ ಸುಮಿತ್ರಾದಿಗಳಿಗೆ ಪರಮಾಪ್ತನು. ಆದುದರಿಂದ, ನನ್ನನ್ನು ರಕ್ಷಿಸು. ಏತಕ್ಕೆ ನನ್ನನ್ನು ದಸ್ತಗಿರಿ ಮಾಡುವೆ? ನಾನು ಏನು ಅಪರಾಧವನ್ನು ಮಾಡಿರುವೆನು?
ಸಮರಸಿಂಹ- ನಿನ್ನ ಅಪರಾಧಗಳೆಲ್ಲ ಶೀಘ್ರದಲ್ಲಿಯೇ ನಿನಗೆ ಗೊತ್ತಾಗುವುವು.
ಮಂಜೀರಕ- ಅನೇಕ ಖೂನಿಗಳನ್ನು ಮಾಡಿ ಇದುವರೆಗೂ ದಕ್ಕಿಸಿ ಕೊಂಡಿರುವೆ. ಸತ್ಯಶರ್ಮ ಮೊದಲಾದ ಧರ್ಮಿಷ್ಠರನ್ನು ಜೀವಸಹಿತ ಸುಟ್ಟು ಹೋಗುವಂತೆ ನೀನು ಮಾಡಿದ್ದಕ್ಕೆ ತಕ್ಕ ಪ್ರತೀಕಾರವು ನಿನಗೆ