ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



100

ಕನಸು

ಆತ ಒಳಕ್ಕೆ ಬಂದು ಬಾಗಿಲು ಮುಚ್ಚಿದ ಸದ್ದು. ಟಿಕ್-ಆರಿಸಿದ ಸ್ವಿಚ್‌.
ಡವಡವನೆ ಹೊಡೆದುಕೊಳ್ಳುತಿದ್ದ ಎದೆಗುಂಡಿಗೆಯೊಡನೆ ಸುನಂದಾ ಕಾದಳು.
ಗಂಡ[ಸು] ತನ್ನ ಬಳಿಯಲ್ಲೇ ನಿಂತಿದ್ದಂತೆ ಆಕೆಗೆ ಭಾಸವಾಯಿತು:
ಬಿಗಿದುಕೊಳ್ಳುವ ತೋಳುಗಳೇ? ಅಥವಾ ಹೊಡೆದು ಹಿಂಸಿಸುವ ಬಿಗಿ
ಮುಷ್ಟಿಯೇ?
ಆಕೆ ಮೆಲ್ಲಮೆಲ್ಲನೆ ಕಣ್ಣು ತೆರೆದಳು. ದೃಷ್ಟಿಯನ್ನು ಬಲಗೊಳಿಸುತ್ತ ಆತನನ್ನು
ನೋಡಿದಳು.
ಆ ದೃಷ್ಟಿಯಲ್ಲಿ ಆಹ್ವಾನವನ್ನು ಪುಟ್ಟಣ್ಣ ಕಂಡ.

****

ಪ್ರವಾಹ ಹರಿಯುತ್ತಿತ್ತು-ಅನಂತ ಕಾಲದಿಂದ, ಅಂತ್ಯವೇ ಇಲ್ಲ ಎನ್ನುವಂತೆ.
ಬೇರೆ ಬೇರೆ ಕಡೆಗಳಿಂದ ನೀರು ಸೇರಿ ತೇಲಿಬರುತ್ತಿದ್ದ ಮರದ ಕೊಂಬೆಗಳೆರಡು.
ಪ್ರವಾಹ ಶಾಂತವಾಗಿದ್ದಾಗ ಅವು ಕೂಡಿಯೇ ತೇಲುತ್ತಿದ್ದುವು. ಆದರೆ, ಮಹಾಪೂರ
ಬಂದು ನೀರು ಹುಚ್ಚೆದ್ದು ಕುಣಿದಾಗ, ಬೇರೆ ಬೇರೆಯಾದುವು-ಬಹಳ ಕಾಲ.
ಕ್ರಮೇಣ, ಬಿರುಗಾಳಿ ಆ ಎರಡನ್ನೂ ಮತ್ತೊಮ್ಮೆ ಒಂದುಗೂಡಿಸಿತು-ಮತ್ತೊಮ್ಮೆ.

****

ಬಹಳ ದಿನಗಳಿಂದ ಆ ಹೆಣ್ಣು ಜೀವ ತಡೆಹಿಡಿದಿದ್ದ ಕಾವಿನೆದುರು, ತಾನು ಕಲ್ಲು
ಎಂದು ಭ್ರಮೆಗೊಂಡಿದ್ದ ಪುಟ್ಟಣ್ಣ ಕರಗಿದ. ಆತ ಈಗ ಯೋಚಿಸಲಿಲ್ಲ. ಮೆದುಳಿಗೆ
ಅಲ್ಲಿ ಕೆಲಸವಿರಲಿಲ್ಲ. ಅಷ್ಟು ದಿನವೂ ಅದುಮಿ ಹಿಡಿದು ವಿಚಿತ್ರ ರೀತಿಯಲ್ಲಿ ನೀಗಿಸಿ
ಕೊಳ್ಳುತ್ತಿದ್ದ ಹಸಿವು, ಹೆಚ್ಚು ಆಹಾರವನ್ನು ಈಗ ಕೇಳಿತು.
ಆ ದೇಹದ ಮೇಲೆ ಕೈ ಇಟ್ಟಾಗ ಪುಟ್ಟಣ್ಣನಿಗೆ, ಹಿಂದೆ ತಾನೇ ಕಾರಣನಾಗಿದ್ದ
ಗಾಯದ ಕಲೆಗಳು ಸಿಗುವವೇನೋ ಎಂದು ಭಯವಾಯಿತು. ಆದರೆ ಅದು ಕ್ಷಣಕಾಲ
ಮಾತ್ರ. ಮರುಕ್ಷಣದಲ್ಲಿ ಯಾವುದೂ ಆತನಿಗೆ ನೆನಪಿರಲಿಲ್ಲ, ಯಾವುದೂ.
ಸುನಂದಾ ಮಾತ್ರ ಮೈ ಮರೆಯಲಿಲ್ಲ. ದೇಹಕ್ಕೆ ದೊರೆತ ಆ ಸುಖದೆದುರಲ್ಲ
ಅವಳ ಕಣ್ಣುಗಳು ತೇವವಾದುವು. ಅವನ ಎದೆಯಲ್ಲಿ ಮುಖವಿಟ್ಟು ಅಳಬೇಕೆಂದು
ಆಕೆಗೆ ತೋರಿತು. ಆತನನ್ನು ಬಿಗಿಯಾಗಿ ಸುನಂದಾ ಅಪ್ಪಿಕೊಂಡಳು. ತನಗೆ ಮರಳಿ
ದೊರೆತ ಈ ಒಡವೆ ಮತ್ತೆ ತನ್ನನ್ನೆಂದೂ ಬಿಟ್ಟು ಹೋಗಬಾರದು, ಅದು ತನ್ನ
ದಾಗಿಯೇ ಉಳಿಯಬೇಕು-ಎಂಬ ಆಸೆಯಿಂದ.
ಹಿಂದೆ, ಮೃದುವಾಗಿ ಮುದ್ದಿನ ಮಾತುಗಳನ್ನು ಆತ ಹೇಳುವುದಿತ್ತು. ಈ
ಹೊತ್ತು ಮಾತ್ರ ಅಂತಹ ಮಾತಿರಲಿಲ್ಲ. ಅದೆಲ್ಲವನ್ನೂ ಮರೆತೇ ಇದ್ದನೇನೊ?
ಸ್ತಬ್ಧವಾದಂತಿದ್ದ ಹೊತ್ತು, ಚಲಿಸಿದಂತೆ ತೋರಿತು.
ಸುನಂದಾ, ಕೇಳಿಸುತ್ತಿತ್ತೋ ಇಲ್ಲವೋ ಎನ್ನುವ ಸ್ವರದಲ್ಲಿ ಹೇಳಿದಳು:
“ಇಷ್ಟು ದಿವಸ ಯಾಕೆ ಹೀಗೆ ಮಾಡಿದಿರಿ ನನ್ನ ದೇವರೇ... ಇನ್ನು ಮೊದಲಿನ