ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



104

ಕನಸು

ಮುಚ್ಚಿ ಪುಟ್ಟಣ್ಣ ಯೋಚಿಸಿದ:
ಮತ್ತೆ ಹಿಂದಿನ ರಾತ್ರೆಯ ನೆನಪು. ಒಂದೊಂದೇ. ಆಕೆ ಮಾತನಾಡಿದವರೆಗೆ.
'ಇನ್ನು ಮೊದಲಿನ ಹಾಗೇ ಇರ್‍ತೀನೀಂತ ಮಾತು ಕೊಡಿ' ಎಂದು ಆಕೆ ಅ೦ಗಲಾಚಿದ
ವರೆಗೆ...
ಮೊದಲಿನ ಹಾಗಿರುವುದು—ಅದು ಸಾಧ್ಯವೇ ಇರಲಿಲ್ಲ.
ಆದರೆ ಮತ್ತೆ ತಾನು ಸುನಂದೆಯ ಮೈಮುಟ್ಟದೇ ಇರುವದು ನಿಜವೇ? ಅ
ಸುಖ—
....ಚಿತ್ರ ಮುಕ್ತಾಯವಾಗುವುದಕ್ಕೆ ಮುಂಚೆಯೇ ಪುಟ್ಟಣ್ಣ ಹೊರ ಬಿದ್ದು,
ಹೋಗುತ್ತ ಬರುತ್ತಲಿದ್ದ ನೂರಾರು ಜನರನ್ನು ಮಾರ್ಕೆಟಿನ ಬಳಿ ಒಂದೈದು ನಿಮಿಷ
ಸುಮ್ಮನೆ ನೋಡುತ್ತಿದ್ದು, ತನ್ನ ಸ್ನೇಹಿತನ ಮನೆಯ ಕಡೆಗೆ ನಡೆದ.
ಅಲ್ಲಿ ಸ್ವಲ್ಪ ಹೊತ್ತು ಆಡುತ್ತ ಕುಳಿತಿದ್ದು, ಕತ್ತಲಾದ ಮೇಲೆ ಒಬ್ಬ ಜತೆಗಾರ
ನಿಗೆ ಹೇಳಿದ:
"ಒಂದು ದಿವಸ ನೀನು ಹೇಳಿದ್ದೆ ನೋಡು-ಕರಕೊಂಡು ಹೋಗ್ತೀನೀಂತ.
ನಡಿ, ಬರ್‍ತೀನಿ."
ಆಟವನ್ನು ಅಲ್ಲೆ ಬಿಟ್ಟು ಆ ಇನ್ನೊಬ್ಬ ನುಡಿದ:
“ಕೊನೆಗೊ ಮನೆ ಬೇಸರ ಬಂತು ಅಲ್ವೇನೊ? ಏಳು. ನೀನು ಪುನಃ ಮನಸ್ಸು
ಬದಲಾಯಿಸೋಕ್ಮುಂಚೆಯೇಕರಕೊಂಡು ಹೋಗ್ತೀನಿ."

****

'ಡಬ್ಬಾವಾಲಾ' ಊಟದ ಚೀಲವನ್ನು ಹಿಂತಿರುಗಿ ತಂದಾಗ ಸುನಂದಾ
ಕೇಳಿದಳು:
"ಯಾಕಪ್ಪಾ?”
“ರಾಯರು ಆಫೀಸ್ನಲ್ಲಿಲ್ಲಾಂತ ಜವಾನ ಹೇಳ್ದ ತಾಯಿ.”
ಸುನಂದೆಯ ಪಾಲಿಗೆ ಪರಿಸ್ಥಿತಿ ಮತ್ತಷ್ಟು ಜಟಿಲವಾಯಿತು. ತನ್ನ ಗಂಡನ
ಮನಸ್ಸಿನಲ್ಲಿ ಏನಿದೆಯೆಂಬುದನ್ನೇ ಆಕೆ ತಿಳಿಯದೇ ಹೋದಳು.
ಎಂದಿನಂತೆ ರಾಧಮ್ಮ, "ಅಡುಗೆ ಏನ್ಮಾಡಿದೀರಾ?" ಎಂದೆಲ್ಲ ಕೇಳಿದ್ದರು.
ಪರೀಕ್ಷಿಸುವ ದೃಷ್ಟಿಯಿಂದ ಆಕೆಯನ್ನು ಅವರು ನೋಡಿದ್ದರೇ ಹೊರತು, ಬಾಯಿ
ಬಿಟ್ಟು ಬೇರೇನನ್ನೂ ಕೇಳಿರಲಿಲ್ಲ.
ಆದರೆ, ಸುನಂದೆ ಗಂಡನಿಗೆ ಕಳುಹಿದ್ದ ಊಟ ಹಿಂತಿರುಗಿ ಬಂದುದನ್ನು ಕಂಡ
ಮೇಲೆ, ರಾಧಮ್ಮ ಮತ್ತೊಮ್ಮೆ ಬಂದರು.
"ಅದ್ಯಾಕ್ರೀ ಊಟ ವಾಪ್ಸು ಬಂತು?”
ಸುನಂದಾ ಯಾವುದೋ ಕೆಲಸ ಮಾಡುತ್ತಿದ್ದವಳಂತೆ ನಟಿಸುತ್ತಾ, ತಲೆಯೆತ್ತ
ದೆಯೇ ಹೇಳಿದಳು: