ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

124

ಕನಸು



ಸುನಂದೆಗೆ ಕೋಪ ಬರೆದಿದ್ದರೂ ಗಂಡನ ಬಿರುಸು ನುಡಿ ಕೇಳಿ ತಮಾಷೆ ಎನಿಸಿ,
ಮತ್ತೂ ಆತನನ್ನು ರೇಗಿಸಬೇಕೆಂದು ತೋರಿತು. ಅದು, ಆತನ ಹಾರಾಟವನ್ನು
ನೋಡುತ್ತಾ ತನ್ನ ವ್ಯಥೆಯನ್ನು ಮರೆಯಲು ಆಕೆ ಬಳಸಿದ ಮಾರ್ಗ.
"ಯೋಚ್ನೆ ಬಿಟ್ಬಿಡೋದು ಅಂದರೇನು? ನಾನೇನು ಹಸುವೆ? ದುಡ್ಡು ಕೊಟ್ಟು
ತಂದು ಹಟ್ಟೀಲಿ ಕಟ್ಟಿದವರ ಹಾಗೆ ಮಾತಾಡ್ತೀರಲ್ಲ!"
"ಸುನಂದಾ! ಮುಚ್ಚು ಬಾಯಿ!"
"ಸಾವಿರ ಸಲ ಆ ಮಾತಂದಿದೀರಾ. ಆದರೂ ನನ್ನದು ಮುಚ್ಚೋ ಬಾಯಿಯೇ
ಅಲ್ಲ."
ಅಲ್ಲೆ ಆಕೆಗೊಂದು ಬಿಗಿಯಬೇಕೆಂದು ಪುಟ್ಟಣ್ಣನಿಗೆ ತೋರಿತು. ಆದರೆ,
ಬಾಗಿಲು ತೆರೆದಿದ್ದುದರಿಂದ ತಮ್ಮ ಪ್ರಕರಣ ಬೀದಿಯವರೆಗೂ ಕಾಣಿಸಬಹುದೆಂದು,
ಆತ ತನ್ನನ್ನೆ ತಡೆದುಕೊಂಡು ಕೈ ಬೆರಳುಗಳನ್ನು ಹಿಸುಕಿದ.
"ಬೆಳಗ್ಗೆ ಏನಾದರೂ ಬೇಕೂಂತಾ ಹೀಗೆ ಮಾತಾಡ್ತಿದೀಯೇನು?"
"ಓಹ್! ಏಟು ತಾನೆ? ಅದಕ್ಕೆ ಬೆಳಗಾದರೇನು, ರಾತ್ರೆಯಾದರೇನು?"
"ಸಾಕು ಮಾಡು!"
"ಹೊಡಿಯೋಕೆ ಹೊರಟೋರು ಸುಮ್ನೆ ನಿಂತಿರಲ್ಲ? ಯಾಕೆ? ಬೀದಿಯೋರಿ
ಗೆಲ್ಲಾ ನಿಮ್ಮ ದೊಡ್ಡಸ್ತಿಕೆ ಗೊತ್ತಾಗುತ್ತೇಂತ ಭಯವೆ?"
ಪುಟ್ಟಣ್ಣ ಬಾಗಿಲು ಮುಚ್ಚಿದ. ಹೆಂಡತಿಯ ಕೈ ಹಿಡಿದು ದಡದಡನೆ ಒಳ
ಹಜಾರಕ್ಕೆ ಎಳೆದೊಯ್ದ. ಅಲ್ಲಿ ಬಿಗಿಮುಷ್ಟಿಯಿಂದ ಆಕೆಯ ತಲೆಗೆ ಕುಟ್ಟಿ, ಬಲವಾಗಿ
ಗೋಡೆಯ ಮೂಲೆಗೆ ತಳ್ಳಿದ.
ಸುನಂದಾ ಬೀಳಲಿಲ್ಲ. ಕೂಗಾಡಲಿಲ್ಲ. ತಾಯಿತಂದೆಯರ ಸರಸವನ್ನು ಕಂಡು
ಸರಸ್ವತಿ ಆಳತೊಡಗಿದಳೆಂದು ತಾನು ಗಾಬರಿಯಾಗಲಿಲ್ಲ. ಬದಲು, ಗಂಡನನ್ನು
ನೋಡುತ್ತ ಸಣ್ಣನೆ ನಕ್ಕಳು.
"ಈಗ ಇಷ್ಟು ಸಾಕು. ಇನ್ನು ಉಳಿದದ್ದನ್ನ ರಾತ್ರಿಗಿಟ್ಟುಕೊಳ್ಳಿ"
—ಎಂದು ವ್ಯಂಗ್ಯವಾಗಿ ಅಂದಳು.
"ಥುತ್ ನಿನ್ನ—"
—ಎಂದು ಧಿಕ್ಕಾರದ ಮಾತನ್ನಾಡಿ ಪುಟ್ಟಣ್ಣ ಹೊರಟುಹೋದ.
....ಆತ ಹೋದಮೇಲೆ, ಸುನಂದಾ ತನ್ನ ವರ್ತನೆಯ ಬಗೆಗೆ ತಾನೇ ಆಶ್ಚರ್ಯ
ಪಟ್ಟಳು. ತಾನು ತೋರಿದ ಸ್ಥೈರ್ಯ ಆತ್ಮ ವಿಶ್ವಾಸ ಆಕೆಯ ದೃಷ್ಟಿಯಲ್ಲಿ ಅಸಾಮಾನ್ಯ
ವಾಗಿದ್ದುವು. 'ಪರವಾಗಿಲ್ಲ ನಾನೂ!' ಎಂದು ಮನಸ್ಸಿನಲ್ಲೆ ಹೇಳಿ ನಕ್ಕು, ಮಗು
ವನ್ನೆತ್ತಿಕೊಂಡು ಆಕೆ ಮುದ್ದಿಸಿದಳು.

****

ಮಧ್ಯಾಹ್ನ ಊಟವಾದ ಮೇಲೆ, ಆಕೆ ಸರಸ್ವತಿಯೊಡನೆ ಕುಸುಮಳ ಮನೆಗೆ