ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

125

ಹೋದಳು.
ಕೆಳ ಹಜಾರದಲ್ಲಿ ಕುಸುಮಳ ಅತ್ತೆ-ಮಾವ ರೇಡಿಯೋ ಹಾಕಿಕೊಂಡು ಕುಳಿ
ತಿದ್ದಳು.
"ಮೇಲಕ್ಬನ್ನಿ"
—ಎಂದು ಕುಸುಮಾ ಮಹಡಿಯ ಮೇಲಿದ್ದ ತನ್ನ ಕೊಠಡಿಗೆ ಸುನಂದೆಯನ್ನು
ಕರೆದೊಯ್ದಳು.
ಬೇಗನೆ ತಾಯಿಯಾಗಲಿದ್ದ ಕುಸುಮಾ, ಈಗ ಆಯಾಸವಾಗುತ್ತದೆಂದು ಸರಸ್ವತಿ
ಯನ್ನು ಅಷ್ಟಾಗಿ ಎತ್ತಿಕೊಳ್ಳುತ್ತಿರಲಿಲ್ಲ. ಆದರೆ ಆ ಮಗುವಿಗಾಗಿ ಅವಳ ಮನೆಯಲ್ಲಿ
ವಿಧವಿಧದ ಸಿಹಿ ತಿಂಡಿಗಳಿಗೆ ಯಾವ ಕೊರತೆಯೂ ಇರಲಿಲ್ಲ.
"ಮಧಾಹ್ನ ಇವತ್ತು ನಿದ್ದೆ ಮಾಡ್ಲಿಲ್ವೇನು?"
—ಎಂದು ಕುಸುಮಾ ಸುನಂದೆಯನ್ನು ಕೇಳಿದಳು.
"ಇಲ್ಲ ಕಣ್ರೀ. ಬೇಜಾರಾಯ್ತು. ನಿಮ್ಮ ಜತೇಲಿಷ್ಟು ಹರಟೆ ಹೊಡಿಯೋ
ಣಾಂತ ಬಂದೆ."
ಹಿಂದೆಯೊಮ್ಮೆ ಕುಸುಮಾ ಸುನಂದೆಯನ್ನು ಕುರಿತು ಗೇಲಿಮಾಡಿದ್ದಳು: "ನಿದ್ದೆ
ಅಂದರೆ ನಿಮಗೆ ತುಂಬಾ ಇಷ್ಟಾಂತ ಕಾಣುತ್ತೆ" ಎಂದು. ಆಗ ಸುನಂದಾ, ನಕ್ಕು ಸುಮ್ಮ
నిದ್ದಳೇ ಹೊರತು, ಆ ಮಾತನ್ನು ಅಲ್ಲಗಳೆದಿರಲಿಲ್ಲ. ತನ್ನ ಪಾಲಿಗೆ ನಿದ್ದೆ, ಮನಸಿನ
ನೋವನ್ನು ಮರೆಯಲು ಒಂದು ಸಾಧನವೆಂದು ಆಕೆ ತಿಳಿಸಿರಲಿಲ್ಲ.
ಕಲಾಪ್ರಿಯತೆಯನ್ನೂ ರಸಿಕತೆಯನ್ನೂ ತೋರಿಸುವ ಕೊಠಡಿ. ಹೆಚ್ಚು ಬೆಲೆಯ
ಸೋಫಾಗಳಿರಲಿಲ್ಲ. ಆದರೆ ಬೆತ್ತದ ಒರಗು ಕುರ್ಚಿಗಳಿದ್ದುವು. ಅವುಗಳ ಮೇಲೆ
ಕಸೂತಿ ಹಾಕಿದ ನೀಲಿ ಹೊದಿಕೆ. ಮೂಲೆಯಲ್ಲಿ ಕರಿಮರದ ಆಸನದ ಮೇಲೆ ಧ್ಯಾನ
ಮಗ್ನ ಬುದ್ಧನ ಪಿಂಗಾಣಿ ಪ್ರತಿಮೆ. ಗೋಡೇಯಲ್ಲೊಂದೆಡೆ ಒಂದು ಸುಂದರವಾದ
ಕ್ಯಾಲೆಂಡರು. ಇನ್ನೊಂದು ಕೊಠಡಿಗೆ ಹೋಗುವ ಬಾಗಿಲ ಬಳಿ ಮೇಲ್ಗಡೆ, ತಾಯ್ತ
ನದ ಹಿರಿಮೆಯನ್ನು ಸೂಸುವ ಒಂದು ವರ್ಣಚಿತ್ರ. ಕಂದಮ್ಮನನ್ನು ಮಡಿಲಿಗೆ ಬರ
ಸೆಳೆದುಕೊಂಡು ಮೈಮರೆತ ತಾಯಿ. "ನನ್ನ ತಮ್ಮ ಮಾಡಿದ್ದು. ಚೆನ್ನಾಗಿ ಚಿತ್ರ
ತೆಗೀತಾನೆ." ಕೊಠಡಿಯ ನಡುವಿನಲ್ಲಿ ಮರದ ಸೊಗಸಾದ ಎತ್ತರದೊಂದು ಮಣೆಯ
ಮೇಲೆ, ನಡುವೆ ಏಕಾಕಿಯಾದ ಚೆಂಗುಲಾಬಿಯೂ ಸುತ್ತು ಬಿಳಿಯು ಗುಲಾಬಿ ಪುಷ್ಪ
ಗಳೂ ಇದ್ದೊಂದು ಹೂದಾನಿ... ಹಿನ್ನೆಲೆಯಲ್ಲಿ ಗೋಡೆಗೆ ತಗಲಿ, ಪುಸ್ತಕ ತುಂಬಿದ್ದ
ಎರಡು ಬೀರುಗಳು.
ಕುಸುಮಾ, ಸರಸ್ವತಿಗೆ 'ಬೊಂಬೆ' ತೋರಿಸಲೆಂದು 'ಇಲ್ಲಸ್ಟ್ರೇಟೆಡ್ ವೀಕ್ಲಿ'
ತಂದಳು. ಮಗುವನ್ನು ತನ್ನ ಮೊಣಕಾಲುಗಳ ನಡುವೆ ನಿಲ್ಲಿಸಿ, ಚಿತ್ರ ತೋರಿಸಿದಳು.
ಚಿತ್ರ ತೋರಿಸುತ್ತಾ ಸುನಂದೆಯನ್ನು ನೋಡಿ, ಕುಸುಮಾ ಕೇಳಿದಳು:
“ಈಗ ನಿಮ್ಮ ಮನೆಯ ಹತ್ತಿರ ಗಲಾಟೆ ಇಲ್ಲ, ಅಲ್ವೇನ್ರಿ? ಅವರ ಜಗಳ ಕೇಳಿ