ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

44

ಕನಸು

ಸುನಂದಾ ಮಾತನಾಡಿದಳು:
“ಮಗು ಜ್ವರ ಹಿಡಿದು ಮಲಗಿದೆ ಅನ್ನೋದು ಗೊತ್ತಿದ್ದೂ ತಡವಾಗಿ ಬರ್ತಿ
ದೀರಲ್ಲ?”
ಆತ ಮಾತನಾಡದೇ ಇದ್ದುದನ್ನು ಕಂಡು ಸುನಂದಾ ರೇಗಿ ನುಡಿದಳು:
"ನೀವೇನು ಮನುಷ್ಯನೋ ರಾಕ್ಷಸನೋ? ನಿಷ್ಕರುಣಿ! ಮೈ ಮುಟ್ಟಿ ನೋಡ
ಬಾರದೆ ಮಗೂನ?”
ಆ ಸ್ಫೋಟದೆದುರು ಪುಟ್ಟಣ್ಣ ಅವಾಕ್ಕಾದ. ಆದರೂ ತಡಮಾಡದೆ ಸುಧಾರಿಸಿ
ಕೊಂಡು ಹೇಳಿದ:
“ಮಗೂಗೆ ಜ್ವರ ಬಂದಿದೇಂತ ತಾನೆ ನೀನು ಹೇಳೋದು?”
ಶಾಂತವಾಗಿತ್ತು ಆತನ ಸ್ವರ. ಅದರಲ್ಲಿ ಅಡಕವಾಗಿದ್ದ ಸೂಕ್ಷ್ಮ ಅಣಕದಿಂದ
ಸುನಂದೆಗೆ ಅವಮಾನವಾಯಿತು.
“ಅಷ್ಟಾದರೂ ಗೊತ್ತಾಯ್ತೆ ನಿಮಗೆ?”
“ಇವತ್ತೇನು ಗೊತ್ತಾಗೋದು? ಮಗೂಗೆ ಜ್ವರ ಬಂದಿದೇಂತ ನಿನ್ನೇನೆ ಹೇಳಿ
ರ್ಲಿಲ್ವೆ ನೀನು?”
“ಹೇಳಿದ್ದೆ ಅಲ್ಲ? ಕೇಳ್ಕೊಂಡು, ಔಷಧೀನಾದರೂ ತಂದಿರಾ?”
“ನಾನು ತರಬೇಕೆ ಔಷಧಿ? ಆವತ್ತೆಲ್ಲ ಡಾಕ್ಟರ ಹತ್ತಿರ ಒಬ್ಬಳೇ ಹೋಗ್ತಿದ್ದೆ -"
“ಮಗೂಗೆ ಜ್ವರ ಬಂದಿದೆ ಕಣ‍್ರೀ. ನಿಮ್ಮ ಮಗೂಗೆ ಜ್ವರ!”
“ತಿಳೀತು ಅಮ್ಮಣ್ಣಿ. ನಮ್ಮ ಮಗೂಗೆ ಜ್ವರ ಬಂದಾಗ ನೀವು ಔಷಧಿ ತಂದು
ಕುಡಿಸಬಾರದೂಂತಿದೆಯೇನು?”
“ಥೂ! ಅದೇನು ಮಾತಾಡ್ತಿದಿರೋ ಮೊಂಡತನದ ಮಾತು. ಹೋಗಿ!
ಡಾಕ್ಟರನ್ನಾದರೂಕರಕೊಂಡ್ಬನ್ನಿ.”
ಒಂದು ಕ್ಷಣ ಉತ್ತರ ಬರಲಿಲ್ಲ. ಮೌನ ನಡುವೆ ಅತ್ತಿಂದಿತ್ತ ಸುಂಯ್
ಗುಟ್ಟಿತು.
ಆ ಬಳಿಕ, ನೇರವಾದ-ಸ್ವಲ್ಪ ಮೃದುವಾದಂತೆ ತೋರಿದ-ಸ್ವರದಲ್ಲಿ ಪುಟ್ಟಣ್ಣ
ಮಾತನಾಡಿದ:
“ಸುನಂದಾ, ಇನ್ನು ಮುಂದೆ ಹೀಗೆಲ್ಲ ಆಡ್ಬೇಡ. ನಾಳೆ ಬೆಳಗ್ಗೆ ಮಗೂನ
ಕರಕೊಂಡು ಹೋಗಿ ಡಾಕ್ಟರಿಗೆ ತೋರಿಸು. ಬೇಕಾದರೆ ಅವರನ್ನೇ ಕರೆಸು. ನನ್ನ
ಕೇಳ್ಬೇಡ. ಈ ಸಲ ಡಾಕ್ಟರ ಬಿಲ್ಲು ಕೊಟ್ಟಿದೆ ತಾನೆ? ಮುಂದಿನ ಸಲವೂ ಕೊಟ್ಟ
ರಾಯ್ತು. ಕೇಳಿಸ್ತಾ ನಾನು ಹೇಳಿದ್ದು.....?”
ಕೇಳಿಸದೆ? ಪ್ರತಿಯೊಂದು ಮಾತೂ ಕಾದ ಸೀಸದ ಹಾಗೆ ಆಕೆಯ ಕಿವಿಯೊಳಗೆ
ಇಳಿದಿತ್ತು.
...ಆಕೆ ಅಸಹಾಯಳಾಗಿ ದೀಪವಾರಿಸದೆ ಮಗುವಿನ ಬಳಿಯಲ್ಲಿ ರಾತ್ರಿಯೆಲ್ಲ