ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

52

ಕನಸು

“ಹೂಂ ಕಣ್ರೀ.”
ಅಲ್ಲಿಂದ ರಾಧಮ್ಮ ಅಡುಗೆ ಮನೆಯತ್ತ ಇಣಿಕಿ ನೋಡಿದರು.
“ಎಲ್ಲಾ ಆರಿ ಹೋಗ್ತಾ ಇದೆಯಲ್ಲ. ನೀವು ಊಟಕ್ಕೇಳಿ ಸುನಂದಾ, ಬಡಿ
ಸ್ತೀನಿ.”
“ಇಲ್ಲ ರಾಧಮ್ಮ. ಅವರೂ ಬರಲಿ.”
ಹೊತ್ತು ಗೊತ್ತು ಒಂದೂ ಇಲ್ಲದೆ ಮನೆಗೆ ಬರುವವರಿಗಾಗಿ ಯಾತಕ್ಕೋಸ್ಕರ
ಕಾಯುತ್ತಿರಬೇಕೋ—ಎಂದು ರಾಧಮ್ಮನ ಮನಸ್ಸು ಸುನಂದೆಯನ್ನು ಕೆಣಕಿ ಕೇಳ
ಬಯಸಿತು. ಆದರೂ ಆ ಬಯಕೆಯನ್ನು ತಡೆ ಹಿಡಿದು ಅವರೆಂದರು:
“ಗಂಡಸರದೇನು ಬಿಡೀಮ್ಮಾ. ಎಲ್ಲಿ ಬೇಕಾದರಲ್ಲಿ ತಿಂಡಿ ತಿನ್ತಿರ್ತಾರೆ. ಹೆಂಗಸರ
ಕಷ್ಟ ಅವರಿಗೇನು ಗೊತ್ತಾಗುತ್ತೆ? ನೀವು ಏಳಿ.”
ಆದರೆ ಸುನಂದಾ ಒಪ್ಪಲಿಲ್ಲ; ಗಂಡ ಬಂದ ಮೇಲೆಯೇ ಊಟ-ಎಂದಳು.
ಗಂಡ ಕೊಡುತಿದ್ದ ಹಿಂಸೆಯ ಬಗೆಗೆ ಹಗಲು ಅಷ್ಟೊಂದು ವರದಿ ಕೊಟ್ಟ
ಸುನಂದ ಈಕೆಯೇ ಅಲ್ಲವೇ? ಎಂದು ಒಂದು ಕ್ಷಣ ರಾಧಮ್ಮನಿಗೆ ವಿಸ್ಮಯವಾಯಿತು.
ವಿಸ್ಮಯದ ಜತೆಯಲ್ಲೆ, ಎಷ್ಟೊಂದು ಒಳ್ಳೆಯ ಹೆಂಗಸು ಸುನಂದಾ-ಎಂಬ ಅಭಿಮಾನ
ಮೂಡಿತು.
ಅವರಿಬ್ಬರೂ ಅಲ್ಲೇ ಬಹಳ ಹೊತ್ತು ಕುಳಿತರು, ಆ ಮಾತು ಈ ಮಾತು
ಆಡುತ್ತ-ನಡುನಡುವೆ ಮೌನವಾಗಿ...
“ಕೊನೇ ಬಸ್ಸೂ ಹೋಯ್ತೂಂತ ಕಾಣುತ್ತೆ”
—ಎಂದಳು ಸುನಂದಾ, ಹೊತ್ತು ತಿಳಿಯದೆ.
ಹನ್ನೊಂದು ದಾಟಿರಬೇಕೆಂದು ತಿಳಿದಿದ್ದ ರಾಧಮ್ಮ, ತೂಕಡಿಸುತ್ತಿರಬಹುದಾದ
ತನ್ನ ಗಂಡನ ನೆನಪಾಗಿ, ಮನೆಗೆ ಹೊರಡುವ ಯೋಚನೆ ಮಾಡಿದರು.
“ನಿಮ್ಮವರು ನಡೆದುಕೊಂಡೇ ಬಾರ್ತಾರೋ ಏನೋ”
—ಎಂದರು ರಾಧಮ್ಮ, ಏನನ್ನಾದರೂ ಹೇಳುವುದು ತನ್ನ ಕರ್ತವ್ಯವೆಂಬ
ದೃಷ್ಟಿಯಿಂದ.
ಅವರು ಎದ್ದರೆಂದು ಸುನಂದೆಯೂ ಎದ್ದಳು. ಇಬ್ಬರೂ ಬಾಗಿಲ ಬಳಿಗೆ
ಬಂದರು.
ಅಷ್ಟರಲ್ಲಿ ಪುಟ್ಟಣ್ಣನ ದರ್ಶನವಾಯಿತು. ಮನೆಯನ್ನು ಸಮೀಪಿಸುತಲಿದ್ದ
ಆತನ ಹೆಜ್ಜೆಗಳು ಭದ್ರವಾಗಿರಲಿಲ್ಲ.
“ಬಂದರು ಕಣೇ...”
—ಎಂದು ಆತನನ್ನು ನೋಡಿದೊಡನೆಯೇ ಹೇಳಿದ ರಾಧಮ್ಮ, 'ಬರ್ತೀನಿ
ಕಣೇ' ಎಂದೂ ಹೇಳಲು ಸಿದ್ಧರಾದರು.
ಆದರೂ ಆಕೆಯ ಕಾಲುಗಳು ತಡೆದು ಅಲ್ಲೇ ನಿಂತು, ಪುಟ್ಟಣ್ಣ ಒಳಬರಲು