ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

65

“ಅಷ್ಟೇನಾ?”
“ಹೂಂ.”
ರಾಧಮ್ಮ ಮಗನ ಬೆನ್ನು ತಟ್ಟಿದರು:
“ಜಾಣಮರಿ. ಇನ್ನೂ ಸ್ವಲ್ಪ ಹೊತ್ತು ಅಲ್ಲೇ ಇದ್ಬಿಟ್ಟು ಮನೆಗೆ ಬಂದ್ಬಿಡು.”
“ಹೂಂ.”
ಬಲು ಗಹನವಾದೊಂದು ಕಾರ್ಯದಲ್ಲಿ ಪಾಲುದಾರ ತಾನು ಎಂದು ತಿಳಿದಿದ್ದ
ಶ್ಯಾಮ, ಹೆಮ್ಮೆಯಿಂದಲೆ ಮತ್ತೆ ಅದೇ ಜಾಗಕ್ಕೆ ಆಡಲು ಹೋದ.
ಸುನಂದಾ ಮನಸ್ಸಿನೊಳಗಿದ್ದುದನ್ನು ಗಟ್ಟಿಯಾಗಿ ಹೇಳಿದಳು:
“ಬಹುಶಃ ಇಷ್ಟು ದಿವಸ ಶ್ಯಾಮೂನ ಅವರು ಅಲ್ಲಿ ಕಂಡೇ ಇಲ್ವೇನೊ?”
ರಾಧಮ್ಮ ಹಾಗೆಂದು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.
“ಹೇಳೋಕಾಗಲ್ಲ ಸುನಂದಾ ಆತ ಏನಾದರೂ ನಾಟಕ ಹೂಡಿದ್ದರೂ ಇರ
ಬಹುದು.”

****

ಹೊಸತೇನೂ ಅಲ್ಲ. ಆ ರಾತ್ರೆ ನಡೆದುದು ಬರಿಯ ಜೀವನ ನಾಟಕ.
ಎಷ್ಟೋ ಸಾರೆ ನಡೆದುದೇ ಈಗಲೂ. ಕಥೆ ಹಳೆಯದೇ. ನಟವರ್ಗ ಮಾತ್ರ ಬೇರೆ.
ಪುಟ್ಟಣ್ಣ ತಡವಾಗಿ ಮನೆಗೆ ಬರಲಿಲ್ಲ; ಬೇಗನೆ ಬಂದ. ಊಟಕ್ಕೇಳಲಿಲ್ಲ.
ಹೆಂಡತಿಯನ್ನು ತನ್ನ ಕೊಠಡಿಗೆ ಕರೆದು ಕೇಳಿದ:
“ನಿಮ್ಮೂರಿನಿಂದ ಕಾಗದ ಏನಾದರೂ ಬಂದಿತ್ತೆ?”
“ಇಲ್ಲ. ಯಾಕೆ ಕೇಳಿದಿರಿ?”
“ನಾಳೆ ನೀನು ತಾಯ್ಮನೆಗೆ ಹೊರಟ್ಹೋಗ್ಬೇಕು.”
“ಏನು ಹಾಗಂದರೆ?”
“ಕನ್ನಡ ಅರ್ಥವಾಗೊಲ್ವೇನು? ನಾಳೆ ನೀನು ಈ ಮನೆ ಬಿಡ್ಬೇಕು ಅಂದೆ.”
ಸುನಂದೆಗೆ ರೇಗಿತು.
“ಮಲಕೊಳ್ಳಿ ಈಗ. ನಿಮಗೆ ಮೈ ಸರಿಯಾಗಿಲ್ಲ. ನಾಳೆ ಬೆಳಗ್ಗೆ ಮಾತಾಡುವಿ
ರಂತೆ.”
ಕೋಟು ಬಿಚ್ಚಿ ಪ್ಯಾಂಟು ಸಡಿಲಿಸಲೆಂದು ಸೊಂಟಕ್ಕೆ ಕೈ ಹಾಕುತ್ತ ಪುಟ್ಟಣ್ಣ
ಕೇಳಿದ:
“ಮೈ ಸರಿಯಾಗಿಲ್ವಾ ನನಗೆ?”
“ಅಲ್ದೆ ಇನ್ನೇನು? ಕುಡಿದು ಮಾತಾಡ್ತಾ ಇದೀರಲ್ಲ ಬಾಯಿಗೆ ಬಂದದ್ನ,
ನಿಮಗೆ_”
ಸೊಂಟದಿಂದ ಚರ್ಮದ ಬೆಲ್ಟನ್ನೆಳೆದು ಬೀಸಿ ಹೊಡೆದ ಏಟಿಗೆ ಸುನಂದೆಯ

9