ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಸತೀಹಿತೈಷಿಣಿ (ಮಾಕಸಿಕ 1 \/ \ ರಾದರೂ ಬಂದಿರುವರೋ ? ಪ್ರಭಾ --ಎಲ್ಲರೂ ಬಂದು ಅಂಗಳದಲ್ಲಿದ್ದರು. ತಾರಾ-ಕುಮುದಮಿತ್ರನನ್ನು ನೋಡಿ 'ಮಗು! ನೀನು ಹೋಗಿ ಎಲ್ಲ ರನ್ನೂ ಸುಯಾಗಿ ಸನ್ಮಾನಿಸಿಕುಳ್ಳಿರಿಸು. ಕುಮುದೆಯು ತನ್ನ ಉಳಿದ ಸತ್ಕಾರಗಳಿಗೆ ಮೊದಲು ಮಾಡಲ, ಈದಿನ ಅವಳ ಗಾನ,ವಾದನ, ನೃತ್ಯಗೀತ-ವಿದ್ಯೆಗಳೂ, ಉತ್ತರ ಪ್ರತ್ಯುತ್ತರಗಳ ಎನೋದಸಂಭಾಷಣೆಯೂ ನಡೆಯುವವ, ಕುಮುದೆ! ಇನ್ನು ಹೊರಡು ; ನೋಡಿಲ್ಲ, ಅಕ್ಷಯಕುಮಾರ~-ಪ್ರಭಾಕರರಿಬ್ಬರೂ ಇಲ್ಲಿರುವರು. ಇವರು ಯಾರನ್ನೂ ಮೆಚ್ಚುವವರಲ್ಲ. ಇವ ಬಂದ ಸುಯೆನ್ನಿಸಿಕೊಳ್ಳುವಂತೆ ಸಿನಗೆ ನೇಮಿಸಿರುವ ಕೆಲಸವನ್ನು ನೀನು ಜಾಗರೂಕತೆಯಿಂದ ನಡೆಯಿಸಬೇಕು. ಕುಮುದೆ-ತಲೆದೂಗಿ ಮುಂದೆಬಂದು ಅಕ್ಷಯಕುಮಾರ ಸ್ಪಧೃತಿಗೆ ಳನ್ನು ನೋಡಿ “ಪ್ರಿಯಮಿತ್ರರೇ! ಸುಖಾಗಮನವನ್ನು ಕೋರು ತೇನೆ. ಮಂಟಪಕ್ಕೆ ಬರಬೇಕು.” ಎಂದು ನಲಿಯುತ್ತ ಹೇಳಿದಳು, ಅಕ್ಷಯ ತಾಯಿ ! ನಮಗಷ್ಟು ಗೌರವವೇನೂ ಅಗತ್ಯವಾಗಿ ಕಾಣ ಲಿಲ್ಲ. ಉಳಿದ ಅತಿಥಿ ಅಭ್ಯಾಗತರನ್ನು ಸತ್ಕರಿಸು, ನಡೆ! ನಾವು ಹಿಂದಿನಿಂದ ಬರುತ್ತೆದೆ. ತಾರಾ-ಏಕೆ? ಅಕ್ಷಯಕುಮಾರ! ನಿನ್ನನ್ನು ಮುಂದೆ ನಿಲ್ಲಿಸಿಕೊಂಡೇ ಉಳಿದವರನ್ನು ಆದರಿಸಬೇಕೆಂಬುದು ನನ್ನ ಇಷ್ಟವಲ್ಲವೆ ? ಅಕ್ಷಯ-ಸ್ವಾಮಿನಾಧ ! ನಾನು ತಮ್ಮ ದಾಸ್ಯಕ್ಕೆ ಪಾತ್ರನಲ್ಲದೆ, ತಮ್ಮ ಉಪಹಾರಕ್ಕೆ ಪಾತ್ರನಲ್ಲ ! ದಯೆಯಿಟ್ಟು ಕ್ಷಮಿಸ ಬೇಕು. ಬೇಕೆಂದರೆ, ತಮ್ಮ ಆಜ್ಞೆಯಾದರೆ, ನಾನೇ ಮುಂದಾ