ಪುಟ:ಪೈಗಂಬರ ಮಹಮ್ಮದನು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

NI, ಮಕ್ಕಾ ನಗರದ ಮುತ್ತಿಗೆ ದಿಂದ ಅಪ್ರತಿಭರಾಗಿ, ಯುದ್ಧಕ್ಕೆ ಸಿದ್ದರಾಗಿಲ್ಲದುದರಿಂದ, ವ್ಯರ್ಥವಾಗಿ ಹೋರಾಡಿ ಫಲವಿಲ್ಲವೆಂದು ಬಗೆದು ಸುಮ್ಮನಿರಬೇಕಾಯಿತು. ಹೀಗೆ ಶ್ರಮವಿಲ್ಲದೆಯೇ, ಮಕ್ಕಾ ನಗರವು ಮಹಮ್ಮದೀಯರ ವಶವಾಗಲು, ಮಹಮ್ಮದನು ಶತ್ರುಗಳ ಮುಖ್ಯಸ್ಥರನ್ನು ಸೆರೆ ಹಿಡಿದು ತರಬೇಕೆಂದು ಅಪ್ಪಣೆ ಮಾಡಿದನು. ಹಾಗೆ ಹಿಡಿದು ತಂದವರಲ್ಲಿ, ಶತ್ರುಗಳ ಅಧಿ ನಾಯಕನಾಗಿದ್ದ ಅಬೂ ಸುಫ್ಯಾನನೇ ಮೊದಲನೆಯವನು. ಅವನು ಬಹು ಕಾಲದಿಂದಲೂ ಮಹಮ್ಮದನಲ್ಲಿ ಅಪರಾಧಿಯಾಗಿದ್ದು ಅವನ ಶಿಷ್ಯರು ಕೆಲವರನ್ನು ಕೊಲೆ ಮಾಡಿದ್ದುದರಿಂದ, ತನಗೆ ಮರಣ ದಂಡ ನೆಯೇ ಗೊತ್ತಾದುದೆಂದು ನಿರ್ಧರಮಾಡಿಕೊಂಡಿದ್ದನು. ಆದರೆ ಮಹ ಮದನು ಅವನ ಅಪರಾಧಗಳಿಗಾಗಿ ಸ್ವಲ್ಪವೂ ಗದರಿಸದೆ ಮೆಲ್ಕು ಡಿ ಗಳಿಂದಲೇ ಅವನನ್ನು ಮಾತನಾಡಿಸಿ, ತಾನಾಗಿಯೇ ಅವನಿಗೆ ಕ್ಷಮಾಪಣೆ ಕೊಟ್ಟು ಅವನ ಆಸುರೀ ಭಾವವನ್ನು ಕ್ಷಣ ಮಾತ್ರದಲ್ಲಿ ನಿರ್ಮಲ ಮಾಡಿದನು. ಕೈಜರನ ಬಳಿಯಲ್ಲಿ ಮಹಮ್ಮದನ ವಿಚಾರವನ್ನು ಬಿನ್ನವಿಸಿ ದಾಗಲೇ ಮಹಮ್ಮದನ ಸದ್ಗುಣಗಳು ಅಬೂ ಸುಫ್ಯಾನನ ಹೃದಯವನ್ನು ಸೆರೆಹಿಡಿದಿದ್ದುವು. ಈಗ ಪ್ರತ್ಯಕ್ಷ ನಿದರ್ಶನದಿಂದ ಮಹಮ್ಮದನ ಮನಸ್ಸು ಎಷ್ಟು ನಿರ್ಮಲವಾದುದೆಂಬುದನ್ನು ಕಂಡು ಇಪ್ಪತ್ತು ವರುಷಗಳಿಂದ ಇಸ್ಲಾಂ ಮತಕ್ಕೆ ವಿರೋಧವಾಗಿದ್ದ ಸುಫ್ಯಾನನ ಕಲ್ಲುಮನನ್ನೂ ಕರಗಿ ಹೋಯಿತು. ಅವನು ಇಸ್ಲಾಂ ಮತವನ್ನವಲಂಬಿಸುವುದಾಗಿ ಒಪ್ಪಿ ಕೊಂಡನು. ಶತ್ತು ಪಕ್ಷದ ಇತರ ಮುಖ್ಯಸ್ಥರೂ ಮಹಮ್ಮದನಿಂದ ಪ್ರಾಣ ದಾನವನ್ನು ಪಡೆದು, ಅವನನ್ನು ಕೊಂಡಾಡಿ, ಅವನ ಸಾತ್ವಿಕ ವರ್ತನೆಗೆ ಮನ ಸೋತು ಮಹಮ್ಮದೀಯರಾಗಲು ಒಪ್ಪಿಕೊಂಡರು. ಮಹಮ್ಮದನ ಸೈನಿಕರು ಶತ್ತು, ಪಕ್ಷದವರನ್ನು ಹಿಡಿದು ಹಿಂಡು ಹಿಂಡಾಗಿ ತಂದು ಅವನ ಮುಂದೆ ನಿಲ್ಲಿಸಿದರು. ಚಿರ ಕಾಲದಿಂದಲೂ ಮಹಮ್ಮದನಲ್ಲಿ ಅಪರಾಧಿಗಳಾಗಿದ್ದು ದ್ವೇಷ ಬುದ್ದಿ ಸೆರೆಯಿಂದ ಂದ ವರ್ತಿಸಿ, ಅವನು ಮಕ್ಕಾ ನಗರದಲ್ಲಿದ್ದಾಗ ಅವನ ಅವನ ಅನುಯಾಯಿಗಳನ್ನೂ ಚಿತ್ರ ಹಿಂಸೆಗೆ ಗುರಿ ಮಾಡಿ ಸದೆಬಡಿಯುತ್ತಿದ್ದ ಅನೇಕ ಮಂದಿ ಆ ಬಿಡುಗಡೆ