________________
ಪೈಗಂಬರ ಮಹಮ್ಮ ದನು ಗುಂಪಿನಲ್ಲಿದ್ದರು. ಮಕ್ಕಾ ನಗರದಲ್ಲಿ ಅವನನ್ನು ಹಿಂಸಿಸಿದುದು ಸಾಲದೆ ಮೆದೀನಾ ನಗರಕ್ಕೆ ಅವನು ಓಡಿಹೋದ ಮೇಲೂ ಅವನಿಗೆ ಹಲವು ಬಾರಿ ತೊಂದರೆಯನ್ನು ಕೊಟ್ಟು ಕಾಡಿದ ಅನೇಕರು ಅವನೆದುರಿಗೆ ಸಾಲಾಗಿ ನಿಂತಿದ್ದರು. ಹಿಂದಣ ಘಟನಾವಳಿಯು ನೆನಪಿಗೆ ಬಂದೊಡನೆಯೇ ದೇಹವು ಕ್ರೋಧ ಕಂಪಿತವಾಗುವಂತಿದ್ದಿತು. ದ್ವೇಷ ಸಾಧನೆಗೆ ಅದೆಂತಹ ಸುಸಮಯ ? ಮಹಮ್ಮದನು ಅವರೆಲ್ಲರನ್ನೂ ಸಾಲು ಗಲ್ಲಿಗೆ ಏರಿ ಸಿದ್ದರೂ ಯಾರೂ ಅಡ್ಡಿ ಪಡಿಸುವಂತಿರಲಿಲ್ಲ. ಒಂದು ವಿಧದಲ್ಲಿ ನೋಡಿದರೆ, ಮಹಮ್ಮದನ ಉದಾತ್ತತೆಯ ಸತ್ವ ಪರೀಕ್ಷೆಯ ಕಾಲವೇ ಆಗ ಒದಗಿದ್ದಿತೆಂದರೂ ಸಲ್ಲುವುದು. ಮುಹಮ್ಮದನು ಅವರನ್ನು ಕುರಿತು, “ ನಾನು ನಿಮ್ಮೊಡನೆ ಯಾವ ರೀತಿಯಲ್ಲಿ ವರ್ತಿಸುವೆನೆಂದು ನೀವು ಭಾವಿಸಿರುವಿರಿ ?” ಎಂದು ಕೇಳಲು, ಅವರೆಲ್ಲರೂ ಏಕ ವಾಕ್ಯತೆಯಿಂದ, * ಪ್ರೀತಿಪಾತ್ರನಾದ ಸಹೋದರನು ತನ್ನ ಒಡಹುಟ್ಟಿದವರಲ್ಲಿ ವರ್ತಿಸು ವಂತೆ ಎಂದು ಉತ್ತರ ಹೇಳಿದರು. ಈ ಮಾತನ್ನು ಕೇಳಿ ಮಹ ಮೃದನ ಮನಸ್ಸು ಕರಗಿ ಹೋಗಿ ಅವನ ಕಣ್ಣುಗಳಿಂದ ಫಳ ಫಳನೆ ನೀರು ಸುರಿಯಿತು. ಅವನು ಗದ್ಯದ ಸ್ವರದಿಂದ, “ ಆಗಲಿ, ನಿಮ್ಮಲ್ಲಿ ಸಹ ದರನಂತೆಯೇ ವರ್ತಿಸುವೆನು ಎಂದು ಹೇಳಿ ಎಲ್ಲರನ್ನೂ ಸೆರೆಯಿಂದ ಬಿಡುಗಡೆ ಮಾಡಿ, ಅವರಿಗೆ ಸ್ವಾತಂತ್ರ ದಾನವನ್ನು ಕೊಟ್ಟು, ಶತ್ರು ಗಳಾಗಿದ್ದವರನ್ನೂ ಮಿತ್ರರನ್ನಾಗಿ ಮಾರ್ಪಡಿಸಿದನು. ಮಹಮ್ಮದನು ಅವರೆಲ್ಲರನ್ನೂ ಮನ್ನಿ ಸಿದುದು ಮಾತ್ರವೇ ಅಲ್ಲದೆ, ಅವರ ಕಡೆಯು ಹೆಂಗುಸರನ್ನಾಗಲಿ ಹುಡುಗರನ್ನಾಗಿ ತನ್ನವರು ಯಾರೊಬ್ಬರೂ ಬಾಧೆಪಡಿಸಕೂಡದೆಂದು ಕಟ್ಟಾಜ್ಞೆ ಬೋಧನೆ ಮಾಡಿದ್ದನು. ಮಕ್ಕಾ ನಗರದಲ್ಲಿ ಕೈಯಿಸ್ ಎಂಬ ಭಾಗದಲ್ಲಿದ್ದವರು ಮಾತ್ರ ಎದುರುಬಿದ್ದು, ಅಸ್ತ್ರ ಚಾಲನವಿಲ್ಲದೆ ಅವರನ್ನು ಕೈವಶ ಮಾಡಿಕೊಳ್ಳುವುದು ಸಾಧ್ಯವಾಗಿ, ಖಾಲಿದ್ ಮುಂತಾದ ಕೆಲವು ಮಂದಿ ಶತ್ರುಗಳನ್ನು ಕೊಲ್ಲಲೇ ಬೇಕಾ ಯಿತು. ಇದಕ್ಕೂ ಮಹಮ್ಮದನು ಆಗ್ರಹಗೊಳ್ಳಲು, ನಿರ್ವಾಹವಿಲ್ಲದೆ ತಾವು ನರ ವಧೆಗೆ ಕೈಹಾಕಬೇಕಾಯಿತೆಂದು ಸೈನಿಕರು ಅವನಿಗೆ ಅರಿಕೆ