ಪುಟ:ಪೈಗಂಬರ ಮಹಮ್ಮದನು.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮದನ ರೂಪವೂ ಗುಣಗಳೂ C೧೩ ತಿದ್ದನು. ಒಮ್ಮೆ, ಮಹಮ್ಮದನು ಒಬ್ಬ ಧನಿಕನೊಡನೆ ಮಾತನಾಡು ತಿದ್ದಾಗ, ಅದೇ ಸಮಯದಲ್ಲಿ ತನ್ನೊಡನೆ ಇಸ್ಲಾಂ ಸಿದ್ಧಾಂತದ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದ ಅಂಧನಾದ ಒಬ್ಬ ಬಡವ ನೊಡನೆ ಕಾರಣಾಂತರದಿಂದ ಮಾತನಾಡುವುದಕ್ಕಿಲ್ಲದೆ ಹೋಯಿತು. ಆ ಬಡವನನ್ನು ತಾನು ಅಲಕ್ಷ್ಯದಿಂದ ಕಂಡಹಾಗಾಯಿತೆಂಬ ಮನೋವ್ಯಥೆ ಯಿಂದ ಮಹಮ್ಮದನು ವಿಶೇಷ ಪಶ್ಚಾತ್ತಾಪ ಪಟ್ಟನಂತೆ. ಈ ತಪ್ಪಿತದಿಂದ ಭಗವಂತನು ಕೂಡ ಅಸಮಾಧಾನಪಟ್ಟನೆಂದು ಖುರಾನಿನಲ್ಲಿ ಹೇಳಿದೆಯಂತೆ. ಇದು ಹಾಗಿರಲಿ ; ಅಲ್ಲಿಂದ ಮುಂದೆ ಆ ಅಂಧನನ್ನು ಕಂಡಾಗಲೆಲ್ಲ ಮಹಮ್ಮದನು ತಾನೇ ಅವನ ಬಳಿಗೆ ಹೋಗಿ ಅವನನ್ನು ಗೌರವದಿಂದ ಕಂಡು, ಆ ಪುಣ್ಯಾತ್ಮನಾದ ನಿನ್ನ ದೆಸೆಯಿಂದ ಭಗವಂತನು ನನ್ನನ್ನು ತಪ್ಪುಹಿಡಿದು ಬುದ್ದಿ ಕಲಿಸಿದನಯ್ಯಾ! ನಿನ್ನನ್ನು ನಾನು ಎಷ್ಟು ಆದರದಿಂದ ಕಂಡರೂ ಸಾಲದು ” ಎಂದು ಹೇಳುತ್ತಿದ್ದನು. ಆಗಿನ ಕಾಲದಲ್ಲಿ ಗುಲಾಮರನ್ನು ಅತಿ ನಿಕೃಷ್ಟರನ್ನಾಗಿ ಕಾಣು ತಿದ್ದುದು ವಾಡಿಕೆಯಾಗಿದ್ದರೂ ಮಹಮ್ಮದನು ಆ ವಿಧದ ಭೇದ ಭಾವವನ್ನಿಡದೆ, ಗುಲಾಮರಾಗಲಿ ದರಿದ್ರರಾಗಲಿ ಯಾರು ತನ್ನನ್ನು ಭೋಜನಕ್ಕೆ ಕರೆದರೂ ತಪ್ಪದೆ ಅವರ ಮನೆಗೆ ಹೋಗುತ್ತಿದ್ದನು. ಧನಾಧ್ಯತೆಯಾಗಲಿ ದಾರಿದ್ರವಾಗಲಿ ಘನತೆ ಗೌರವಗಳಿಗೆ ಕಾರಣವಾಗ ಕೂಡದೆಂಬುದನ್ನೂ, ಸದ್ಗುಣಗಳ ಆಧಾರದ ಮೇಲೆಯೇ ಮನುಷ್ಯನ ಯೋಗ್ಯತೆಯನ್ನು ನಿರ್ಣಯಿಸಬೇಕೆಂಬುದನ್ನೂ ಮಹಮ್ಮದನು ಕಾರ್ಯತಃ ಆಚರಿಸಿ ತೋರಿಸಿದನು. ಮಹಮ್ಮದನು ಊಟದಲ್ಲಿಯ ಉಡುಪಿನಲ್ಲಿ ಕೇವಲ ಸಾಮಾನ್ಯನಂತಿರುತ್ತಿದ್ದನು. ತನಗೆ ಮೃಷ್ಟಾನ್ನ ಭೋಜನವೇ ಆಗ ಬೇಕೆಂಬ ಬಯಕೆ ಇಲ್ಲದೆ, ಯಾರು ಯಾವ ಪದಾರ್ಥ ಊಟ ಉಡುಪುಗಳು ವನ್ನು ಉಣಬಡಿಸಿದರೂ ಅವನು ಸಂತೋಷದಿಂದ ಊಟ ಮಾಡುತ್ತಿದ್ದನು. ಗೋಧಿಯಿಂದ ಮಾಡಿದ ಪದಾರ್ಥಗಳು, ಖರ್ಜೂರ, ಹಾಲು-ಇವೇ ಅವನ ಮುಖ್ಯಾಹಾರಗಳು, ಅವನು ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿರಲಿಲ್ಲ. ಜೇನುತುಪ್ಪದ