ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

COV ಪೈಗಂಬರ ಮಹಮ್ಮದನು ಮೇಲೆ ಅವನಿಗೆ ಬಹಳ ಪ್ರೀತಿ. ಈರುಳ್ಳಿ ಮುಂತಾದ ವಾಸನೆಯ ವಸ್ತು, ಗಳು ಅವನಿಗೆ ಸೇರವ್ರು, ಮಹಮ್ಮದನು ಪರಿವಾರ ಸಮೇತನಾಗಿ ಯಾರ ಮನೆಗಾದರೂ ಭೋಜನಕ್ಕೆ ಹೋದಾಗ, ಅಲ್ಲಿ ಯಾವುದಾದರೂ ಆಹಾರ ಓಡಾರ್ಥವಾದಂತಿದ್ದ ಪದಾರ್ಥವು ಸಾಲದಂತಿದ್ದರೆ, ಅದರ ಸೂಕ್ಷ್ಮ ವನ್ನರಿತು, ಅದನ್ನು ಹೆಚ್ಚಾಗಿ ಕೇಳದಂತೆ ತನ್ನ ವರಿಗೆ ಸೂಚನೆ ಕೊಡುತ್ತಿದ್ದನು. ಮಹಮ್ಮ ದನು ದರಿದ್ರನಂತಿದ್ದುದರಿಂದ ಅವನ ಮನೆಯಲ್ಲಿ ಅನೇಕ ವೇಳೆ ಆಹಾರ ವಸ್ತುಗಳು ತಕ್ಕಷ್ಟಿಲ್ಲದೆ ಅಡಿಗೆಗೆ ಒಲೆಯನ್ನೇ ಹೊತ್ತಿಸುತ್ತಿರಲಿಲ್ಲ. ಆಗ ಅವನೂ ಅವನ ಮನೆಯವರೂ ಒಂಟೆಯ ಹಾಲನ್ನೊ ಮೇಕೆದು ಹಾಲನ್ನೊ ಕುಡಿದು, ಖರ್ಜೂರವನ್ನು ತಿಂದು ಸಂತೋಷದಿಂದ ಕಾಲ ಯಾಪನ ಮಾಡುತ್ತಿದ್ದರು. ಅವನು ವಿಲಾಸ ಪ್ರಿಯನಲ್ಲದುದರಿಂದ, ಯಾವ ಬಟ್ಟೆ ದೊರೆತರೆ ಅದನ್ನೇ ಹೊದೆದುಕೊಳ್ಳುತ್ತ, ಯಾವ ಬಣ್ಣದ ರುಮಾಲು ದೊರೆತರೆ ಅದನ್ನೇ ಸುತ್ತಿಕೊಳ್ಳುತ್ತ, ಕೆಲವು ವೇಳೆ ತೇಪೆ ಹಾಕಿದ ಹಳೆಯ ಬಟ್ಟೆಗಳನ್ನೂ ಧರಿಸುತ್ತಿದ್ದನು. ಹಾಗೆ ಮಾಡುವುದು. ಹೀನಾಯವೆಂಬ ಮನೋಭಾವನೆಯೇ ಅವನಿಗಿರಲಿಲ್ಲ. ದೊರೆಗಳಿಗೂ ಚಕ್ರವರ್ತಿಗಳಿಗೂ ಮೊಹರು ಮಾಡಿದ ಪತ್ರಗಳನ್ನು ಬರೆಯುವ ಆವಶ್ಯ. ಕತೆಯುಂಟಾದ ಮೇಲೆಯೇ ಅವನು ಮುದ್ರೆಯುಂಗುರವನ್ನಿಟ್ಟು ಕೊಂಡುದು, ಹೆಚ್ಚೇಕೆ ? ನಾಲ್ಕಾರು ಮಂದಿಯೊಡನೆ ಮಹಮ್ಮದನು ಕುಳಿತಿದ್ದಾಗ ಯಾರಾದರೂ ಅಪರಿಚಿತರು ಅಲ್ಲಿಗೆ ಬಂದಲ್ಲಿ, ಮಹಮ್ಮದ ನನ್ನು ಹೊರಗಿನ ವೇಷದಿಂದ ಗುರುತು ಹಿಡಿಯುವುದು ಸಾಧ್ಯವೇ ಇರಲಿಲ್ಲ. ಸತ್ವಶಾಲಿಗಳು ಬಾಹ್ಯಾಡಂಬರವಿಲ್ಲದೆಯೇ ಘನತೆ ಗೌರವ ಗಳನ್ನು ಪಡೆಯುವರೆಂಬುದಕ್ಕೆ ಮಹಮ್ಮದನೇ ಪ್ರತ್ಯಕ್ಷ ನಿದರ್ಶನ ವೆನಿಸಿದ್ದನು. ಮಹಮ್ಮದನು ಹಿತ ಭಾಷೆಯಾಗಿಯ ಮಿತ ಭಾಷೆಯಾಗಿಯೂ ಇದ್ದನು; ಎಲ್ಲರೊಡನೆಯ ಸರಸವಾಗಿ ಮಾತನಾಡುತ್ತಿದ್ದರೂ, ಔಚಿತ್ಯವರಿತು ಎಂತಹ ಸಂದರ್ಭದಲ್ಲಿಯೂ ಅವನು ಮಾತಿನ ಮಳೆ ಮಾತು ಯನ್ನು ಸುರಿಸುತ್ತಿರಲಿಲ್ಲ; ತಾನು ಹೇಳಬೇಕಾದು ದೇನೂ ಇಲ್ಲದೆ ಹೋದರೆ ಮೌನದಿ೦ದಿ ರುತ್ತಿದ್ದನು. ಅವನು