ಪುಟ:ಪೈಗಂಬರ ಮಹಮ್ಮದನು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮ ದನ ರೂಪವೂ ಗುಣಗಳೂ ದೊಡ್ಡವರಲ್ಲಿ ತೋರಿಸುತ್ತಿದ್ದ ವಿನಯವೂ, ಬಡವರಲ್ಲಿ ತೋರಿಸುತ್ತಿದ್ದ ಪ್ರೀತಿ ಮಮತೆಗಳೂ, ದುರಹಂಕಾರಿಗಳಲ್ಲಿ ತೋರಿಸುತ್ತಿದ್ದ ದರ್ಪವೂ ಸುಪ್ರಸಿದ್ದವಾದ ವಿಷಯಗಳು. ಅವನು ತನ್ನೆದುರಿಗೆ ಬಂದವರ ಸಂಸ್ಕೃತಿಯ ಅಂತಸ್ತನ್ನರಿತು ಅದಕ್ಕನುಗುಣವಾಗಿ ಅವರೊಡನೆ ಮಾತ ನಾಡುತ್ತಿದ್ದನು. ಮಕ್ಕಳನ್ನು ಕಂಡರಂತು, ಅವನಿಗೆ ಬಹಳ ಪ್ರೀತಿ ; ಅವರನ್ನು ಕಂಡಾಗಲೆಲ್ಲ ತಡೆದು ನಿಲ್ಲಿಸಿ, ಆದರದಿಂದ ಅವರ ಕೆನ್ನೆಗಳನ್ನು ಸವರಿ, ಪ್ರೀತಿಯಿಂದ ಅವರೊಡನೆ ಮಾತನಾಡಿದ್ದಲ್ಲದೆ ಅವನು ಮುಂದಕ್ಕೆ ಹಜ್ಜೆಯಿಡುತ್ತಲಿರಲಿಲ್ಲ. ಮುದ್ದಿಗಾಗಿ ಅವರಿಗೆ ಅಡ್ಡ ಹೆಸರುಗಳನ್ನಿಟ್ಟು ಆ ಹೆಸರುಗಳಿಂದ ಅವರನ್ನು ಕೂಗಿ ಸಂತೋಷ ಪಡಿಸುವುದು ಅವನ ಪದ್ದತಿ. ಪ್ರಭು ಪದವಿಯ ಕರ್ತವ್ಯಗಳನ್ನು ನಡೆಯಿಸುವುದರಲ್ಲಿ ಮಹ ಮೈದನಿಗೆ ಅನೇಕ ಮಂದಿ ಸೇವಕರಿದ್ದರು; ಅವರೊಡನೆಯ ಅವನು ಮೃದು ಮಧುರವಾಗಿ ದಯೆಯಿಂದ ಮಾತನಾಡುತ್ತಿದ್ದನಲ್ಲದೆ ಅವರ ಮನಸ್ಸು ನೋಯುವಂತೆ ಎಂದಿಗೂ ಮಾತನಾಡುತ್ತಿರಲಿಲ್ಲ. ಅವನು ಕೋಪಿಸಿಕೊಳ್ಳುತ್ತಿದ್ದುದೇ ಬಹಳ ಅಪೂರ್ವ ; ಒಂದು ವೇಳೆ ಅಲ್ಪ ಸ್ವಲ್ಪ ಕೋಪಿಸಿಕೊಂಡರೂ, ಕ್ಷಣ ಮಾತ್ರದಲ್ಲಿ ಶಾಂತನಾಗುತ್ತಿದ್ದನು. ಅವನು ಎಂದೂ ದುರ್ಭಾಷೆಯನ್ನಾ ಡಿದವನಲ್ಲ. ಒಮ್ಮೆ, ಯುದ್ಧ ಭೂಮಿ 'ಯಲ್ಲಿ ಶತ್ರುಗಳನ್ನು ಶಪಿಸುವಂತೆ ಅವನ ಅನುಚರರು ಅವನನ್ನು -ಪ್ರಾರ್ಥಿಸಿದಾಗ ಮಹಮ್ಮದನು, ಉದ್ರೇಕವು ಲೇಶ ಮಾತ್ರವೂ ಇಲ್ಲದ ಗಂಭೀರ ವಾಣಿಯಿಂದ, “ ನಾನು ಶಪಿಸುವುದಕ್ಕಾಗಿ ಈ ಲೋಕಕ್ಕೆ ಬಂದಿಲ್ಲ ; ಮಧುರ ವಚನಗಳನ್ನಾಡಿ ಜನರನ್ನಾ ಶೀರ್ವದಿಸುವುದಕ್ಕೆ ಸುಗ ಭಗವಂತನು ನನ್ನಲ್ಲಿಗೆ ಕಳುಹಿಸಿದ್ದಾನೆ' ಎಂದು ಉತ್ತರ ಹೇಳಿ ದನು. ಬೀದಿಯಲ್ಲಿ ಯಾರನ್ನು ಕಂಡರೂ, ತಾನೇ ಮೊದಲು ಅವರಿಗೆ ಸಲಾಮು ಮಾಡಿ, ಆದರದಿಂದ ಅವರ ಕ್ಷೇಮ ಸಮಾಚಾರಗಳನ್ನು ವಿಚಾರಿಸುತ್ತಿದ್ದನು ; ಕಷ್ಟ ಪಡುತ್ತಿದ್ದವರೊಡನೆ ಮಧುರ ವಚನ ಗಳನ್ನಾಡಿ, ಅವರಿಗೆ ತನ್ನ ಕೈಯಲ್ಲಾದ ಸಹಾಯ ಮಾಡುವುದರಲ್ಲಿ ಮಹಮ್ಮದನು ಅಸಮಾನನು. ಸ್ನೇಹಿತರೆಂದರೆ ಮಹಮ್ಮದನಿಗೆ ಪ್ರಾಣ ; ನಗು ಮುಖದಿಂದಲ್ಲದೆ