________________
೧೧೬ ಪೈಗಂಬರ ಮಹಮ್ಮದನು ಅವನು ಮಿತ್ರರೊಡನೆ ಮಾತನಾಡಿದುದನ್ನು ಯಾರೂ ಕಂಡರಿಯರು, ಸ್ನೇಹಿತರಲ್ಲಿ ವಿನೋದ ಗೋಷ್ಠಿಯಿಂದಿದ್ದು, ಹಾಸ್ಯ ಸ್ನೇಹ ಪರತೆ ಪ್ರತಿಹಾಸ್ಯಗಳಿಂದ ಸಂತೋಷಿಸುತ್ತ ಮಹಮ್ಮದನು ತಾನು ಮತ ಸ್ಥಾಪಕನೆಂಬ ಬಿಂಕವನ್ನು ತೋರ್ಪಡಿಸಿ ದವನೇ ಅಲ್ಲ. ಯಾರನ್ನೇ ಆಗಲಿ ಹಿಂದೆ ದೂರುವುದು ಕುತ್ತಿತ ಪ್ರವೃತ್ತಿ ಯೆಂಬುದನ್ನು ಮಹಮ್ಮದನು ಚೆನ್ನಾಗಿ ಬಲ್ಲನಾದ ಕಾರಣ, ಎದುರಿಗಿಲ್ಲ ದವರನ್ನು ಯಾರಾದರೂ ಅವನೊಡನೆ ದೂರಿದರೆ ಅಂಥವರನ್ನು ಮಹ ಮೃದನು ಆಕ್ಷೇಪಿಸುತ್ತಿದ್ದನು. ಅವನು ಯಾರಲ್ಲಾದರೂ ಸ್ನೇಹ ಮಾಡಿದರೆ, ಅವರೊಡನೆ ಎಂದೆಂದಿಗೂ ಮೈತ್ರಿಯಿಂದಿರುತ್ತಿದ್ದನು. ಸನ್ನಿತನೆಂದರೆ ಮಹಮ್ಮದನು ಅರಬ್ಬಿದವರೆಲ್ಲರಿಗೂ ಆದರ್ಶ ಪುರುಷ ನಾಗಿದ್ದನು. ದಾನ ಧರ್ಮದಲ್ಲಿಯೂ ಮಹಮ್ಮದನು ಇಸ್ಲಾಂ ಮತಸ್ಥರೆಲ್ಲರಿಗೂ ಮಾದರಿಯಾಗಿದ್ದನು. ಅವನಷ್ಟು ಕೊಡಗೈಯುಳ್ಳವನು ಅರಬ್ಬಿ ದೇಶ ದಲ್ಲಿ ಮತ್ತೆ ಯಾವನೂ ಇರಲಿಲ್ಲವೆಂದು ಅಲೀಯು. ದಾನ ಧರ್ಮ ಹೇಳಿದ್ದಾನೆ. ಮಹಮ್ಮದೀಯರು ವಿಶೇಷವಾಗಿ, ಧರ್ಮಸಹಾಯಮಾಡುವ ವಾಡಿಕೆಯುಳ್ಳ ರವಾನ್ ತಿಂಗಳಲ್ಲಿ ಒಮ್ಮೆ, ಮಹಮ್ಮದನು ತೊಂಬತ್ತು ಸಾವಿರ ದ ಹಂ ನಾಣ್ಯಗಳನ್ನಿಟ್ಟುಕೊಂಡು ಕುಳಿತನು. ಬಡವರು ಯಾಚನೆಗಾಗಿ ಬರತೊಡಗಿದರು. ಸ್ವಲ್ಪ ಹೊತ್ತಿನಲ್ಲಿಯೇ ಮಹಮ್ಮದನು ಆ ನಾಣ್ಯ ಗಳೆಲ್ಲವನ್ನೂ ದಾನ ಮಾಡಿ ಮೇಲಕ್ಕೆದ್ದನು. ಆವೇಳೆಗೆ ಸರಿಯಾಗಿ ಮತ್ತೊಬ್ಬನು ಬಂದು ಯಾಚಿಸಲು, ಅವನಿಗೆ ಕೊಡುವುದಕ್ಕೆ ಮಹ ಮದನಲ್ಲಿ ಒಂದು ನಾಣ್ಯವೂ ಇರಲಿಲ್ಲ. ಅದಕ್ಕೆ ಮಹಮ್ಮದನು, 'ಅಯ್ಯಾ ! ನಿನಗೆ ಈಗ ಬೇಕಾದ ವೆಚ್ಚಕ್ಕೆ ಮತ್ತಾರಿಂದಲಾದರೂ ಸಾಲ ತೆಗೆದುಕೊ, ಆ ಸಾಲವನ್ನು ನಾನು ತೀರಿಸುವೆನು ಎಂದು ಹೇಳಿದನು. ಇದನ್ನು ಕೇಳಿ, ಮಹಮ್ಮದನ ಬಳಿಯಲ್ಲಿದ್ದ ಶಿಷ್ಯನೊಬ್ಬನು, ಗುರು. ದೇವ ! ಇದೆಲ್ಲಿಯ ನ್ಯಾಯ ? ನಿಮ್ಮ ಬಳಿಯಿರುವ ಹಣವನ್ನು ಅವಶ್ಯ ವಾಗಿ ದಾನ ಮಾಡಿರಿ ; ನಿಮ್ಮಲ್ಲಿಲ್ಲದ ಹಣವನ್ನು ಮತ್ತೊಬ್ಬನಿಂದ ಸಾಲ