ಪುಟ:ಪೈಗಂಬರ ಮಹಮ್ಮದನು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ಪೈಗಂಬರ ಮಹಮ್ಮದನು ಗಳು ಪರಿಸ್ಪುಟವಾಗಿರುತ್ತವೆ; ಆದರೆ, ಎಲೆಯ ಹಿಂದಣ ಕಡ್ಡಿಯ ಗುಣಗಳಿರುವುದಿಲ್ಲ. ಹಣ್ಣಿನಲ್ಲಿ ಹೂವಿನ ಪರಿಮಳವು ಅತಿ ಸೂಕ್ಷ್ಮ ರೂಪದಲ್ಲಿರುತ್ತದೆ; ದೇಹವನ್ನು ಪೋಷಿಸುವ ಹೊಸ ಗುಣವು ಕಾಯಿಯ ಅವಸ್ಥೆಯಿಂದಲೂ ಅದರಲ್ಲಿ ಪರಿಸ್ಪುಟಗೊಂಡು ಬಂದಿರುತ್ತದೆ; ಆದರೆ, ಹಣ್ಣಿನಲ್ಲಿ ಎಲೆಯ ಗುಣಗಳೊಂದೂ ಇರುವುದಿಲ್ಲ. ಇದೇ ರೀತಿ ಯಲ್ಲಿಯೇ ಜೀವಾತ್ಮನ ಪ್ರಗತಿ ಮಾರ್ಗ ಪರಿಣಾಮವೂ ಅಂತಸ್ತು ಅಂತ ಸ್ವಾಗಿ ಸಾಗುತ್ತದೆ. ಪ್ರತಿಯೊಂದು ಅಂತಸ್ತಿನಲ್ಲಿಯ ಹೊಸ ಗುಣಗಳು ವೃದ್ಧಿಯಾಗುತ್ತ ಬರುವುದಲ್ಲದೆ, ಅದರ ಹಿಂದಣ ಅಂತಸ್ತಿನ ಲಕ್ಷಣಗಳು ಅತಿ ಸೂಕ್ಷ್ಮರೂಪದಲ್ಲಿರುತ್ತವೆ; ಆದರೆ, ಅದಕ್ಕೂ ಹಿಂದಿದ್ದ ಅಂತಸ್ತಿನ ಪ್ರಾಮುಖ್ಯ ಲಕ್ಷಣಗಳೊಂದೂ ಕಾಣಬರುವುದಿಲ್ಲ. ಜೀವಾತ್ಮನು ಮುಂದುವರಿದು ಪರಿಷ್ಕರಣ ಹೊಂದಿದುದರ ಫಲವೇ ಅದಕ್ಕೆ ಕಾರಣ. ಹಾಗೆ ಆ ಲಕ್ಷಣಗಳು ಅಳಿದುಹೋದಲ್ಲದೆ ಜೀವಾತ್ಮನು ಪ್ರಗತಿಯನ್ನು ಸಾಧಿಸುವಂತೆಯೇ ಇಲ್ಲ. ಈ ನಿಯಮಗಳು ಪ್ರಗತಿ ಸಾಧನೆಗೆ ಅತ್ಯಾವ ಶ್ಯಕ, ಜೀವನಲ್ಲಿ ಅಡಗಿರುವ ಪ್ರಕೃತಿ ಸಂಬಂಧವಾದ ಸ್ಕೂಲ ಸ್ವಭಾವದ ದೆಸೆಯಿಂದ ತದುಚಿತವಾದ ರಾಗ ದ್ವೇಷಾದಿಗಳು ಹುಟ್ಟುವುವು. ಅವು ಗಳಿಂದ ಪಾಪ ಹೇತುವಾದ ಚೋದನ ಶಕ್ತಿಯುಂಟಾಗಿ, ಅದರ ದೆಸೆಯಿಂದ ಅನರ್ಥಗಳುಂಟಾಗುವುವು. ಆದಕಾರಣ, ಪ್ರಗತಿ ಮಾರ್ಗದಲ್ಲಿ ಮುಂದು ವರಿದು ಶ್ರೇಯಸ್ಸನ್ನು ಕಾಣಲಿಚ್ಚಿಸುವ ಪ್ರತಿಯೊಬ್ಬನೂ ಅಂತಹ ಅನರ್ಥಕ್ಕೆಡೆಗೊಡದೆ, ಪಾರಿಶುಧ್ಯವನ್ನು ಕಾಪಾಡಿಕೊಳ್ಳಬೇಕು. ಜೀವಾತ್ಮನು ಪ್ರಗತಿ ಮಾರ್ಗದಲ್ಲಿ ಮುಂದುವರಿಯಲು ಪ್ರತಿಬಂಧಕ ವಾದ ಪಾಪಾಸಕ್ತಿಯು ಪರಿಹಾರವಾಗಬೇಕಾದರೆ ಭಗವಂತನ ಅನುಗ್ರಹ ದಿಂದಲೇ, ಅದಕ್ಕಾಗಿಯೇ ಭಗವಂತನನ್ನು ಭಕ್ತಿಯಿಂದ ಪ್ರಾರ್ಥಿಸಿ ಕೊಳ್ಳಬೇಕಾದುದು ಅತ್ಯಾವಶ್ಯಕ. ದೇವತಾ ಪ್ರಾರ್ಥನೆಯು (ನಮಾಜು. ಮುಂತಾದುದು) ಏರ್ಪಟ್ಟಿರುವುದು ಇದಕ್ಕೋಸುಗವೇ, ಜೀವಾತ್ಮನು ಪ್ರಗತಿ ಸಾಧನೆಯಿಂದ ಹಿಂದೆ ಬಿದ್ದಿರುವ ದಾರುಣ ಸ್ಥಿತಿಯೇ ನರಕದ ದುಃಖಾವಾಸವೆಂದು ಸಾಂಕೇತಿಕವಾಗಿ ಸೂಚಿಸಲ್ಪಟ್ಟಿದೆಯೆಂದೂ, ಸುಗತಿ ಸಾಧನೆಯ ಏಳು ಅಂತಸ್ತುಗಳೂ ಏಳು ಸ್ವರ್ಗಗಳೆಂಬುದಾಗಿ