ಪುಟ:ಪೈಗಂಬರ ಮಹಮ್ಮದನು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೩೯ ವಿಚಾರ ಪಾತರೆನಿಸಿದ ಮಹಾ ಪುರುಷರು ಎಂದೆಂದಿಗೂ ಲೋಕ ವಂದ್ಯರೇ ಸರಿ, ಖುರಾನಿನಲ್ಲಿ ಹೇಳಿರುವ ಒಂದು ವಿಚಾರವು ಮಾತ್ರ ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು ; ಆದರೆ ಅದರ ಗೂಢಾರ್ಥವನ್ನು ಗಮನಿಸಿದರೆ ಅದರಲ್ಲಿ ಅಷ್ಟು ಆಶ್ಚರ್ಯವೇನೂ ಏಳು ಸ್ವರ್ಗಗಳ ತೋರುವುದಿಲ್ಲ. ಸ್ವರ್ಗಗಳು ಏಳಿ ರು ವು ವೆ೦ದು ಖುರಾನಿನಲ್ಲಿ ಹೇಳಿದೆ. ಜೀವಾತ್ಮನ ಸುಧಾರಣಾ ಕ್ರಮದಲ್ಲಿ ಏಳು ಅ೦ತ ಸ್ತುಗಳು ೦ಟೆ೦ಬು ದನ್ನು ಸೂಚಿಸಿ, ಜೀವಾತ್ಮನ ಪ್ರಗತಿ ಮಾರ್ಗ ಸಂಚಾರವನ್ನು, ಸ್ಕೂಲವಾಗಿ ಏಳು ಮಜಲುಗಳೆಂಬುದಾಗಿ ವಿಭಾಗಿಸಿ ಆ ರೀತಿ ಹೇಳಿದೆಯೇ ವಿನಾ “ಬೇರೆಯಲ್ಲ. ಪ್ರತಿಯೊಂದು ಅಂತಸ್ತಿನಲ್ಲಿಯೂ ಜೀವಾತ್ಮನಲ್ಲಿ ಎರಡು ಮುಖ್ಯ ಲಕ್ಷಣಗಳು ಕಂಡುಬರುತ್ತವೆ: ಹಿಂದಣ ಅಂತಸ್ತಿನಲ್ಲಿದ್ದ ಗುಣ ಗಳೇ ಮತ್ತಷ್ಟು ಸೂಕ್ಷ್ಮರೂಪದಲ್ಲಿ ನೆಲೆಗೊಂಡಿರುವುದು ಮೊದಲನೆಯ ಲಕ್ಷಣ ; ಹಿಂದಣ ಅಂತಸ್ತಿನಲ್ಲಿ ಕಂಡುಬಾರದೆ ಇದ್ದ ಕೇವಲ ಹೊಸ ಗುಣಗಳೇ ಹುಟ್ಟಿರುವುದು ಎರಡನೆಯ ಲಕ್ಷಣ. ಈ ಹೊಸ ಗುಣಗಳು `ಪರಿಸ್ಪುಟವಾಗುವುದೇ ಈ ಹೊಸ ಅಂತಸ್ತಿನಲ್ಲಿ ನಡೆಯುವ ಕಾರ್ಯ. ಈ ವಿಷಯವನ್ನು ಮತ್ತಷ್ಟು ಸ್ಪಷ್ಟಗೊಳಿಸುವುದಕ್ಕಾಗಿ ಮುಂದಣ ನಿದರ್ಶನವನ್ನು ಕೊಡಬಹುದು :-ಒಂದು ಬೀಜವು ಮೊಳೆತು, ಗಿಡ ವಾಗಿ, ಹೂಬಿಟ್ಟು, ಫಲಕೊಟ್ಟು ಪರಿಣಾಮ ಹೊಂದುವ ಕ್ರಮವನ್ನು ಪರ್ಯಾಲೋಚಿಸೋಣ, ಬೀಜವು ಫಲವಾಗಿ ಪರಿಣಮಿಸುವ ಮೊದಲು ಅನೇಕ ಪರಿಣಾಮಗಳನ್ನು ಹೊಂದುತ್ತದೆ. ಆದರೂ, ಅವುಗಳನ್ನು ಸ್ಕೂಲವಾಗಿ ಒಂದು ವಿಧದಲ್ಲಿ ವಿಂಗಡಿಸಬಹುದು : ಮೊಳಕೆಯಲ್ಲಿ ಬೀಜದ ಗುಣವೂ ಇದೆ, ಹೊಸದಾಗಿ ಅಂಕುರವೂ ಹೊರಟಿರುತ್ತದೆ; ಎಲೆಯಲ್ಲಿ ಅಂಕುರದ ಗುಣವೂ ಇದೆ, ಅಂಕುರಕ್ಕೆ ಸಂಬಂಧಪಡದ ಹೊಸ ಗುಣವೂ ಇದೆ; ಹೂವಿನಲ್ಲಿರುವ ರೇಕುಗಳು ಎಲೆಯ ಗುಣಗಳನ್ನು ಸ್ವಲ್ಪ ಮಟ್ಟಿಗೆ ಹೋಲುವುವಾದರೂ ಎಲೆಗಿಂತಲೂ ಅತಿ ಮೃದುವಾಗಿ, ಸೂಕ್ಷ್ಮ ರೂಪ ದಲ್ಲಿರುತ್ತವೆ. ಇಷ್ಟೇ ಅಲ್ಲ; ಹೂವಿನಲ್ಲಿ ಸೌರಭವೇ ಮುಂತಾದ ಗುಣ