ಪುಟ:ಪೈಗಂಬರ ಮಹಮ್ಮದನು.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ಪೈಗಂಬರ ಮಹಮ್ಮದನು ನಮ್ಮ ಯಾವ ರಹಸ್ಯವೂ ಅವನ ಕಣ್ಣಿಗೆ ಮರೆಯಾಗಲಾರದು. ಸ್ವರ್ಗ ಲೋಕವೂ ಭೂಲೋಕವೂ ಅವನಿಂದಲೇ ಹುಟ್ಟಿದುವು ; ಪರಿಣಾಮದಲ್ಲಿ ಅವು ಅವನಲ್ಲಿಯೇ ಅಸ್ತ್ರವಾಗುವುವು. ಆರ್ತರ ಮೊರೆಯನ್ನು ಲಾಲಿಸಿ, ಅವರ ದುಃಖವನ್ನು ಪರಿಹರಿಸುವವನೂ ಅವನೇ ; ನಮ್ಮ ಪ್ರಾರ್ಥನೆಗೆ ಮೆಚ್ಚಿ ನಮ್ಮ ಅಪರಾಧಗಳನ್ನು ಕ್ಷಮಿಸುವ ಪ್ರಭುವೂ ಅವನೇ ; ತಾನು ಒಲಿದವರಿಗೆ ವಿವೇಕವೆಂಬ ಬೆಳಕನ್ನು ಅನುಗ್ರಹಿಸುವವನೂ, ಅವನೇ, ಸರ್ವ ಸೃಷ್ಟಿಗೊಡೆಯನಾಗಿ ಸತೃಭುವಾದ ಆ ಭಗವಂತನನ್ನು ಎಲ್ಲರೂ ಕೊಂಡಾಡಿ ಕೃತಾರ್ಥರಾಗೋಣ ! ಎಲ್ಲ ಮಾನವರ ವಿಚಾರಣೆ ಗಾಗಿ ಅವನು ಗೊತ್ತುಮಾಡಿರುವ ದಿನದಲ್ಲಿ, ಅವನು ಬರಹೇಳಿದ ಉತ್ತರ ಕ್ಷಣದಲ್ಲಿಯೇ ನಮ್ಮ ಆತ್ಮಗಳು ಅವನಲ್ಲಿಗೆ ಓಡುವುವು. ಅಂದು, ಸೂರ್ಯ ಚಂದ್ರರು ಮುದುರಿಕೊಳ್ಳುವರು, ನಕ್ಷತ್ರಗಳು ಕೆಳಕ್ಕುರು, ಳುವುವು, ಪರ್ವತಗಳು ಚಲಿಸುವುವು, ಸಮುದ್ರಗಳು ಕುದಿಯುವುವು; ಅಂದು, ಜೀವಾತ್ಮಗಳಿಗೆ ಯಾತನಾ ದೇಹಗಳು ಲಭಿಸುವುವು : ಒಂದೆಡೆ ಯಲ್ಲಿ ನರಕದ ಜ್ವಾಲೆಗಳು ಪ್ರಜ್ವಲಿಸಿ ಉರಿಯುವುವು, ಮತ್ತೊಂದೆಡೆ ಯಲ್ಲಿ ಸ್ವರ್ಗದ್ಯಾನವು ಕಂಗೊಳಿಸುವುದು. ಅಂದು, ಪಾಪ ಪುಣ್ಯ ಗಳ ಕಡತದ ಸುರುಳಿಯು ತೆರೆಯಲ್ಪಡುವುದು. ಜೀವರುಗಳು ತಮ್ಮ ತಮ್ಮ ಕರ್ಮಗಳಿಗನುರೂಪವಾದ ಫಲಗಳನ್ನನುಭವಿಸುವರು. ಆಗ, ಅವರವರ ಕರ್ಮಗಳು ಎಂತಹವೆಂಬ ಪುಣ್ಯ ಪಾಪ ವಿಮರ್ಶೆಯು. ಸುಖ ದುಃಖಾನುಭವ ಸಮೇತವಾಗಿ ಎಲ್ಲರಿಗೂ ಮನದಟ್ಟಾಗುವುದು. ಆಗಲೂ ಭಗವಂತನು ಪರಮ ಕರುಣಾನಿಧಿಯೆಂಬ ತನ್ನ ಹೆಸರನ್ನು ಸಾರ್ಥಕಗೊಳಿಸಿ ತನ್ನ ಕೃಪಾ ಕಟಾಕ್ಷವನ್ನು ಕರುಣಿಸಿ ಜೀವರು ಗಳನ್ನುದ್ಧರಿಸಲು ಸಿದ್ಧನಾಗಿರುವನು. ಆಗಲಾದರೂ ನಮ್ಮ ಅಪರಾಧ. ಗಳನ್ನು ಕ್ಷಮಿಸುವಂತೆ ದಯಾ ಸಮುದ್ರನಾದ ಆ ಭಗವಂತನನ್ನು ಬೇಡಿಕೊಳ್ಳೋಣ!' ಈ ವಿಧದ ಭಗವತೃರೂಪವನ್ನು ಯಾವ ಮತದವರು ತಾನೆ ಒಟ್ಟಿನಲ್ಲಿ ಒಪ್ಪುವುದಿಲ್ಲ? ಯಾವ ದೇಶದವರಾದರೇನು ? ಯಾವ ಕಾಲ ದವರಾದರೇನು ? ಯಾವ ಕುಲದವರಾದರೇನು ? ಭಗವಂತನ ಕೃಪೆಗೆ