ಪುಟ:ಪೈಗಂಬರ ಮಹಮ್ಮದನು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ನಾಗುವನು' ಎಂದು ಹೇಳಿರುವುದು, ಪ್ರಾರ್ಥನೆಯ ಕಾಲದಲ್ಲಿ ನಾವು ಭಗವಂತನನ್ನು ಕುರಿತು ಹೇಳುವ ವಿವಿಧ ಗ್ರಾಮಗಳಲ್ಲಿಯೂ ಸೂಚಿತವಾಗಿರುವ ಸದ್ಗುಣಗಳನ್ನು ಯಥಾ ಶಕ್ತಿಯಾಗಿ ನಾವು ನಮ್ಮ ಅನುಷ್ಠಾನದಲ್ಲಿ ತಂದುಕೊಳ್ಳುವುದೇ ನಿಜವಾದ ಭಗವದಾರಾಧನೆ ಎಂಬುದನ್ನು ಖುರಾನಿನಲ್ಲಿ ಮಹಮ್ಮದನು ಘಂಟಾಘೋಷವಾಗಿ ಸಾರಿ ಹೇಳಿದ್ದಾನೆ. ಇದು ಒಟ್ಟು ಮನುಷ್ಯತ್ವಕ್ಕೆ ಅನುಗ್ರಹಿಸಿದ ಉಪದೇಶವಲ್ಲವೆ ? .ಇದರಂತೆಯೇ, ಬೈಬಲಿನಲ್ಲಿ ಭಗವದ್ಗೀತೆ ಯಲ್ಲಿಯ ಉಪದೇಶಿಸಿರುವ ಅಮೋಘ ತತ್ತ್ವಗಳೂ ಆಯಾ ಮತಸ್ಮ ರಿಗೆ ಮಾತ್ರವೇ ಅಲ್ಲದೆ ಒಟ್ಟು ಪ್ರಪಂಚಕ್ಕೇ ಉಪಾದೇಯವಾಗಿರುವುವು. ಮಾತೃರ ರಹಿತರಾದ ಸತ್ಪುರುಷರು ಯಾರೂ ಇದನ್ನು ಅಲ್ಲವೆನ್ನರು. ಈ ವಿಷಯದಲ್ಲಿ ಮಹಮ್ಮದನು ಬೋಧಿಸಿರುವುದೇನೆಂದರೆ : ಜನರು ಉಚಿತ ರೀತಿಯಲ್ಲಿ ಭಗವಂತನನ್ನಾರಾಧಿಸುವುದರಿಂದ ಭಗವಂತ ನಿಗೆ ಯಾವ ಪ್ರಯೋಜನವೂ ಇಲ್ಲ ; ಭಗವಂತನು ಜೀವೇಶ್ವರ ಸಂಬಂಧ ಒಬ್ಬನೇ ಎಂಬ ತತ್ತ್ವವನ್ನು ಮರೆತು, ವಿಗ್ರಹಗಳೇ ದೇವರುಗಳೆಂಬ ಭಾವನೆಯಿಂದಿದ್ದರೂ ಭಗವಂತನಿಗೆ ಯಾವದೊಂದು ನಷ್ಟವೂ ಇಲ್ಲ; ಅದರಿಂದ ಅವನ ಯಶಸ್ಸಿಗೂ ಕುಂದಕವುಂಟಾಗದು. ಮನುಷ್ಯನು ತನ್ನ ಉದ್ಧಾರಕ್ಕಾಗಿಯೇ ಭಗವಂತನು ಒಬ್ಬನೇ ಎಂಬುದನ್ನು ನಂಬಿ, ಅವನನ್ನು ಸರಿಯಾದ ರೀತಿ ಯಲ್ಲಿ ಆರಾಧಿಸಬೇಕು. ಭಗವಂತನ ಪತಿ ನಿಧಿಯಾಗಿ ಈ ಲೋಕದಲ್ಲಿರ ತಕ್ಕವನು ಮನುಷ್ಯನೇ, ಜೀವಾತ್ಮನು ತಾನು ಪರಮಾತ್ಮನ ಸೇವಕ ನಾಗಿಯೂ, ಅವನ ಪ್ರತಿ ನಿಧಿಯಾಗಿಯೂ ಈ ಲೋಕದಲ್ಲಿರತಕ್ಕವ ನೆಂಬುದನ್ನು ಗಮನಿಸಿ ಅದಕ್ಕನುಗುಣವಾಗಿ ವರ್ತಿಸಬೇಕು. ಭಗ ವಂತನ ಸೃಷ್ಟಿಯ ಉದ್ದೇಶವು ಭೂಲೋಕದಲ್ಲಿ ಮಾನವನ ಪ್ರಯತ್ನ ದಿಂದಲೇ ಸಾರ್ಥಕ್ಯವನ್ನು ಹೊಂದಬೇಕು. ಹೀಗಾದುದಕ್ಕೆ ಜಗತ್ತ ಲ್ಯಾಣವೇ ಮುಖ್ಯ ಲಕ್ಷಣ. ಆದಕಾರಣ, ಮನುಷ್ಯನು ಭಗವಂತನ ಸದ್ಗುಣಗಳನ್ನು , ತಾನೂ ಅನುಕರಿಸಿ ಅನುಷ್ಠಾನದಲ್ಲಿ ತಂದುಕೊಳ್ಳ ಬೇಕು. ಸೃಷ್ಟಿಯ ಸದುದ್ದೇಶವು ನೆರವೇರಲು ಇದೊಂದೇ ಮಾರ್ಗ.