ಪುಟ:ಪೈಗಂಬರ ಮಹಮ್ಮದನು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೪೫ ಭಗವಚ್ಚತನವು ಸಮಷ್ಟಿ ರೂಪದಿಂದ ಈ ಪ್ರಪಂಚದಲ್ಲಿ ಯಾವ ರೀತಿ ಯಾಗಿ ವರ್ತಿಸುತ್ತಿದೆಯೋ ಅದೇ ರೀತಿಯಾಗಿ ದೇಹವೆಂಬ ಸಣ್ಣ ಪ್ರಪಂಚದಲ್ಲಿ ಜೀವ ಚೇತನವೂ ವರ್ತಿಸಬೇಕು. ಮಾನವರು ಈ ವಿಧ ವಾಗಿ ಭಗವಂತನೊಡನೆ ಸಹಕರಿಸಿ ವರ್ತಿಸುತ್ತ, ಧಾನ ಪರಾಯಣರಾಗಿ ಕಾಲವನ್ನು ಕಳೆಯಬೇಕು. ಆದಕಾರಣ, ಮತ ಧರ್ಮವನ್ನು ಪರಿಪಾಲಿಸುವುದು ಕೇವಲ ಪಾರಲೌಕಿಕ ಫಲವೊಂದಕ್ಕಾಗಿಯೇ ಅಲ್ಲ; ಇಹ ಪರಗಳೆರಡರಲ್ಲಿಯೂ ಮತ ಧರ್ಮಾನುಷ್ಟಾನದ ದೆಸೆಯಿಂದ ನಮ್ಮ ಜನ್ಮವು ಸಾರ್ಥಕವಾಗಬೇಕಾಗಿದೆ. ಹಾಗಾಗಬೇಕಾದರೆ ನಾವೆಲ್ಲರೂ ಭಗವಂತನ ಸೇವಕರೆಂದು ಬಗೆದು ಅವನನ್ನು ಪ್ರಾರ್ಥಿಸುವುದರಿಂದ ಮಾತ್ರವೇ ತೃಪ್ತಿ ಹೊಂದದೆ ನಮ್ಮಲ್ಲಿ ಅವ್ಯಕ್ತವಾಗಿ ಅಡಗಿರುವ ಸದ್ಗುಣ ಗಳನ್ನೂ ಶಕ್ತಿ ಸಾಮರ್ಥ್ಯಗಳನ್ನೂ ಪರಿಸ್ಪುಟಗೊಳಿಸಿ, ಭಗವಂತನ ಪತಿ ನಿಧಿಗಳೆಂಬ ಪವಿತ್ರವಾದ ಹೆಸರಿಗೆ ನಾವು ಅರ್ಹರಾಗಿ ಪರಿಣಮಿಸ ಬೇಕಾದುದೂ ಅತ್ಯಾವಶ್ಯಕ. ಜೀವಾತ್ಮನು ಸ್ವಭಾವತಃ ಪರಿಶುದ್ದನೆಂಬುದೂ, ಪಾಪವು ದೇಹ ಧಾರಣೆ ಮಾಡಿದ ಮೇಲೆ ಆಗಂತುಕವಾಗಿ ಸಂಘಟಿಸತಕ್ಕುದೆಂಬುದೂ ಇಸ್ಲಾಂ ಮತದ ಸಿದ್ಧಾಂತಗಳು, ಪ್ರಾರಬ್ಧ ಕರ್ಮದ ಜೀವಾತ್ಮನು ಪರಿಶುದ್ದನು ಈ ವಿಚಾರವನ್ನೂ , ಪುನರ್ಜನ್ಮವುಂಟೆಂಬ ವಿಚಾರವನ್ನೂ

  • ಮಹಮ್ಮದೀಯರು ನಂಬುವುದಿಲ್ಲ. ಭಗವಂತನು ಮಾಡಿರುವ ಸಮಗ್ರ ಸೃಷ್ಟಿಯ ಉತ್ತಮವಾದುದೆಂಬುದೇ ಅವರ ಅಭಿಪ್ರಾಯ. * ಭಗವಂತನು ಸೃಷ್ಟಿಸಿರುವ ಸಮಸ್ತ ವಸ್ತುಗಳೂ ಒಳ್ಳೆಯವೇ, ಮನುಷ್ಯತ್ವವು ಪರಿಶುದ್ಧವಾದುದು; ಅದು ಮಂಗಳಕರ ವಾದುದೂ ಅಹುದು, ಕ್ರಮ ತಪ್ಪಿ ಕೆಲಸ ಮಾಡುವುದೂ, ಅತ್ಯಾ ಚಾರವೂ, ಪಾಪ ಮಯವೆನಿಸಿ ದುಃಖ ಹೇತುಗಳಾಗುವುವು, ಅಫೀಮ, ರಸ ಗಂಧಕ ಪಾಷಾಣಾದಿಗಳೂ ಯಾವ ಯಾವ ಕಾರ್ಯಕ್ಕಾಗಿ ಸೃಷ್ಟಿ ಯಾಗಿವೆಯೋ ಆ ಕಾರ್ಯಗಳಿಗಾಗಿಯೇ ಅವನ್ನು ಸರಿಯಾದ ಪ್ರಮಾಣ ದಲ್ಲಿ ಉಪಯೋಗಿಸಿದರೆ, ಭಗವಂತನನುಗ್ರಹಿಸಿದ ಮಂಗಳ ದ್ರವ್ಯಗಳೆನಿಸಿ ಕೊಳ್ಳುವುವು; ಇಲ್ಲದೆ, ವಿರುದ್ಧವಾದ ಉದ್ದೇಶಗಳಿಗಾಗಲಿ, ಹೆಚ್ಚಿನ