ಪುಟ:ಪೈಗಂಬರ ಮಹಮ್ಮದನು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಪೈಗಂಬರ ಮಹಮ್ಮದನು ಪ್ರಮಾಣದಲ್ಲಾಗಲಿ ಉಪಯೋಗಿಸಿದರೆ ಪ್ರತಿಯೊಂದೂ ಮಾರಕ ದ್ರವ್ಯ ವಾಗಿ ಪರಿಣಮಿಸುವುದು. ಭಗವಂತನ ಸೃಷ್ಟಿಗೆ ಸೇರಿದ ಉತ್ತಮ ವಸ್ತುಗಳನ್ನು ಕೂಡ ಮಿತಿ ಮೀರಿ ಉಪಯೋಗಿಸಿದರೆ ಅವೂ ಕೇವಲ ವಿರೋಧಕರವಾಗಿ ಪರಿಣಮಿಸುತ್ತವೆ ಎಂದು ಖುರಾನಿನಲ್ಲಿ ಹೇಳಿದೆ. ಪರಸ್ಪರ ಭೇದ ಭಾವಗಳಿಲ್ಲದೆ ಒಕ್ಕಟ್ಟಿನಿಂದಿರುವ ವಿಷಯದಲ್ಲಿ ಇಂದಿಗೂ ಮಹಮ್ಮದೀಯರು ಸುಪ್ರಸಿದ್ದರು. ಇಸ್ಲಾಂ ಧರ್ಮದ ಮುಂದೆ ಮಹಮ್ಮದೀಯರೆಲ್ಲರೂ ಸಮಾನರೆಂಬುದೇ ಭ್ರಾತೃ ಭಾವ ಅವರ ಭಾವನೆ. ಎಲ್ಲರೂ ಒಬ್ಬ ಭಗವಂತನ ಭಕ್ತರಾದ ಮೇಲೆ, ಒಬ್ಬ ಗುರುವಿನ ಶಿಷ್ಯರಾದಮೇಲೆ, ಭೇದ ಭಾವಗಳೆಂಬ ಅವ್ಯವಸ್ಥೆಯೇಕೆಂಬುದೇ ಅವರ ಪ್ರಶ್ನೆ, ಮಹಮ್ಮದೀಯ. ರಲ್ಲಿಯೂ ಸುನ್ನಿ , ಷಿಯಾ ಮುಂತಾದ ಸಂಗಡ ವಿಭೇದಗಳಿವೆ. ಆದರೂ, ಒಟ್ಟಿನಲ್ಲಿ ನೋಡಿದರೆ, ಅವರಲ್ಲಿ ನೆಲೆಸಿರುವ ಭ್ರಾತೃ ಭಾವವೂ ಐಕ ಮತ್ಯವೂ ಅಭಿನಂದ್ಯವೆನ್ನಲು ಅಡ್ಡಿಯಿಲ್ಲ. ಮಕ್ಕಾ ಯಾತ್ರೆಯ ಕಾಲದಲ್ಲಿ ಈ ಗುಣಗಳು ಮತ್ತೂ ಪ್ರಕಾಶಕ್ಕೆ ಬರುವುವಂತೆ, ನಾನಾ ದೇಶಗಳಿಗೆ ಸೇರಿದ ನಾನಾ ಭಾಷೆಗಳನ್ನಾಡುವ ಅಕ್ಕೋಪಲಕ್ಷ ಜನರು. ಅಲ್ಲಿ ಒಟ್ಟುಗೂಡಿದರೂ, ಅವರೆಲ್ಲರೂ ಕೇವಲ ಸ್ವಕೀಯರಂತೆಯೇ ವರ್ತಿಸುತ್ತ, ಎಷ್ಟೋ ಕಾಲದಿಂದ ಒಟ್ಟಿಗಿದ್ದು ಪ್ರೀತಿ ಮಮತೆಗಳನ್ನು ಗಳಿಯಿಸಿಕೊಂಡವರಂತೆ ಅನ್ನೋನ್ಯವಾಗಿ ಯಾತ್ರೆಯನ್ನು ಜರುಗಿಸು, ವರಂತೆ, ಮಹಮ್ಮದನ ಉಪದೇಶವು ಕಾರ್ಯ ರೂಪದಲ್ಲಿ ಪರಿವರ್ತಿತ ವಾಗಿ ಅದರ ಮಹಿಮೆಯು ಇಂದಿಗೂ ಅಚ್ಚಳಿಯದೆ ನಿಂತಿರುವುದಕ್ಕೆ ಇದಕ್ಕಿಂತಲೂ ಹೆಚ್ಚಾದ ನಿದರ್ಶನವು ಬೇಕಾಗಿಲ್ಲ. ಮಹಮ್ಮದೀಯರು ಇತರ ಮತ ಸ್ಥಾಪಕರನ್ನೂ ಗೌರವಿಸ. ಬೇಕೆಂಬುದು ಆ ಮತದ ಮತ್ತೊಂದು ಮುಖ್ಯ ತತ್ಯ. ಇದನ್ನು ಆಚರಣೆಗೆ ತಾರದ ಮಹಮ್ಮದೀಯರು ಅನೇಕ ಮತಸ್ಥಾಪಕರುಗಳ ಫಾ ಮಂದಿ ಇರಬಹುದಾದರೂ ಅದಕ್ಕೆ ಮಹಮ್ಮದನು. ಎಂದಿಗೂ ಹೊಣೆಯಲ್ಲ. ಋಷಿಗಳ ಮತ್ತು ಸ್ಮತಿ ಕಾರರ ಆದೇಶಗಳಿಗೆ ವಿರುದ್ಧವಾಗಿ ಕೆಲವರು ಭಾರತೀಯರು ವರ್ತಿಸಿ