ಪುಟ:ಪೈಗಂಬರ ಮಹಮ್ಮದನು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೪೭ ದರೆ, ಅವರ ಈ ವಿಧದ ವರ್ತನೆಗೆ ಋಷಿಗಳನ್ನೂ ಸ್ಮೃತಿಕಾರರನ್ನೂ ದೂರಬಹುದೆ ? ಭಗವಂತನು ಸಮಷ್ಟಿ ಭಾವನೆಯಿಂದ ನೋಡತಕ್ಕವ ನಾದುದರಿಂದ ಎಲ್ಲ ಜನಾಂಗಗಳೂ ಉದ್ಧಾರವಾಗಬೇಕೆಂಬುದು ಅವನ ಘನವಾದ ಉದ್ದೇಶ. ಆದುದರಿಂದ ದೇಶ ಕಾಲಗಳಿಗನುಗುಣವಾಗಿ ಅವನು ಎಲ್ಲ ಜನಾಂಗಗಳಿಗೂ ಮತ ಸ್ಮಾಸಕರನ್ನು ತಪ್ಪದೆ ಕಳು ಹಿಸಿಕೊಟ್ಟೇ ಇರುತ್ತಾನೆ. ಆದಕಾರಣ, ಸ್ವಮತದಲ್ಲಿ ವಿಶೇಷ ಶ್ರದ್ದೆ 'ಯನ್ನಿಟ್ಟುಕೊಂಡಿದ್ದರೂ, ಅನ್ಯ ಮತಗಳಲ್ಲಿ ದ್ವೇಷವನ್ನು ಬೆಳೆಯಿಸದೆ ಇರುವುದೇ ವಿವೇಕಿಗಳ ಲಕ್ಷಣ. ಮಹಮ್ಮದನು ಈ ತತ್ತ್ವವನ್ನು “ಚೆನ್ನಾಗಿ ಅರಿತಿದ್ದರು. ನಮ್ಮ ಈ ಭಾರತ ಭೂಮಿಯಲ್ಲಿಯೂ ಇದೇ ತತ್ವ ಎಷ್ಟೋ ಕಾಲಕ್ಕೆ ಹಿಂದಿನಿಂದಲೂ ರೂಢ ಮಲವಾಗಿ ನೆಲೆ ಗೊಂಡಿದೆ. ಆದುದರಿಂದಲೇ ಪ್ರಾಚೀನ ಕಾಲದಿಂದಲೂ, ನಾನಾ ಮತ ಸಿದ್ಧಾಂತಗಳನ್ನು ದರ್ಶನಗಳೆಂಬ (View-points) ಒಂದೇ ಹೆಸರಿನಿಂದ ಕರೆಯುವುದು ಇಲ್ಲಿಯ ವಾಡಿಕೆ, ಸರ್ವದರ್ಶನ ಸಂಗ್ರಹವೆಂಬ ಗ್ರಂಥವು ಸುಪ್ರಸಿದ್ಧವಾದುದು, ಈ ವಿಚಾರವು ಹಾಗಿರಲಿ; ಎಲ್ಲ ಮತ ಸ್ಥಾಪಕರೂ ನಿರ್ದೋಷಿ ಗಳಾದ ಮಹಾ ಪುರುಷರೆಂದೇ ಮಹಮ್ಮದನ ಭಾವನೆ. ಯೇಸು ಕ್ರಿಸ್ತನೇ ಮುಂತಾದ ಮತ ಸ್ಥಾಪಕರನ್ನು ಅವನು ಗೌರವಿಸಿದ್ದಾನೆ. ಅನ್ಯ ಮತ ಸಿದ್ಧಾಂತಗಳನ್ನು ಖಂಡನೆ ಮಾಡದೆ ಸ್ವಮತ ಸಿದ್ಧಾಂತವನ್ನು ರೂಢ ಮಲವಾಗಿ ಸ್ಥಾಪಿಸುವುದು ಸಾಧ್ಯವಲ್ಲದಿದ್ದರೂ, ಅನ್ಯ ಮತ ಸ್ಥಾಪಕರಲ್ಲಿ ದ್ವೇಷವನ್ನೂ ಅವಜ್ಞತೆಯನ್ನೂ ತೋರಿಸದೆಯೇ ಈ ಉದ್ದೇಶವನ್ನು ಸಾಧಿಸಿಕೊಳ್ಳಬಹುದು. ಅನೇಕ ಮಂದಿ ಮಹನೀಯರು ಹಾಗೆ ಮಾಡಿದ್ದಾರೆ; ಅಂಥವರಲ್ಲಿ ಮಹಮ್ಮದನೂ ಒಬ್ಬನು. “ ಹಿಂದೆ, ಭಗವಂತನ ಅನುಗ್ರಹದಿಂದ ಮತ ಸ್ಥಾಪಕರನ್ನು ಪಡೆಯದೆ ಇದ್ದ ಯಾವ ಜನಪದವೂ ಈ ಭೂಮಂಡಲದಲ್ಲಿಲ್ಲ' ಎಂಬುದಾಗಿಯೂ, “ಎಲೈ ಮಹಮ್ಮದನೆ ! ನಿನಗೆ ನನ್ನಿಂದ (ಭಗವಂತನಿಂದ) ಅನುಗ್ರಹಿಸಲ್ಪಟ್ಟಿರುವ ಇಸ್ಲಾಂ ಮತದಲ್ಲಿಯೂ, ಹಿಂದೆ ಇತರರಿಗೆ ಅನುಗ್ರಹಿಸಲ್ಪಟ್ಟಿರುವ ಇತರ ಮತಗಳಲ್ಲಿಯ ಗೌರವವನ್ನಿಟ್ಟು, ಅವೆಲ್ಲವೂ ನನ್ನಿಂದಲೇ