________________
೧೬೦ ಪೈಗಂಬರ ಮಹಮ್ಮದನು ನಾಲೆ ದರಷೆ ಇನ್ನೂ ಹೆಚ್ಚಾಗಿಯೋ ಆಗುವ ಸಂಭವವುಂಟು, ಇಂತಹ ಸಂದರ್ಭಗಳಲ್ಲಿ ಸಮಾಜದ ದುಷ್ಪರಿಣಾಮವನ್ನು ತಪ್ಪಿಸುವುದು ಕ್ಕಾಗಿ ಬಹು ಪತ್ನಿತ್ವಕ್ಕೆ ಅವಕಾಶ ಕೊಡುವುದೇ ಉತ್ತಮವೆಂದು ತೋರುವುದು. ಕೆಲವರು ದಂಪತಿಗಳು ಮಕ್ಕಳಿಲ್ಲದೆಯೇ ಬಹಳ ಕಾಲ ವಿರಬಹುದು. ವಂಶದ ಹೆಸರನ್ನು ಹೇಳುವುದೂ ಮಕ್ಕಳಿಲ್ಲದಿದ್ದರೆ ಅಂತಹ ದಂಪತಿಗಳಿಗೆ ದುಸ್ಸಹವಾದ ದುಃಖವುಂಟಾಗುವುದು. ಇಂತಹ ಸಂದರ್ಭಗಳಲ್ಲಿ, ಗಂಡನನ್ನು ಎರಡನೆಯ ಮದುವೆ ಮಾಡಿಕೊಳ್ಳುವಂತೆ ಹೆಂಡಿತಿಯೇ ಬಲಾತ್ಕರಿಸಿ ಸವತಿಯೊಡನೆ ಸಂಸಾರ ಮಾಡಲು ಇಚ್ಚಿಸುವ ದಾದರೆ, ಗಂಡನು ಅದಕ್ಕೆ ಸಮ್ಮತಿಸಬೇಕಾಗುವುದು. ಇಂತಹ ಸಂದರ್ಭ ಗಳು ಅನೇಕರ ಅನುಭವದಲ್ಲಿ ಬಂದಿವೆ. ನಮ್ಮ ಭರತ ಖಂಡದಲ್ಲಿಯ ಅನೇಕ ಇತರ ಪೌರ್ವಾತ್ಯ ದೇಶಗಳಲ್ಲಿಯ ಆದಿಯಿಂದಲೂ ಬಹು ಪತ್ನಿ ತ್ವಕ್ಕೆ ಅನುಮತಿಯುಂಟು. ಕೆಲವು ಸನ್ನಿ ವೇಶಗಳಲ್ಲಿ ರಾಜಕೀಯ ಕಾರಣಗಳ ದೆಸೆಯಿಂದಲೂ ಬಹು ಪತ್ನಿತ್ವಕ್ಕೆ ಅವಕಾಶ ಕೊಡಬೇಕಾ ಗುತ್ತದೆ. ಮೋಜಸಿನ (Moses) ಕಾಲಕ್ಕೆ ಮುಂಚೆ ಬಹು ಪತ್ನಿತ್ವವು ಆಚರಣೆಯಲ್ಲಿದ್ದಿತು; ಧೋಪಿಯನರು (Thracians), ಲಿಡಿಯನರು (Lydians) ಮುಂತಾದವರಲ್ಲಿಯೂ ಅದು ರೂಢಿಯಲ್ಲಿದ್ದಿತು ; ಪಾರ್ಸಿ ಯವರಲ್ಲಂತು, ಹೆಚ್ಚು ಮಂದಿ ಪತ್ನಿಯರಿರಬೇಕಾದುದು ಮತ ಧರ್ಮ ವಾಗಿಯೇ ಪರಿಣಮಿಸಿದ್ದಿತು. ಬಹು ಕಾಲದ ಹಿಂದೆ, ನಾಗರಿಕರಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಅಧಿನಿಯನರಲ್ಲಿ (Athenians) ಬಹು ಪತ್ನಿ ತ್ವವು ರೂಢಿಯಲ್ಲಿದ್ದುದಲ್ಲದೆ, ಹೆಂಗಸರು ಇತರ ಆಸ್ತಿಯಂತೆ ಸರಿ ಗಣಿಸಲ್ಪಡುತ್ತಿದ್ದು, ಮೃತ ಶಾಸನ ಪತ್ರಗಳಲ್ಲಿ ಇತರ ಸ್ವತ್ತಿನಂತೆಯೇ ಪತ್ನಿಯರೂ ಹಂಚಿಕೆಯಾಗಬೇಕಾದ ಕ್ರಮವು ಉಲ್ಲೇಖವಾಗುವ ಪದ್ಧತಿ ಯಿದ್ದಿತು. ಹೀಗೆಯೇ, ಹಿಂದಣ ಕಾಲದಲ್ಲಿದ್ದ ನಾಗರಿಕರಾದ ರೋಮನ (Romans)ರಲ್ಲಿಯ ಬಹು ಪತ್ನಿತ್ವವು ಚಿರ ಕಾಲ ರೂಢಿಯಲ್ಲಿದ್ದಿತು. ರೋಮನ್ ಚಕ್ರಾಧಿಪತ್ಯದಲ್ಲಿ ಕೈಸ್ತರ ಸ್ಥಿತಿಯೂ ಹೀಗೆಯೆ, ಮಹ ಮೃದನ ಕಾಲದಲ್ಲಿ ಬಹುಪತ್ನಿತ್ವವು ಎಲ್ಲೆಡೆಗಳಲ್ಲಿಯೂ ಆಚರಣೆಯ ಲ್ಲಿದ್ದುದರಿಂದಲೂ ಅನಿವಾರ್ಯವಾದ ಇತರ ಕೆಲವು ಕಾರಣಗಳ ದೆಸೆ