ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು CL೧ ಯಿಂದಲೂ ಮಹಮ್ಮದನು ಇಸ್ಲಾಂ ಮತದಲ್ಲಿ ಬಹು ಪತ್ನಿತ್ವಕ್ಕೆ ಅವ ಕಾಶ ಕೊಡಬೇಕಾಯಿತು. ಆದರೆ ಒಬ್ಬ ಮನುಷ್ಯನಿಗೆ ಏಕ ಕಾಲದಲ್ಲಿ ಕ್ಸ್‌ಪ್ರವಾದ ಸಂಖ್ಯೆಗಿಂತಲೂ ಹೆಚ್ಚು ಮಂದಿ ಪತ್ನಿಯರಿರಕೂಡದೆಂದು ಅವನು ವಿಧಾಯಕ ಮಾಡಿದುದಲ್ಲದೆ, ಸಮಾಜದಲ್ಲಿ ಸ್ತ್ರೀಯರಿಗೆ ಘನತೆ ಗೌರವಗಳುಂಟಾಗುವಂತೆ ತಕ್ಕ ಏರ್ಪಾಟುಗಳನ್ನು ಮಾಡಿ ವಿವಾಹದ ಕಟ್ಟುಪಾಡುಗಳನ್ನು ಮೇಲಣ ಹಂತಕ್ಕೆ ಏರಿಸಿ ಪರಿಷ್ಕರಿಸಿದನು. ಬಹು ಪತ್ನಿತ್ವದಲ್ಲಿ ಈಚೆಗೆ ಅನಾದರವು ಹುಟ್ಟಿರುವುದು ಶುಭ ಸೂಚಕ ವಾಗಿದೆ. ಸುಳ್ಳು ಹೇಳುವುದು, ಮೋಸ ಮಾಡುವುದು, ಇತರರ ಸ್ವತ್ತನ್ನು ಅಪಹರಿಸುವುದು, ಮದ್ಯಪಾನ ಮಾಡುವುದು, ದೂತವಾಡುವುದು - ಇವೇ ಮುಂತಾದ ದುಷ್ಕರ್ಮಗಳನ್ನು ಪರಿತ್ಯಜಿಸ ನಿಷಿದ್ಧ ಕರ್ಮಗಳು ಬೇಕೆಂಬುದು ಮುಸಲ್ಮಾನ ಧರ್ಮಶಾಸ್ತ್ರದ ಆದೇಶ. ಯಾವ ಕರ್ಮಗಳಿಂದ ಪರಹಿಂಸೆಯುಂಟಾಗುವುದೋ ಅವುಗಳೆಲ್ಲವೂ ತ್ಯಾಜ್ಯವೆಂಬುದು ಮಹಮ್ಮದನ ಕಟ್ಟಪ್ಪಣೆ, ಮದ್ಯ ಪಾನ, ದೂತ ಮುಂತಾದ ದುರ್ವ್ಯಸನಗಳಿಂದ ಜನರು ಈಗಲೂ ದುರ್ದಸೆಯನ್ನು ಹೊಂದುತ್ತಿದ್ದಾರೆ. ಮದ್ಯಪಾನ ನಿರೋಧಕ್ಕಾಗಿ ಪಾಶ್ಚಾತ್ಯ ದೇಶಗಳಲ್ಲಿಯೂ ಈಗ ಪ್ರಬಲವಾಗಿ ಚಳವಳವು ನಡೆಯು ತಿದೆ. ದೂತವಾದರೆ, ಕುದುರೆಯು ಜೂಜು ಮುಂತಾದ ರೂಪ ಗಳಲ್ಲಿ ಸಮಾಜದ ರಕ್ತವನ್ನೇ ಹೀರುತ್ತಿದೆ. ಇಸ್ಲಾಂ ಮತದ ಮೇರೆಗೆ ನಿಷಿದ್ಧ ಕರ್ಮಗಳೆಂದೇ ರ್ಪಟ್ಟಿರುವವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಸೂಚಿಸಿದೆ; ಉಳಿದವುಗಳನ್ನು ಸ್ಥಳ ಸಂಕೋಚದಿಂದ ಇಲ್ಲಿ ತಿಳಿಸುವಂತಿಲ್ಲ. ಇಸ್ಲಾಂ ಮತಾನುಯಾಯಿಗಳು ಈ ಮೊದಲೇ ತಿಳಿಸಿರುವ ತತ್ಯ, ಗಳಿಗನುಸಾರವಾಗಿ ವರ್ತಿಸಬೇಕಲ್ಲದೆ ಇತರ ಕೆಲವು ಸತ್ಕರ್ಮಗಳನ್ನೂ ಆಚರಿಸಬೇಕೆಂಬುದು ಖುರಾನಿನ ಆದೇಶ. ಇಸ್ಲಾಂ ಸತ್ಕರ್ಮಗಳು ಎಂದರೆ ಭಗವಂತನ ಆದೇಶ ವಾಕ್ಯಗಳಲ್ಲಿ ಗೌರವ ವನ್ನಿಟ್ಟು, ಅವನಿಂದ ಸೃಷ್ಟಿಯಾಗಿರುವ ಪ್ರಾಣಿ ಗಳಲ್ಲಿ ಮರುಕದಿಂದಿರುವುದು ಎಂಧು ಮಹಮ್ಮದನು ಅರ್ಥ ಹೇಳಿದ್ದಾನೆ.