ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ಪೈಗಂಬರ ಮಹಮ್ಮದನು ಮನೋಹರವಾದ ಈ ಅರ್ಥ ವಿವರಣೆಗನುಗುಣವಾದ ಸತ್ಕರ್ಮಗಳೇ ಇಸ್ಲಾಂ ಮತದಲ್ಲಿ ವಿಧಾಯಕವಾಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಸೂಚಿಸಲಾಗುವುದು : ಪ್ರಾರ್ಥನೆ-ಭಗವಂತನನ್ನು ನಿರ್ಮಲವಾದ ಮನಸ್ಸಿನಿಂದ ಧ್ಯಾನಿಸುವುದು ಮೊಟ್ಟ ಮೊದಲನೆಯ ಕರ್ತವ್ಯ. ಪ್ರತಿಯೊಂದು ವಸ್ತುವನ್ನೂ ಪರಿಷ್ಕರಣ ಮಾಡುವ ಸಾಧನವೊಂದುಂಟು ; ಮನಸ್ಸನ್ನು ಪರಿಷ್ಕರಣ ಮಾಡುವ ಅಂತಹ ಸಾಧನವು ಕೃತಜ್ಞತೆಯಿಂದ ನಡೆಯು ಸುವ ಭಗವತ್ಪಾರ್ಥನೆ ಎಂಬುದು ಮಹಮ್ಮದನ ಉಪದೇಶ. ಮನಶುದ್ಧಿಯಿಲ್ಲದೆ ಮಾಡುವ ಪ್ರಾರ್ಥನೆಗೆ ಭಗವಂತನು ಕಿವಿಗೊಡ ನೆಂಬುದೂ, ತ್ರಿಕರಣ ಶುದ್ದಿಯಿಲ್ಲದವನ ಧ್ಯಾನವು ನಿರರ್ಥಕವೆಂಬುದೂ, ಯಾರು ಭಗವಂತನನ್ನು ಕಾಣಲಿಚ್ಛಿಸುವರೋ ಅವರನ್ನು ಭಗವಂತನೂ ಕಾಣಲಿಚ್ಛಿಸುವನು ಎಂಬುದೂ ಮಹಮ್ಮದನ ದಿವ್ಯ ವಾಕ್ಕುಗಳು. * ಭಗವಂತನು ನಿನ್ನೆದುರಿಗಿದ್ದಂತೆ ಭಾವಿಸಿಕೊಂಡು ಧ್ಯಾನಮಾಡು ; ಏಕೆಂದರೆ, ನೀನು ಅವನನ್ನು ಕಾಣದೆ ಇದ್ದರೂ, ಅವನು ಸರ್ವದಾ ನಿನ್ನನ್ನು ನೋಡುತ್ತಲೇ ಇರುವನು' ಎಂದು ಬೋಧಿಸಿ ಮಹ ಮೃದನು ಭಗವಂತನನ್ನು ಏಕಾಗ್ರ ಚಿತ್ರದಿಂದ ಧ್ಯಾನಿಸಬೇಕೆಂಬುದನ್ನು ಸೂಚಿಸಿದ್ದಾನೆ. ಉಪವಾಸ-ಉಪವಾಸವು ಭಾರತೀಯರಿಗೆ ಹೊಸದಲ್ಲ ; ಏಕಾ ದಶಿಯೇ ಮುಂತಾದ ವ್ರತ ದಿನಗಳಲ್ಲಿ ಉಪವಾಸ ಮಾಡಬೇಕೆಂಬ ನಿಯಮವನ್ನು ಈಗಲೂ ಅನೇಕರು ಆಚರಣೆಯಲ್ಲಿಟ್ಟಿದ್ದಾರೆ. ಇಸ್ಲಾಂ ಮತದಲ್ಲಿಯೂ ಕೆಲವು ಕ್ರೈಸ್ತ ದಿನಗಳಲ್ಲಿ ಉಪವಾಸ ಮಾಡಬೇಕೆಂದು ವಿಧಾಯಕವಾಗಿದೆ. ಉಪವಾಸಮಾಡುವುದರಿಂದ ಎರಡು ವಿಧದ ಫಲ ವುಂಟು : ಮೊದಲನೆಯದು, ಆರೋಗ್ಯ ಶಾಸ್ತ್ರ ರೀತ್ಯಾ ದೇಹ ಶುದ್ದಿಗೆ ಸಾಧಕವಾಗುವುದು ; ಎರಡನೆಯದು, ಭಕ್ತಿಯಿಂದಲೂ ಶುದ್ಧ ಮನಸ್ಸಿ ನಿಂದಲೂ ಭಗವಂತನನ್ನು ಧ್ಯಾನಿಸುವುದಕ್ಕೆ ಸಹಾಯಕವಾಗುವುದು. ಉಪವಾಸ ವ್ರತವನ್ನು ಆಚರಿಸುವ ಕಾಲದಲ್ಲಿ ದುರ್ಭಾಷೆಯನ್ನು ಬಿಡ ಬೇಕೆಂದೂ, ಸುಳ್ಳು ಹೇಳುವುದನ್ನೂ ಮನಶ್ಯಾಂಚಲ್ಯವನ್ನೂ ಬಿಡದೆ