ಪುಟ:ಪೈಗಂಬರ ಮಹಮ್ಮದನು.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೬೩ ಕೇವಲ ಆಹಾರ ಪಾನೀಯಗಳನ್ನು ಬಿಟ್ಟು ಕುಳಿತಿರುವವನ ಉಪವಾಸ ವುತಕ್ಕೆ ಭಗವಂತನಲ್ಲಿ ಲೇಶವೂ ಬೆಲೆಯಿಲ್ಲವೆಂದೂ ಮಹಮ್ಮದನು ಬೋಧಿಸಿದ್ದಾನೆ. ದೀನಾನಾಥರಿಗೆ ಸಹಾಯ,-ಪರೋಪಕಾರಕ್ಕಿಂತಲೂ ಹೆಚ್ಚಿನ ಪುಣ್ಯ ಸಾಧನೆಯು ಮತ್ತೊಂದಿಲ್ಲವೆಂಬ ತತ್ತ್ವವನ್ನು ಪ್ರತಿಪಾಲಿಸಿದ ಪುಣ್ಯಾತ್ಮನು ಮಹಮ್ಮದನು. ಪ್ರತಿಯೊಬ್ಬನೂ ತನ್ನ ಕೈಯ ೮ಾದಷ್ಟು ಮಟ್ಟಿಗೆ ದೀನಾನಾಥರಿಗೆ ಸಹಾಯಮಾಡಬೇಕೆಂದು ವಿಧಿಸಿ, ಇದರಿಂದ ಮುಂದಣ ವಿಪತ್ತುಗಳು ಪರಿಹಾರವಾಗುತ್ತವೆಂದೂ, ಅನಾಥ ರಾದ ಶಿಶುಗಳನ್ನು ಪಾಲಿಸುವುದರಿಂದ ಪರಮಾತ್ಮನಿಗೆ ವಿಶೇಷ ತೃಪ್ತಿ ಯುಂಟಾಗುವುದೆಂದೂ ಅವನು ಉಪದೇಶಿಸಿದ್ದಾನೆ. ಬಂಧುಗಳ ಪೋಷಣೆ-ಪತ್ನಿ ಪುತ್ತಾದಿಗಳ ಪೋಷಣೆಯ, ಗುರು ಹಿರಿಯರ ಸೇವೆಯ, ಬಂಧು ಮಿತ್ರರ ಆದರಣೆಯ ಧರ್ಮ ಕಾರ್ಯಗಳೆಂದು ಮಹಮ್ಮದನು ಉಪದೇಶಿಸಿದ್ದಾನೆ. “ತಂದೆಯು ಸುಪ್ರೀತನಾದರೆ ಭಗವಂತನೂ ಪ್ರಸನ್ನನಾಗುವನು.' 'ಸ್ವರ್ಗ ಲೋಕವನ್ನು ಸೇರಲು ನಿನಗೆ ಇಚ್ಚೆಯಿದ್ದರೆ, ಮಾತಾ ಪಿತೃಗಳನ್ನು ಮೊದಲು ಸುಪ್ರೀತರನ್ನಾಗಿ ಮಾಡು. ಮಾತಾ ಪಿತೃಗಳು ನಿನಗೆ ಅಪಕಾರವನ್ನೇ ಮಾಡಿದ್ದರೂ ನೀನು ಅವರಿಗೆ ಉಪಕಾರವನ್ನೇ ಮಾಡಬೇಕು. ” “ ಅನಾಥರ ಪೋಷಣೆಗೆ ಒಂದು ಫಲವಾದರೆ ಬಂಧುಗಳ ಪೋಷಣೆಗೆ ಎರಡು ಫಲಗಳು.-ಇವೇ ಮಹಮ್ಮದನ ಸದ್ಯೋಧನೆಗಳು. ಒಮ್ಮೆ, ಮಹಮ್ಮದನ ಶಿಷ್ಯನೊಬ್ಬನು ತಾನು ಒಂದು ಪಾಪ ಕರ್ಮವನ್ನು ಮಾಡಿರುವುದಾಗಿ ಅವನಿಗೆ ತಿಳಿಸಿ ಅದಕ್ಕೆ ಪ್ರಾಯಶ್ಚಿತ್ತವೇನೆಂದು ಕೇಳಿದನು. ಅದಕ್ಕೆ ಮಹಮ್ಮದನು, ನಿನಗೆ ತಾಯಿ ಇದ್ದಾಳೆಯೇ ?” ಎಂದು ಅವನನ್ನು ಕೇಳಿದನು. ಶಿಷ್ಯನು, * ನನಗೆ ತಾಯಿ ಇಲ್ಲ, ಚಿಕ್ಕಮ್ಮನಿದ್ದಾಳೆ ಎಂದು ಉತ್ತರ ಹೇಳಲು, ಮಹಮ್ಮದನು, “ ಹಾಗಾದರೆ ಮನೆಗೆ ಹೋಗಿ ನಿಮ್ಮ ಚಿಕ್ಕಮ್ಮ ನನ್ನು ಭಕ್ತಿಯಿಂದ ಸೇವಿಸು. ಆಕೆ ಸಂತುಷ್ಟಳಾಗಿ ಸುಪ್ರೀತಳಾದರೆ