ಪುಟ:ಪೈಗಂಬರ ಮಹಮ್ಮದನು.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧LA ವುದು. ಭಗವಂತನ ಕೃಪೆಯಿಂದ ಬಂದ ಸಾಮರ್ಥ್ಯವೆಲ್ಲಿ ? ಮನುಷ್ಯನ ಅಧ್ಯವಸಾಯ ಬಲದಿಂದ ಬಂದ ಸಾಮರ್ಥವೆಲ್ಲಿ ? ಹುಟ್ಟುಗುಣ ಕ್ಕಿಂತಲೂ ಕಟ್ಟುಗುಣವು ಕೀಳೆಂಬುದು ಎಲ್ಲರಿಗೂ ತಿಳಿದ ವಿಷಯ. ಮಹಮ್ಮದನು ತಾನು ಸ್ವತಃ ವಿದ್ಯಾವಂತನಲ್ಲದಿದ್ದರೂ, ಕೇವಲ ವಿದ್ಯಾ ಪಕ್ಷಪಾತಿಯಾಗಿದ್ದನು. ಮನುಷ್ಯನ ಸಮಸ್ತ ಕಾರ್ಯ ಗಳನ್ನೂ ಬರೆದಿಡುವುದಕ್ಕೆ ಲೇಖನಿಯೇ ಸಾಧಕವಾದುದರಿಂದ, ವಿದ್ಯೆ ಯನ್ನು ಎಷ್ಟು ಕೊಂಡಾಡಿದರೂ ಸಾಲದೆಂಬುದು ಮಹಮ್ಮದನ ಭಾವನೆ. ಧರ್ಮ ರಕ್ಷಣೆಗಾಗಿ ದೇಹವನ್ನು ಬಿಡುವವನ ರಕ್ತಕ್ಕಿಂತಲೂ ಪಂಡಿತನ ಬರೆವಣಿಗೆಗೆ ಉಪಯೋಗವಾಗುವ ಮಸಿಯು ಶ್ರೇಷ್ಠವಾದುದೆಂದೂ, ವಿದ್ಯಾಭ್ಯಾಸವು ಸ್ತ್ರೀ ಪುರುಷರಿಬ್ಬರಿಗೂ ಅತ್ಯಾವಶ್ಯಕವೆಂದೂ, ವಿದ್ಯಾ ಭ್ಯಾಸಕ್ಕಾಗಿ ಪರಸ್ಥಳಗಳಿಗೆ ಹೋದವನಿಗೆ ಮಹಾ ಯಾತ್ರೆ ಮಾಡಿದಷ್ಟು ಪುಣ್ಯವೆಂದೂ ಮಹಮ್ಮದನು ಬೋಧಿಸಿದನು. ಒಮ್ಮೆ ಮಹಮ್ಮದನು, * ಚೀಣಾ ದೇಶದಂತೆ ಕೇವಲ ದೂರದಲ್ಲಿರುವ ದೇಶಗಳಲ್ಲಿ ವಿದ್ಯೆಯು ದೊರೆತರೂ ಸರಿ, ಅಲ್ಲಿಗೂ ಹೋಗಿ ನಮ್ಮಲ್ಲಿಲ್ಲದ ಹೊಸ ವಿಷಯಗಳನ್ನು ಕಲಿತು ಬನ್ನಿರಿ” ಎಂದು ತನ್ನ ವರಿಗೆ ಹೇಳಿದನಂತೆ. ಅವನ ಬೋಧನೆಯ ನ್ನನುಸರಿಸಿ ಮೌಲ್ಯಗಳೂ ಉಲಮಾಗಳೂ ದೇಶ ದೇಶಗಳಿಗೂ ಹೋಗಿ ವಿದ್ಯಾರ್ಜನೆ ಮಾಡಿಕೊಂಡು ಬಂದು ಕೆಲವು ಶತಮಾನಗಳಲ್ಲಿಯೇ ಪ್ರಪಂಚ ನನ್ನೆ ಬೆರಗು ಮಾಡುವಷ್ಟು ಮಟ್ಟಿಗೆ ಗ್ರಂಥ ರಚನೆ ಮಾಡಿ, ಸಾಹಿತ್ಯ ವನ್ನೂ ವಿಜ್ಞಾನವನ್ನೂ ಅಭಿವೃದ್ಧಿಗೊಳಿಸಿದರು. ಆದರೆ, ಅವರು ತಮ್ಮ ಅಧ್ಯವಸಾಯವನ್ನು ಹಾಗೆಯೇ ಮುಂದುವರಿಸಲಿಲ್ಲ. ಗರ್ವವೂ ಸಂಕು ಚಿತ ಮನೋಭಾವಗಳೂ ಅವರಲ್ಲಿ ಮೊಳೆತು ವೃದ್ಧಿಗೊಂಡುದರಿಂದ ಅವರ ಪ್ರಯತ್ನಗಳು ಹಿಂದೆ ಬಿದ್ದುವು. ಸಾಹಿತ್ಯ, ಇತಿಹಾಸ, ರಸಾಯನ ಶಾಸ್ತ್ರ, ಭೌತಿಕ ಶಾಸ್ತ್ರ, ಪ್ರಾಣಿ ಶಾಸ್ತ್ರ, ವೈದ್ಯ ಶಾಸ್ತ್ರ, ಶಿಲ್ಪ ಶಾಸ್ತ್ರ, ಭೂಗೋಳ ಶಾಸ್ತ್ರ, ಖಗೋಳ ಶಾಸ್ತ್ರ-ಇವೇ ಮುಂತಾದುವುಗಳ ಅಭಿವೃದ್ಧಿಗಾಗಿ ಮಹಮ್ಮದೀಯರು ಹಿಂದೆ ನಡೆಯಿಸಿದ ಪುಯತ್ನಗಳೂ ಅವರು ಸಾಧಿಸಿದ ಸತ್ಯಗಳೂ ಚರಿತ್ತಾಂಶಗಳಾಗಿವೆ. ಶಿಲ್ಪ ಶಾಸ್ತ್ರ .ದಲ್ಲಂತು, ಅವರು ಕಟ್ಟಿಸಿದ ಕಟ್ಟಡಗಳು ಇಂದಿಗೂ, ಎಂದೆಂದಿಗೂ