ಪುಟ:ಪೈಗಂಬರ ಮಹಮ್ಮದನು.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧LL ಪೈಗಂಬರ ಮಹಮ್ಮದನು ಪ್ರಪಂಚವನ್ನೇ ತಲೆದೂಗಿಸತಕ್ಕುವಾಗಿವೆ. ಆಗ್ರಾ ನಗರದಲ್ಲಿರುವ ತಾಜಾ ಮಹಲು ಒಂದೇ ಅವರ ಕೀರ್ತಿಯನ್ನು ಬೆಳಗಿಸಲು ಸಾಕು. ಇವೆಲ್ಲ ಸತ್ಸಲಗಳಿಗೂ ಮಹಮ್ಮದನ ಉಪದೇಶವೇ ಕಾರಣ. “ ಶ್ರದ್ದೆಯಿಂದ ಒಂದು ಗಂಟೆಯ ಕಾಲ ಭಗವಂತನ ಸೃಷ್ಟಿ ವೈಚಿತ್ರವನ್ನು ಪರಿಶೀಲಿಸು ವುದು ಎಪ್ಪತ್ತು ವರುಷಗಳ ಕಾಲ ಪ್ರಾರ್ಥನೆಯನ್ನು ಓದುವುದಕ್ಕಿಂತ ಶ್ರೇಷ್ಠವಾದುದು. " ಪಂಡಿತರನ್ನು ಯಾವನು ಗೌರವಿಸುವನೋ ಅವನು ನನ್ನನ್ನೆ ಗೌರವಿಸಿದಂತಾಗುತ್ತದೆ. " ವಿದ್ಯಾರ್ಜನೆಗಾಗಿ ಸಂಚಾರ ಮಾಡುವವನಿಗೆ ಭಗವಂತನು ಪರ ಲೋಕದಲ್ಲಿ ಸೌಖ್ಯವನ್ನು ಕರುಣಿಸುತ್ತಾನೆ. (ವಿದ್ಯೆಗೂ ವಿದ್ಯಾವಂತರಿಗೂ ಪ್ರೋತ್ಸಾಹ ಕೊಡು ವಾತನು ಸ್ವರ್ಗದಲ್ಲಿ ಸದ್ದತಿಯನ್ನು ಪಡೆಯುವನು.” ( ಜ್ಞಾನವನ್ನು ಸಂಪಾದಿಸಿರಿ; ಜ್ಞಾನಾರ್ಜನೆಯ ಒಂದು ಪುಣ್ಯ ಕರ್ಮ, ಜ್ಞಾನದ ವಿಷಯವನ್ನು ಪ್ರಸ್ತಾವಿಸುವವನು ಭಗವಂತನನ್ನು ಕೊಂಡಾಡಿ ದಂತೆಯೇ ಸರಿ. ವಿದ್ಯೆ ಕಲಿಯುವವನು ಭಗವಂತನನ್ನು ಸೇವಿಸಿ ದಂತೆಯೇ ಪುಣ್ಯವನ್ನು ಸಂಪಾದಿಸುವನು. ವಿದ್ಯಾ ದಾನ ಮಾಡಿದವನು ಭಗವತೇವೆಯ ರೂಪದಲ್ಲಿ ಪುಣ್ಯದ ರಾಶಿಯನ್ನೇ ಕಟ್ಟಿಕೊಳ್ಳುವನು. ವಿದ್ಯೆಯಿಂದ ಮುಕ್ತಾಯುಕ್ತ ವಿವೇಚನೆ ದೊರೆಯುತ್ತದೆ. ವಿದ್ಯೆಯಿಂದ ಸ್ವರ್ಗ ಲೋಕದ ದಾರಿಯು ಗೋಚರವಾಗುತ್ತದೆ. ಮರು ಭೂಮಿ ಯಲ್ಲಿಯೂ ವಿದ್ಯೆಯೇ ನಮ್ಮ ಮಿತ್ರನಂತಿರುವುದು. ಏಕಾಂತದಲ್ಲಿ ವಿದ್ಯೆಯೇ ಸಂಗಡಿಗನಂತೆ ನಮಗೆ ನೆರವಾಗುತ್ತದೆ. ಮಿತ್ರವಿಯೋಗ ಕಾಲದಲ್ಲಿ ವಿದ್ಯೆಯೇ ನಮ್ಮನ್ನು ಸಂತೈಸಿ ದುಃಖ ಶಮನಮಾಡುವ ಸದ್ಭಂಧುವು. ವಿದ್ಯೆಯೇ ನಮ್ಮ ಸುಖ ಸೋಪಾನ ; ವಿದ್ಯೆಯೆ ದುಃಖ ಕಾಲದಲ್ಲಿ ನಮ್ಮ ಮುಖ್ಯಾವಲಂಬನ ; ವಿದ್ಯೆಯೇ ಮಿತ್ರ ಗೋಷ್ಠಿಯಲ್ಲಿ ನಮ್ಮನ್ನು ಬೆಳಗಿಸುವ ಸ್ಪುರದ್ರೂಪ; ವಿದ್ಯೆಯೇ ಶತ್ರುಗಳನ್ನು ನಿಗ್ರಹಿ ಸುವ ನಮ್ಮ ಬಾಹು ಬಲ; ವಿದ್ಯಾವಂತನಾದ ಭಗವದ್ಭಕ್ತನು ಇಹ ಲೋಕದಲ್ಲಿ ರಾಜ ಯೋಗ್ಯವಾದ ಮನ್ನಣೆಯನ್ನು ಪಡೆದು, ಪರ ಲೋಕದಲ್ಲಿ ಸೌಖ್ಯ ಪರಂಪರೆಗಳನ್ನನುಭವಿಸುತ್ತಾನೆ.-ಇವೇ ಮೊದ ಲಾದ ಮಹಮ್ಮದನ ಉಪದೇಶ ವಾಕ್ಯಗಳು ಎಷ್ಟು ಸ್ಫೂರ್ತಿ ದಾಯಕ