ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XVI, ಪರಿಸಮಾಪ್ತಿ ೧೬೯ ಮತ್ಯಕ್ಕೆ ಅವಕಾಶವೇ ಇರಲಿಲ್ಲ. ಇಂತಹ ದುಸ್ಥಿತಿಯಲ್ಲಿದ್ದವರನ್ನು ಮಹಮ್ಮದನು ಇಪ್ಪತ್ತಮೂರು ವರುಷಗಳ ಅಲ್ಪಾವಧಿಯಲ್ಲಿ ಪ್ರಬಲ ಜನಾಂಗವನ್ನಾಗಿ ಪರಿವರ್ತನಗೊಳಿಸಿದನು. ಮಹಮ್ಮದನ ಶಿಕ್ಷಣದ ಪ್ರಭಾವದಿಂದ ಅವರು ಲೌಕಿಕ ಪಾರಲೌಕಿಕ ವಿಚಾರಗಳೆರಡರಲ್ಲಿಯ ಪ್ರವೀಣರಾದರು. ಕಾಲ ಕ್ರಮದಲ್ಲಿ ಅವರಿಗೆ ರಾಜ್ಯಗಳ ಮೇಲೆ ರಾಜ್ಯ ಗಳು ಸ್ವಾಧೀನವಾದುವು. ೨. ಲೋಕ ಸಂಗ್ರಹ ಬುದ್ದಿ-ಅರಬ್ಬಿ ದೇಶವೊಂದರ ಯೋಗ ಕ್ಷೇಮಕ್ಕೆ ಮಾತ್ರ ಸಾಧಕವಾಗುವಂತೆ ನೋಡಿಕೊಳ್ಳುವುದು ಮಹಮ್ಮದನ ಸಂಕಲ್ಪವಾಗಿರಲಿಲ್ಲ. ಹಾಗಿದ್ದಲ್ಲಿ, ಅವನೂ ಒಬ್ಬ ಸ್ವದೇಶಾಭಿಮಾನಿಯೆನಿಸಿಕೊಳ್ಳುತ್ತಿದ್ದನೇ ಹೊರತು, ಈಗಿರುವಷ್ಟು ಮಹತ್ತನ್ನು ಪಡೆಯುತ್ತಿರಲಿಲ್ಲ; ಒಟ್ಟು ಮನುಷ್ಯತ್ವದ ಮಂಗಳಾಕಾಂಕ್ಷೆ ಯನ್ನೇ ತನ್ನ ಉದ್ದೇಶವಾಗಿಟ್ಟುಕೊಂಡು ತದನುಗುಣವಾಗಿ ಮತ ಸ್ಥಾಪನೆಯ ಮಹತ್ಕಾರವನ್ನು ಕೈಕೊಂಡನು. ಇತರ ಮತದವರು ಖುರಾನಿನ ಕೆಲವು ಭಾಗಗಳನ್ನು ಒಪ್ಪದೆ ಇರಬಹುದು; ಆದರೂ, ಒಟ್ಟಿ ನಲ್ಲಿ ಅದನ್ನು ಎಲ್ಲರೂ ಅಭಿನಂದಿಸಲೇ ಬೇಕು. ಭಗವದ್ಗೀತೆಯು ಜಗದಲ್ಲಿ ನಂದವಾದ ಗ್ರಂಥವೆನಿಸಿರುವುದಕ್ಕೆ ಗೀತೋಪದೇಶವು ಲೋಕೋ ದ್ವಾರಕ ಬುದ್ಧಿಯಿಂದ ನಡೆದುದೇ ಮುಖ್ಯ ಕಾರಣ. ೩, ಶಾ ಫ್ಯವಾದ ಸಮದರ್ಶಿತ್ವ-ಗುಲಾಮರನ್ನು ಆರಿಸಿ ಸ್ತ್ರೀಯರ ಸ್ಥಿತಿಯನ್ನು ಉತ್ತಮಗೊಳಿಸಿದ ಪುಣ್ಯವು ಮಹಮ್ಮದನಿಗೆ ಸೇರಿತು. ದಾಸ್ಯದಿಂದ ನಿವೃತ್ತಿಯಾದವರೂ ಇತರರಂತೆಯೇ ಹಕ್ಕು ಬಾಧ್ಯತೆಗಳನ್ನ ನುಭವಿಸುವಂತೆ ಮಹಮ್ಮದನು ಏರ್ಪಡಿಸಿದುದು ಸಾಮಾನ್ಯ ವಿಷಯವಲ್ಲ. ಗುಲಾಮನಾಗಿದ್ದ ಜೈದನಿಗೆ ಮಹಮ್ಮದನು ಸ್ವಾತಂತ್ರ ದಾನ ಮಾಡಿದಷ್ಟಕ್ಕೆ ತೃಪ್ತನಾಗದೆ ಜೈದನನ್ನು ಕೊರೆಷ್ ಮನೆತನದವರ ಮೇಲೆ ಅಧಿಕಾರಕ್ಕೆ ನೇಮಿಸಿ, ತನ್ಮೂಲಕ ತನ್ನ ಸಮ ದರ್ಶಿತ್ವವನ್ನು ವ್ಯಕ್ತಗೊಳಿಸಿದನು. ಒಂದು ಬುಡಕಟ್ಟಿನವರಿಗಿಂತ ಮತ್ತೊಂದು ಬುಡಕಟ್ಟಿನವರಾಗಲಿ, ಒಂದು ಜನಾಂಗದವರಿಗಿಂತ ಎಂದು ಜನಾಂಗದವರಾಗಲಿ, ಯಾವ ರೀತಿಯಲ್ಲಿಯ ಹೆಚ್ಚಲ್ಲ.