ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮ ಪೈಗಂಬರ ಮಹಮ್ಮದನು ಹದಿನಾರನೆಯ ಅಧ್ಯಾಯ ಪರಿಸಮಾಪ್ತಿ ಮಹಮ್ಮದನ ಜೀವನ ಚರಿತ್ರೆಯನ್ನೂ ಅವನು ಬೋಧಿಸಿದ ಇಸ್ಲಾಂ ಮತದ ಮುಖ್ಯ ತತ್ವಗಳನ್ನೂ ಸಂಕ್ಷೇಪವಾಗಿ ತಿಳಿಸಿದು ದಾಯಿತು. ಮಹಮ್ಮದನು ಸಾಧಿಸಿದ ಮಹ ಕರ್ಮ ಯೋಗಿ ತಾರ್ಯಗಳನ್ನೂ , ಅವನು ಅನುಗ್ರಹಿಸಿರುವ ಉಪ ಯಾದ ಸುಧಾರಕ ದೇಶ ವಾಕ್ಯಗಳ ಸ್ವಭಾವವನ್ನೂ ಪರಿಶೀಲಿಸಿದರೆ, ಅವನು ಕರ್ಮ ಯೋಗಿಯಾದ ಸಮಾಜ ಸುಧಾರಕ ನೆಂದು ಧಾರಾಳವಾಗಿ ಹೇಳಬಹುದು. ಏಕೆಂದರೆ, “ಮಾನವನು ಸಂತತವೂ ಪ್ರಯತ್ನ ಮಾಡುತ್ತಲೇ ಇರಬೇಕು. ಕೆಲಸ ಮಾಡುವುದು ಅವನ ಭಾರ, ಅದಕ್ಕೆ ಫಲವು ಲಭಿಸುವುದು ಭಗವಂತನ ಅಧೀನ ಎಂದು ಹೇಳುತ್ತ, ಅದಕ್ಕನುಗುಣವಾಗಿ ವರ್ತಿಸಿದವನು ಕರ್ಮಯೋಗಿ ಯಲ್ಲದೆ ಮತ್ತೇನು ? ಮಹಮ್ಮದನ ಈ ಹೇಳಿಕೆಗೂ, ಭಗವದ್ಗೀತೆಯಲ್ಲಿ ರುವ ಕರ್ಮಣ್ಯವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮ ಫಲ ಹೇತುರ್ಭೂಮರ್ಾ ತೇ ಸಂಗೋSಸ್ತ್ರ, ಕರ್ಮಣಿ || ಎಂಬ ಉಪದೇಶ ಎಷ್ಟು ಹೋಲಿಕೆಯಿರುವುದು ! ಮಹಮ್ಮದನು ಆಚರಣೆಗೆ ತಂದ ಪರಿಷ್ಕರಣ ಕರ್ಮಗಳ ಮುಖ್ಯ ಲಕ್ಷಣಗಳನ್ನು ಕುರಿತು ಕೆಲವು ಸಂಗತಿಗಳನ್ನು ಇಲ್ಲಿ ಹೇಳಲಾಗುವುದು:- ೧. ಪ್ರಯತ್ನ ಸಾಧನೆಯ ಫಲ-ಮಹಮ್ಮದನು ಜನ್ಮ ವೆತ್ತಿದ ಕಾಲದಲ್ಲಿ ಅರಬ್ಬಿಯವರು ಮತಾಚಾರಗಳನ್ನಾಗಲಿ ರಾಜಕೀಯ ವ್ಯವಸ್ಥೆಯನ್ನಾಗಲಿ ಸಾಮಾಜಿಕ ನಿಯಮಗಳನ್ನಾಗಲಿ ಅರಿಯದೆ ಕೇವಲ ಅಜ್ಞಾನಾಂಧಕಾರದಲ್ಲಿ ಮುಳುಗಿ ತತ್ತರಿಸುತ್ತಿದ್ದರು; ಕಲಾಭಿವೃದ್ಧಿಗೂ ಅವರಿಗೂ ಬಹಳ ದೂರವಿದ್ದಿತು. ವಿಜ್ಞಾನ ವಿಚಾರಗಳಲ್ಲಂತು ಅವರು ಬಹಳ ಹಿಂದೆ ಉಳಿದಿದ್ದರು. ಯಾವಾಗ ನೋಡಿದರೂ ಪರಸ್ಪರವಾಗಿ ಹೋರಾಟ ಹೊಡೆದಾಟಗಳಲ್ಲಿಯೇ ಮಗ್ನರಾಗಿದ್ದ ಅಂಥವರಲ್ಲಿ ಐಕ